ಶನಿವಾರ, ಫೆಬ್ರವರಿ 4, 2023
21 °C
ಆ್ಯಪಲ್ ಐಫೋನ್ ತಯಾರಿಸುವ ವಿಸ್ಟ್ರಾನ್ ಇನ್ಫೋಕಾಮ್

ಕೋಲಾರದ ಆ್ಯಪಲ್ ಐಫೋನ್ ಫ್ಯಾಕ್ಟರಿ ಖರೀದಿಸಲು ಮುಂದಾದ ಟಾಟಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಆ್ಯಪಲ್ ಕಂಪನಿಗೆ ಐಫೋನ್‌ ತಯಾರಿಸಿಕೊಡುವ ವಿಸ್ಟ್ರಾನ್ ಕಾರ್ಪ್‌ ಅನ್ನು ಖರೀದಿಸಲು ಟಾಟಾ ಸಮೂಹ ಉತ್ಸಾಹ ತೋರಿದೆ ಎಂದು ವರದಿಗಳು ಹೇಳಿವೆ.

ರಾಜ್ಯದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಘಟಕದ ಖರೀದಿಗೆ ಟಾಟಾ ಆಸಕ್ತಿ ತೋರಿದೆ ಎಂದು ‘ದಿ ಎಕನಾಮಿಕ್ಸ್ ಟೈಮ್ಸ್‘ ಹೇಳಿದೆ.

₹4,000 ರಿಂದ ₹5,000 ಕೋಟಿ ಬೆಲೆಬಾಳುವ ಘಟಕ ಇದಾಗಿದ್ದು, ಆ್ಯಪಲ್ ದೇಶದಲ್ಲಿ ಹೊಂದಿರುವ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ.

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ, ಆ್ಯಪಲ್ ಉತ್ಪಾದನೆಯ ಫ್ಯಾಕ್ಟರಿಯನ್ನು ಖರೀದಿಸುವುದು ಟಾಟಾ ಗುರಿಯಾಗಿದೆ.

ಅದರ ಜತೆಗೆ, ಜಪಾನ್ ಮತ್ತು ಕೊರಿಯಾದ ಬೃಹತ್ ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಕೆಯ ಕಂಪನಿಗಳ ಫ್ಯಾಕ್ಟರಿಯತ್ತಲೂ ಟಾಟಾ ಗಮನ ಹರಿಸಿದೆ.

ಈಗಾಗಲೇ ದೇಶದಲ್ಲಿ ವಿಸ್ಟ್ರಾನ್, ಫಾಕ್ಸ್‌ಕಾನ್ ಮತ್ತು ಪೆಗಟ್ರಾನ್ ಕಂಪನಿಗಳು ಆ್ಯಪಲ್ ಐಫೋನ್ ಉತ್ಪಾದಿಸುತ್ತಿವೆ. ಐಪೋನ್ ಎಸ್‌ಇ, ಐಫೋನ್ 12, ಐಫೋನ್ 13 ಮತ್ತು ಐಫೋನ್ 14 ಮಾದರಿಗಳು ದೇಶದಲ್ಲಿ ತಯಾರಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು