ಮಂಗಳವಾರ, ಜೂನ್ 28, 2022
28 °C

ಸ್ಟಾರ್ಟ್‌ಅಪ್‌ಗೆ ಉತ್ತೇಜನ ನೀಡಲು ಸುಮೇರು ಇನೋವೇಷನ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ನವೋದ್ಯಮಗಳ ರಾಜಧಾನಿಯಾಗಿ ಹೊರ ಹೊಮ್ಮಿರುವ ಬೆಂಗಳೂರಿನಲ್ಲಿ 2,500ಕ್ಕೂ ಹೆಚ್ಚು ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ‘ಸುಮೇರು ಇನೋವೇಷನ್’ ಆರಂಭಿಸಲಾಗಿದೆ.

ಕ್ಯಾಲಿಫೋರ್ನಿಯಾದ ಬೆರ್ಕ್ಲಿ ವಿಶ್ವವಿದ್ಯಾಲಯ ಮತ್ತು ಸುಮೇರು ವೆಂಚರ್ಸ್ ಸಹಯೋಗದಲ್ಲಿ ಅಸ್ತಿತ್ವಕ್ಕೆ ಬಂದಿರುವ, ‘ಸುಮೇರು ಇನೋವೇಷನ್’ಗೆ ಬೆರ್ಕ್ಲಿ ವಿ.ವಿ. ಮುಖ್ಯ ವಿಜ್ಞಾನಿ ಡಾ. ಇಖಾಲಕ್ ಸಿದ್ಧು ಚಾಲನೆ ನೀಡಿದ್ದಾರೆ.

ಕೃತಕ ಬುದ್ದಿಮತ್ತೆ, ಬ್ಲಾಕ್‌ಚೈನ್, ಬಿಗ್ ಡೆಟಾ ಹಾಗೂ ನಾಲ್ಕನೇ ತಲೆಮಾರಿನ ಕೈಗಾರಿಕಾ ತಂತ್ರಜ್ಞಾನ ಒಳಗೊಂಡ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳಿಗೆ ₹ 7,000 ಕೋಟಿ ಮೊತ್ತದ ಆರ್ಥಿಕ ನೆರವು ಕಲ್ಪಿಸಿ ಹತ್ತು ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ ನಿಗದಿಪಡಿಸಲಾಗಿದೆ. 10 ಸಾವಿರ ಡಿಜಿಟಲ್ ನಾವಿನ್ಯತಾ ಸಂಸ್ಥೆಗಳನ್ನು ಗುರುತಿಸಿ ನೆರವು ನೀಡಲು ಉದ್ದೇಶಿಸಲಾಗಿದೆ.

ಕರ್ನಾಟಕದಲ್ಲಿ ಡಿಜಿಟಲ್ ಪರಿವರ್ತನೆಗೂ ಸಂಸ್ಥೆಯು ಗಮನಾರ್ಹ ಕೊಡುಗೆ ನೀಡಲು ಉದ್ದೇಶಿಸಿದೆ. ಪ್ರತಿಭಾ ಶೋಧ ಕಾರ್ಯಕ್ರಮ ನಡೆಸಿ ಉದ್ಯೋಗ ಪಡೆಯುವಂತೆ ಮಾಡುವ, ಕನಿಷ್ಠ ₹ 20 ಸಾವಿರದಿಂದ ₹ 60 ಸಾವಿರದರೆಗೆ ವೇತನ ಪಡೆಯುವಂತೆ ಯುವ ಜನತೆಯನ್ನು ಸಜ್ಜುಗೊಳಿಸಲು ಸಂಸ್ಥೆ ಶ್ರಮಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು