ಶುಕ್ರವಾರ, ಡಿಸೆಂಬರ್ 4, 2020
24 °C

ಗ್ರಾಂ ಚಿನ್ನದ ಮೇಲೆ ₹ 111 ಕಡಿತ: ಅರ್ಜುನ ವರ ಜುವೆಲರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಯನಗರದಲ್ಲಿ ಹೊಸದಾಗಿ ಆರಂಭವಾಗಿರುವ ‘ಅರ್ಜುನ ವರ’ ಚಿನ್ನಾಭರಣಗಳ ಮಳಿಗೆಯು ಗ್ರಾಹಕರಿಗೆ ಕೊಡುಗೆಯಾಗಿ ಪ್ರತಿ ಗ್ರಾಂ ಖರೀದಿಯ ಮೇಲೆ ₹ 111 ದರ ಕಡಿತ ಪ್ರಕಟಿಸಿದೆ. ‘ನಿಮ್ಮ ಕನಸಿನ ಚಿನ್ನಾಭರಣ ಖರೀದಿಸಲು ಇದು ಸೂಕ್ತ ಸಮಯ’ ಎಂದು ಅದು ಹೇಳಿದೆ.

‘ಅರ್ಜುನ ವರ’ ಮಳಿಗೆಯು ಉದ್ಯಮಿಗಳಾದ ರಾಹುಲ್‌ ಮತ್ತು ಅಕ್ಷಯ್‌ ಸಹೋದರರ ಕಲ್ಪನೆಯಲ್ಲಿ ಅರಳಿದ್ದು, ತಮ್ಮ ಕುಟುಂಬದ ಪರಂಪರೆಯನ್ನು ಮುನ್ನಡೆಸುವ ಉದ್ದೇಶದಿಂದ ಅವರು ಇದನ್ನು ಸ್ಥಾಪಿಸಿದ್ದಾರೆ. ನಿಖರವಾದ ವಿನ್ಯಾಸವು ಈ ಬ್ರ್ಯಾಂಡ್‌ನ ಧ್ಯೇಯವಾಗಿದ್ದು, ಉಳಿದೆಲ್ಲಾ ಬ್ರ್ಯಾಂಡ್‌ಗಳಿಗಿಂತಲೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ವೈವಿಧ್ಯಮಯವಾದ ಚಿನ್ನಾಭರಣಗಳು ಇಲ್ಲಿ ಲಭ್ಯವಿವೆ. ನಿತ್ಯದ ಬಳಕೆಗೆ, ಕಚೇರಿಗೆ ಹೋಗುವಾಗ ಬಳಸಲು, ಹಗುರವಾದ ಚಿನ್ನಾಭರಣ, ವಧುವಿಗೆ ಬೇಕಾಗುವ ಚಿನ್ನಾಭರಣಗಳ ಸಂಗ್ರಹ ಇಲ್ಲಿದೆ. ಗ್ರಾಹಕರ ಜೇಬಿಗೆ ಹೊರೆಯಾಗದ, ಅರ್ಧ ಗ್ರಾಂ ಚಿನ್ನದಿಂದ ಮಾಡಿದ ಆಭರಣ ಕೂಡ ಸಿಗಲಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

‘ಸದ್ಯ ಹಬ್ಬದ ಋತು ನಡೆಯುತ್ತಿದ್ದು, ಮದುವೆ ಸಮಾರಂಭಗಳು ಇನ್ನು ಆರಂಭವಾಗಲಿವೆ. ಈ ಸಂದರ್ಭವನ್ನು ಇನ್ನಷ್ಟು ವಿಶೇಷ ಆಗಿಸಲು ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿನ್ನಾಭರಣಗಳನ್ನು ಖರೀದಿಸಲು ಮುಂದಾಗಿ’ ಎಂದು ಅರ್ಜುನ ವರ ಜುವೆಲರ್ಸ್ ಹೇಳಿದೆ. ಧಂತೇರಸ್ ದಿನವಾದ ನವೆಂಬರ್ 13ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ಮಳಿಗೆ ತೆರೆದಿರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು