ವಾಷಿಂಗ್ಟನ್: ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಬಿಗಡಾಯಿಸಿದ್ದು, ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 145ರಷ್ಟು ಸುಂಕ ಹೇರುವುದಾಗಿ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ ಎಂದು ಸಿಎನ್ಬಿಸಿ ವರದಿ ಮಾಡಿದೆ.

ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ.
.ಅಮೆರಿಕದಿಂದ 90 ದಿನಗಳ ಸುಂಕ ವಿರಾಮ: ಜಿಗಿದ ಸೆನ್ಸೆಕ್ಸ್, ನಿಫ್ಟಿ.
ಅಮೆರಿಕ ಉತ್ಪನ್ನಗಳಿಗೆ ಶೇ 84ರಷ್ಟು ತೆರಿಗೆ ವಿಧಿಸುವ ಚೀನಾದ ನಿರ್ಧಾರ ಬೆನ್ನಲ್ಲೇ ಟ್ರಂಪ್ ಆಡಳಿತ ಈ ಘೋಷಣೆ ಮಾಡಿದೆ

ತೆರಿಗೆ ಹೆಚ್ಚಳ ಯಾವ ಉತ್ಪನ್ನಗಳಿಗೆ ಅನ್ವಯವಾಗಲಿದೆ ಎನ್ನುವ ಮಾಹಿತಿಯನ್ನು ಶ್ವೇತಭವನ ಇನ್ನೂ ನೀಡಿಲ್ಲ. ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ಗ್ರಾಹಕ ವಸ್ತುಗಳ ಮೇಲೆ ಈ ಸುಂಕ ಅನ್ವಯವಾಗಲಿದೆ ಎನ್ನಲಾಗಿದೆ.
.ಟ್ರಂಪ್ ಸುಂಕ ನೀತಿ; ಒಟ್ಟಾಗಿ ವಿರೋಧಿಸೋಣ: ಯುರೋಪಿಯನ್ ಒಕ್ಕೂಟಕ್ಕೆ ಚೀನಾ ಅಧ್ಯಕ್ಷ.
ಈ ಪ್ರಮಾಣದ ಸುಂಕ ಹೆಚ್ಚಳದಿಂದ ಹಣದುಬ್ಬರ ಏರಿಕೆಯಾಗಲಿದ್ದು, ಪೂರೈಕೆ ಸರಪಳಿಯಲ್ಲಿ ಏರುಪೇರಾಗಿ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನೀವು ಪ್ರಾರಂಭಿಸಿದ ಸುಂಕ ಸಂಘರ್ಷದಿಂದಾಗಿ ಪರಿಣಾಮ ಎದುರಿಸಬೇಕಾದೀತು ಎಂದು ಟ್ರಂಪ್ಗೆ ಚೀನಾ ಎಚ್ಚರಿಕೆ ನೀಡಿತ್ತು. ಇದರ ಬಳಿಕ ಚೀನಾದ ಆಮದು ಮೇಲೆ ಶೇ 125ರಷ್ಟು ಸುಂಕು ವಿಧಿಸಿ ಬುಧವಾರ ಟ್ರಂಪ್ ಆಡಳಿತ ಘೋಷಣೆ ಮಾಡಿತ್ತು. ಇದರಿಂದ ಕೆರಳಿದ್ದ ಚೀನಾ, ಸುಂಕವನ್ನು ಶೇ 84ಕ್ಕೆ ಏರಿಸಿತ್ತು.
.ಪ್ರತಿ ಸುಂಕ ಜಾರಿಗೆ 90 ದಿನಗಳ ವಿರಾಮ: ಅಮೆರಿಕದ ಷೇರುಪೇಟೆ ದಾಖಲೆ ಏರಿಕೆ.
ಹಲವು ದೇಶಗಳ ಮೇಲೆ ತೆರಿಗೆ ಏರಿಕೆ ಆದೇಶಕ್ಕೆ 90 ದಿನಗಳ ತಡೆ ನೀಡಿದ್ದರೂ, ಚೀನಾದ ಮೇಲಿನ ತೆರಿಗೆ ಹೇರಿಕೆಯನ್ನು ಟ್ರಂಪ್ ಮುಂದುವರಿಸಿದ್ದರು. ಪ್ರಪಂಚದ ಎರಡು ಬೃಹತ್ ಆರ್ಥಿಕತೆಗಳ ಈ ಸುಂಕ ಸಮರವು ಜಾಗತಿಕ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ ಬೀರಿತ್ತು. ಭಾರತದ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿತ್ತು.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.China Hits Back US: ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.