ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಸಿಗಡಿ ರಫ್ತು ಶೇ 15ರಿಂದ ಶೇ 18ರಷ್ಟು ಇಳಿಕೆಯಾಗಬಹುದು ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಅಂದಾಜಿಸಿದೆ.

ಅಮೆರಿಕವು, ಭಾರತದ ಸಿಗಡಿ ಮೇಲೆ ಆಗಸ್ಟ್ 27ರಿಂದ ವಿಧಿಸುತ್ತಿರುವ ಶೇ 58.26ರಷ್ಟು ಸುಂಕವೇ ರಫ್ತು ಇಳಿಕೆಗೆ ಕಾರಣ ಎಂದು ಶುಕ್ರವಾರ ಹೇಳಿದೆ. ಈ ಸುಂಕದಿಂದ ದೇಶದ ರಫ್ತುದಾರರು ಆರ್ಥಿಕ ನಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ₹44,108 ಕೋಟಿ ಮೌಲ್ಯದ ಸಿಗಡಿ ರಫ್ತಾಗಿದ್ದವು. ಈ ಪೈಕಿ ಅಮೆರಿಕ ಶೇ 48ರಷ್ಟು ಪಾಲನ್ನು ಹೊಂದಿತ್ತು. ಈಕ್ವೇಡಾರ್, ವಿಯೆಟ್ನಾಂ, ಇಂಡೊನೇಷ್ಯಾ ಮತ್ತು ಥಾಯ್ಲೆಂಡ್ನಲ್ಲಿ ಭಾರತಕ್ಕೆ ಹೋಲಿಸಿದರೆ ಸುಂಕ ಕಡಿಮೆ ಇದೆ. ಇದರ ಪರಿಣಾಮವಾಗಿ, ಅಮೆರಿಕಕ್ಕೆ ಭಾರತದ ಸಿಗಡಿ ರಫ್ತು ಪ್ರಮಾಣ ಕುಸಿಯಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.