ನವದೆಹಲಿ: ಅನಪೇಕ್ಷಿತ ಕರೆಗಳ (ಸ್ಪಾಮ್ ಕಾಲ್ಸ್) ನಂಬರ್ಗಳನ್ನು ಬ್ಲಾಕ್ ಮಾಡುವುದರಿಂದ ಕರೆಗಳನ್ನು ನಿಲ್ಲಿಸಲಾಗುವುದಿಲ್ಲ. ಅದರ ಬದಲಾಗಿ ಅಂತಹ ಅನಪೇಕ್ಷಿತ ಕರೆಗಳ ಸಂಖ್ಯೆಗಳನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ‘ಟ್ರಾಯ್ ಡಿಎನ್ಡಿ’ ಆ್ಯಪ್ ಮೂಲಕ ವರದಿ ಮಾಡಬೇಕು TRAI ಎಂದು ಹೇಳಿದೆ.
.ಆಳ–ಅಗಲ: ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ .
ಬಳಕೆದಾರರ ದೂರಿನ ಆಧಾರದಲ್ಲಿ ಅನಪೇಕ್ಷಿತ ಕರೆ ಮತ್ತು ವಂಚನೆ ಸಂದೇಶ ಕಳುಹಿಸಿದ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ಸಂಪರ್ಕವನ್ನು ಕಡಿತಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಟ್ರಾಯ್ ಹೇಳಿದೆ.

ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಪ್ರಾಧಿಕಾರ, ಅನಪೇಕ್ಷಿತ ಕರೆಯ ಫೋನ್ ನಂಬರ್ಗಳನ್ನು ಟ್ರಾಯ್ ಡಿಎನ್ಡಿ ಆ್ಯಪ್ನಲ್ಲಿ ಫೋನ್ ಮಾಡುವ ಅಥವಾ ಎಸ್ಎಂಎಸ್ ಮೂಲಕ ವರದಿ ಮಾಡುವಂತೆ ಸೂಚಿಸಿದೆ.
.ಅನಪೇಕ್ಷಿತ ಕರೆ: `ಟ್ರಾಯ್' ನಿಯಮ ಬಿಗಿ.
ಬಳಕೆದಾರರು ಅನಪೇಕ್ಷಿತ ಕರೆಗಳ ನಂಬರ್ಗಳನ್ನು ಆ್ಯಪ್ನಲ್ಲಿ ನಮೂದಿಸಿದಾಗ ನಮಗೆ ಆ ಸಂಖ್ಯೆ ಇರುವ ಜಾಗವನ್ನು ಪತ್ತೆ ಮಾಡಲು, ಪರಿಶೀಲಿಸಲು ಮತ್ತು ಶಾಶ್ವತವಾಗಿ ಸಂಪರ್ಕ ಕಡಿತಗೊಳಿಸಲು ನೆರವಾಗುತ್ತದೆ. ಫೋನ್ ನಂಬರ್ಗಳನ್ನು ನಿಮ್ಮ ಮೊಬೈಲ್ನಲ್ಲಿ ಮಾತ್ರ ಬ್ಲಾಕ್ ಮಾಡಿದಾಗ ನಿಮ್ಮ ಖಾಸಗಿ ಸಾಧನದಲ್ಲಿ ಮಾತ್ರ ಮರೆಯಾಗುತ್ತದೆ. ಇದು ವಂಚಕರು ಹೊಸ ಸಂಖ್ಯೆಗಳನ್ನು ಬಳಸಿಕೊಂಡು ಇತರರನ್ನು ಸಂಪರ್ಕಿಸುವುದನ್ನು ತಡೆಯುವುದಿಲ್ಲ ಎಂದು ಟ್ರಾಯ್ ತಿಳಿಸಿದೆ.
.ಬಳಕೆಯಲ್ಲಿಲ್ಲದ ದೂರವಾಣಿ ಸಂಖ್ಯೆ 90 ದಿನದ ನಂತರವಷ್ಟೇ ಹೊಸಬರಿಗೆ: ಟ್ರಾಯ್.ಟ್ರಾಯ್ ಹೊಸ ನಿಯಮಾವಳಿ: ಡಿಸೆಂಬರ್ 1ರಿಂದ ಮೊಬೈಲ್ಗಳಿಗೆ ಒಟಿಪಿ ಬಂದ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.