ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕದ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಷಿ ಜಿನ್ಪಿಂಗ್, ‘ಇದು ಏಕಪಕ್ಷೀಯ ತೆರಿಗೆ ಬೆದರಿಕೆ’ ಎಂದು ಕರೆದಿದ್ದಾರೆ.

ಬೀಜಿಂಗ್ನಲ್ಲಿ ಸ್ಪ್ಯಾನಿಷ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರನ್ನು ಷಿ ಭೇಟಿಯಾಗಿದ್ದಾರೆ. ಈ ವೇಳೆ ಚೀನಾದ ಆಮದುಗಳ ಮೇಲೆ ಡೊನಾಲ್ಡ್ ಟ್ರಂಪ್ ವಿಧಿಸಿದ 145 ಪ್ರತಿಶತದಷ್ಟು ಸುಂಕದ ಕುರಿತು ಉಲ್ಲೇಖಿಸಿ, ಅಮೆರಿಕದ ಏಕಪಕ್ಷೀಯ ತೆರಿಗೆ ಬೆದರಿಸುವಿಕೆಯನ್ನು ವಿರೋಧಿಸಲು ಕೈಜೋಡಿಸುವಂತೆ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ ಎಂದು ಸರ್ಕಾರಿ ಸುದ್ದಿ ಮಾಧ್ಯಮ ಕ್ಸಿನ್ಹುವಾ ವರದಿ ಉಲ್ಲೇಖಿಸಿ ಎನ್ಡಿಟಿವಿ ವರದಿ ತಿಳಿಸಿದೆ.
.ಟ್ರಂಪ್ ಸುಂಕ ನೀತಿ: ಭಾರತದಿಂದ ಅಮೆರಿಕಗೆ 600 ಟನ್ ಆ್ಯಪಲ್ ಐಫೋನ್ ಏರ್ಲಿಫ್ಟ್ .
ಸ್ವ ಹಿತಾಸಕ್ತಿಯನ್ನು ಮಾತ್ರ ನೋಡದೆ ನ್ಯಾಯಯುತ ಅಂತರರಾಷ್ಟ್ರೀಯ ವ್ಯಾಪಾರ ಕುರಿತಾದ ಜವಾಬ್ದಾರಿಯನ್ನು ನಿರ್ವಹಿಸಬೇಕು. ವ್ಯಾಪಾರ ಯುದ್ಧವು ಯುರೋಪಿಯನ್ ಒಕ್ಕೂಟ ಮತ್ತು ಚೀನಾ ಸಹಕಾರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ ಎಂದು ಷಿ ಯುರೋಪಿಯನ್ ರಾಷ್ಟ್ರಗಳಿಗೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
.China Hits Back US: ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.