ಮಂಗಳವಾರ, ಏಪ್ರಿಲ್ 20, 2021
24 °C

ಅವಧಿ ವಿಮೆ ಯೋಜನೆ

ಸಂಜಯ್‌ ತಿವಾರಿ Updated:

ಅಕ್ಷರ ಗಾತ್ರ : | |

Prajavani

ಜೀವ ವಿಮೆಯ ‘ಅವಧಿ ಯೋಜನೆ’ಗಳ (term insurance) ಬಗ್ಗೆ ನೀವು ಕೇಳಿದ್ದೀರಾ. ಈ ಯೋಜನೆಗಳು ‘ಜೀವ ವಿಮೆ’ ಒದಗಿಸುವುದರ ಜೊತೆಗೆ, ವಿಮೆಯ ಅವಧಿಯಲ್ಲಿ ವಿಮೆದಾರರಿಗೆ ಯಾವುದೇ ತೊಂದರೆ ಆಗಿರದಿದ್ದಲ್ಲಿ ವಿಮಾ ಅವಧಿ ಮುಗಿದ ನಂತರ ಕಟ್ಟಿದ ಕಂತಿನ ಹಣವನ್ನು ಗ್ರಾಹಕರಿಗೆ ವಾಪಸ್‌ ನೀಡುತ್ತವೆ.

ಇಂಥ ಯೋಜನೆಗಳ ಇನ್ನೊಂದು ಲಾಭ ಏನೆಂದರೆ ಇವುಗಳಿಗೆ ಹೆಚ್ಚುವರಿಯಾಗಿ ಷರತ್ತುಗಳನ್ನು (insurance riders) ಸೇರಿಸುವ ಮೂಲಕ ಹೆಚ್ಚಿನ ಲಾಭವನ್ನೂ ವಿಮಾದಾರರು ಮಾಡಿಕೊಳ್ಳಬಹುದು. ಇಂತಹ ವಿಮೆಗೆ ಕಟ್ಟಿದ ಕಂತು ಮತ್ತು ಅಂತ್ಯದಲ್ಲಿ ಬರುವ ಹಣ, ಎರಡೂ ಆದಾಯ ತೆರಿಗೆಯಿಂದ ವಿನಾಯ್ತಿಗೆ ಅರ್ಹವಾಗಿರುತ್ತವೆ.

30ವರ್ಷ ವಯಸ್ಸಿನ ಹರ್ಷಿತ್‌ ಎಂಬುವರಿಗೆ ವಿಮೆ ಮಾಡಿಸಬೇಕೆಂಬ ಯೋಚನೆ ಇತ್ತು. ಆದರೆ ವಿಮೆಯ ಅವಧಿಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದಾದರೆ ಕಟ್ಟಿದ ಕಂತಿನ ಹಣ ವಾಪಸ್‌ ಬರುವುದಿಲ್ಲವಲ್ಲಾ ಎಂಬುದು ಅವರನ್ನು ನಿರಾಶರನ್ನಾಗಿಸಿತ್ತು. ಆ ಕಾರಣಕ್ಕೇ ವಿಮೆ ಮಾಡಿಸುವ ಯೋಚನೆಯನ್ನು ಅವರು ಮುಂದೂಡುತ್ತಲೇ ಇದ್ದರು. ಆದರೆ ಈಗ ಕಂತಿನ ಹಣವನ್ನು ವಾಪಸ್‌ ಕೊಡುವಂತಹ ‘ಅವಧಿ ವಿಮೆ’ಯನ್ನು ಅವರು ಮಾಡಿಸಬಹುದಾಗಿದೆ.

ಇದು ಅತ್ಯಂತ ಸರಳವಾದ ಜೀವ ವಿಮಾ ಉತ್ಪನ್ನವಾಗಿದೆ. ಪಾಲಿಸಿದಾರರು ಸಾವನ್ನಪ್ಪಿದರೆ ವಿಮಾ ಹಣವನ್ನು ಅವರ ಕುಟುಂಬದವರಿಗೆ ನೀಡಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇದು ಕಡಿಮೆ ಕಂತಿನಲ್ಲಿ ಹೆಚ್ಚಿನ ವಿಮಾ ಭದ್ರತೆಯನ್ನು ಒದಗಿಸುತ್ತದೆ.

ವಿಮೆಯ ಅವಧಿಯಲ್ಲಿ ಏನೂ ಅವಘಡ ಸಂಭವಿಸದಿದ್ದರೆ ಕಟ್ಟಿದ ಕಂತಿನ ಹಣ ಅಥವಾ ಅದರ ಸ್ವಲ್ಪ ಭಾಗವಾದರೂ ವಾಪಸ್‌ ಸಿಗಬೇಕು ಎಂದು ಬಯಸುವುದು ಸಹಜ. ಆದರೆ ಕಂತಿನ ಹಣವನ್ನು ವಾಪಸ್‌ ನೀಡುವ ವಿಮಾ ಯೋಜನೆಗಳು ಇವೆ ಎಂಬುದೇ ಅನೇಕರಿಗೆ ಗೊತ್ತಿಲ್ಲ. ಒಂದು ಉದಾಹರಣೆ ನೀಡಿದರೆ ಈ ಯೋಜನೆಯ ಬಗ್ಗೆ ಇನ್ನಷ್ಟು ಸ್ಪಷ್ಟತೆ ಲಭಿಸಬಹುದು.

ನೀವು ₹ 50ಲಕ್ಷದ ವಿಮೆ ಮಾಡಿಸಿ, ವಾರ್ಷಿಕ ₹ 10ಸಾವಿರದಂತೆ 20ವರ್ಷಗಳ ಅವಧಿಗೆ ಕಂತು ನೀಡುತ್ತಾ ಬರುತ್ತೀರಿ ಎಂದಿಟ್ಟುಕೊಳ್ಳಿ. 20ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ನೀವು ಕಂತಿನ ರೂಪದಲ್ಲಿ ಕಟ್ಟಿದ ಪೂರ್ತಿ ₹ 2 ಲಕ್ಷವನ್ನು ನಿಮಗೆ ಮರಳಿಸಲಾಗುತ್ತದೆ. ಆದರೆ 20ವರ್ಷಗಳ ಅವಧಿಯೊಳಗೆ ಏನಾದರೂ ದುರದೃಷ್ಟಕರ ಘಟನೆ ಸಂಭವಿಸಿದರೆ, ನಿಮ್ಮ ಕುಟುಂಬಕ್ಕೆ ಕಂಪನಿಯವರು ₹ 50ಲಕ್ಷ ವಿಮಾ ಮೊತ್ತವನ್ನು ನೀಡುತ್ತಾರೆ.

* ವಿಶೇಷ ಷರತ್ತುಗಳು: ಈ ಸರಳ ಪಾಲಿಸಿಗೆ ಇನ್ನಷ್ಟು ರೈಡರ್‌(ಷರತ್ತು)ಗಳನ್ನು ನೀವು ಜೋಡಿಸಿಕೊಳ್ಳಬಹುದು. ಹೀಗೆ ರೈಡರ್‌ಗಳನ್ನು ಸೇರಿಸುವುದು ಹೊಸ ವಿಮೆಯನ್ನು ಮಾಡಿಸುವುದಕ್ಕಿಂತ ಅಗ್ಗವಾಗಿರುತ್ತದೆ ಎಂಬುದು ಗಮನಾರ್ಹ. ಅನೇಕ ರೈಡರ್‌ಗಳು ಈಗಾಗಲೇ ಲಭ್ಯ ಇವೆ.

* ಗಂಭೀರ ಕಾಯಿಲೆ: ನಿಮ್ಮ ವಿಮೆಯ ಜೊತೆಗೆ ಈ ಷರತ್ತು/ ನಿಯಮ ಸೇರಿಸಿದಿರಿ ಎಂದಿಟ್ಟುಕೊಳ್ಳಿ, ನೀವು ಭವಿಷ್ಯದಲ್ಲಿ ಇಂಥ ಕಾಯಿಲೆಗೆ ಒಳಗಾದರೆ ನಿಮಗೆ ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಈ ವಿಮಾ ಕಂಪನಿಯು ನೀಡುತ್ತದೆ.

* ಅಪಘಾತ /ಶಾಶ್ವತ ಅಂಗವೈಕಲ್ಯ: ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯಬೇಕಾದ ಸಂಸರ್ಭ ಬಂದರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ ಈ ‘ರೈಡರ್‌’ ನಿಮಗೆ ಆರ್ಥಿಕ ನೆರವನ್ನು ಒದಗಿಸುತ್ತದೆ. ಪಾಲಿಸಿದಾರರು ಒಂದಿಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸಿ ಇಂಥ ರೈಡರ್‌ಗಳನ್ನು ಜೋಡಿಸಿಕೊಳ್ಳಬಹುದು.

ಜೀವ ವಿಮೆ ಒದಗಿಸುವುದರ ಜೊತೆಗೆ, ಅವಧಿ ಪೂರ್ಣಗೊಂಡ ಬಳಿಕ ಕಂತಿನ ಹಣವನ್ನು ವಾಪಸ್‌ ನೀಡುವ ಇಂತಹ ಯೋಜನೆಗಳು ಕೇವಲ ಜೀವ ವಿಮೆಗಿಂತಲೂ ಸ್ವಲ್ಪ ಹೆಚ್ಚಿನ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗೆ ಸೂಕ್ತವಾದವುಗಳಾಗಿವೆ.

‘ಎಕ್ಸೈಡ್‌ ಲೈಫ್‌ ಸ್ಮಾರ್ಟ್‌ ಟರ್ಮ್‌ ಪ್ಲ್ಯಾನ್‌’ ಇಂತಹ ಒಂದು ಯೋಜನೆಯಾಗಿದ್ದು, ಇದು ಹೆಚ್ಚುವರಿಯಾಗಿ ಇನ್ನೂ ಮೂರು ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಅವುಗಳೆಂದರೆ:

* ‘ಕ್ಲಾಸಿಕ್‌’: ವಿಮೆಯ ಭದ್ರತೆ ಒದಗಿಸುವುದರ ಜೊತೆಗೆ ಅವಧಿ ಮುಗಿದ ನಂತರ, ಕಟ್ಟಿದ ಕಂತಿನ ಪೂರ್ತಿ ಹಣವನ್ನು ಮರಳಿಸುತ್ತದೆ.

* ಸ್ಟೆಪ್‌–ಅಪ್‌’: ವಿಮೆಯ ಜೊತೆಗೆ ಅವಧಿ ಮುಗಿದ ನಂತರ ಕಟ್ಟಿದ ಕಂತಿನ ಶೇ 150ರಷ್ಟು ಹಣವನ್ನು ಮರಳಿಸುತ್ತದೆ.

* ‘ಕಾಂಪ್ರಹೆನ್ಸಿವ್‌’: ಇಲ್ಲಿ ಗಣನೀಯ ಪ್ರಮಾಣದಲ್ಲಿ ವಿಮೆಯ ಭದ್ರತೆ ಲಭಿಸುವುದಲ್ಲದೆ, ಅವಧಿ ಮುಗಿದ ಬಳಿಕ ಕಂತಿನ ಒಂದು ಭಾಗದಷ್ಟು ಹಣವನ್ನು ಮರಳಿಸಲಾಗುತ್ತದೆ.

(ಲೇಖಕ: ಎಕ್ಸೈಡ್‌ ಲೈಫ್‌ ಇನ್ಶೂರೆನ್ಸ್‌ನ ಗ್ರಾಹಕ ಸೇವಾ ವಿಭಾಗದ ನಿರ್ದೇಶಕ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು