ನವದೆಹಲಿ: ಪ್ರತಿ ಸುಂಕ ನೀತಿ ಜಾರಿಗೂ ಮೊದಲೇ ಆ್ಯಪಲ್ ಕಂಪನಿಯು ಭಾರತದಿಂದ ಸರಕು ಸಾಗಣೆ ವಿಮಾನಗಳಲ್ಲಿ 600 ಟನ್ (15 ಲಕ್ಷ) ಐಫೋನ್ಗಳನ್ನು ಅಮೆರಿಕಕ್ಕೆ ಸಾಗಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಮೇಲೆ ಟ್ರಂಪ್ ಶೇ 26ರಷ್ಟು ಪ್ರತಿ ಸುಂಕ ಹೇರಿದ್ದಾರೆ. ಏಪ್ರಿಲ್ 9ರಂದು ಅಧಿಕೃತವಾಗಿ ಈ ನೀತಿ ಜಾರಿಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದಕ್ಕೂ ಮುನ್ನವೇ ಐಫೋನ್ಗಳನ್ನು ಸಾಗಿಸಿದೆ ಎಂದು ಹೇಳಿವೆ.

ಐಫೋನ್ಗಳ ಸಾಗಣೆಗೆ 6 ವಿಮಾನಗಳನ್ನು ಬಳಸಿಕೊಂಡಿದೆ. ಪ್ರತಿ ವಿಮಾನವು 100 ಟನ್ನಷ್ಟು ಫೋನ್ಗಳನ್ನು ಸಾಗಿಸಿದೆ ಎಂದು ಹೇಳಿವೆ.

ಅಮೆರಿಕವು ಐಫೋನ್ಗಳಿಗೆ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೀಗಾಗಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕದ ಹೊರೆಯಿಂದ ತಪ್ಪಿಸಿಕೊಳ್ಳಲು ಮಾರ್ಚ್ ತಿಂಗಳಲ್ಲಿಯೇ ಚೆನ್ನೈ ವಿಮಾನ ನಿಲ್ದಾಣದಿಂದ ಐಫೋನ್ಗಳನ್ನು ಸಾಗಿಸಿದೆ. ಕೇಂದ್ರ ಸರ್ಕಾರ ಐಫೋನ್ ಸಾಗಣೆಗೆ ಕಸ್ಟಮ್ಸ್ ಪ್ರಕ್ರಿಯೆಯನ್ನು ತ್ವರಿತವಾಗಿ ಬಗೆಹರಿಸಿದೆ ಎಂದು ತಿಳಿಸಿವೆ.

ಈ ಕುರಿತು ಆ್ಯಪಲ್ ಮತ್ತು ವಿಮಾನಯಾನ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಗತ್ತಿನಾದ್ಯಂತ ಪ್ರತಿ ವರ್ಷ ಆ್ಯಪಲ್ ಕಂಪನಿಯ 22 ಕೋಟಿ ಐಫೋನ್ಗಳು ಮಾರಾಟವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.