ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಪ್ರೊ ಆದಾಯ ಕುಸಿತ, ಲಾಭ ದಾಖಲಿಸಿದ ಎಚ್‌ಸಿಎಲ್

Published 12 ಜನವರಿ 2024, 16:28 IST
Last Updated 12 ಜನವರಿ 2024, 16:28 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಪ್ರಮುಖ ಐ.ಟಿ ಕಂಪನಿ ವಿಪ್ರೊ ಲಿಮಿಟೆಡ್‌ ಆದಾಯವು, ಶೇ 11.7ರಷ್ಟು ಕುಸಿತ ಕಂಡಿದೆ. ‌

ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ₹2,694.2 ಕೋಟಿ ನಿವ್ವಳ ಲಾಭಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ₹3,052.9 ಕೋಟಿ ವರಮಾನ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಆದಾಯ ಕುಸಿತಗೊಂಡಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಕಾರ್ಯಾಚರಣಾ ವರಮಾನವು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 4.4ರಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹23,229 ಕೋಟಿ ಇದ್ದ ಆದಾಯವು ₹22,205 ಕೋಟಿಗೆ ಇಳಿಕೆ ಕಂಡಿದೆ.

ಎಚ್‌ಸಿಎಲ್‌ ಲಾಭ ಏರಿಕೆ:

ಡಿಸೆಂಬರ್‌ ತ್ರೈಮಾಸಿಕದಲ್ಲಿ ಎಚ್‌ಸಿಎಲ್‌ ಟೆಕ್‌ ಶೇ 6.2ರಷ್ಟು ಆದಾಯಗಳಿಸಿದೆ. 

2022ರ ಡಿಸೆಂಬರ್‌ನಲ್ಲಿ ₹4,096 ಕೋಟಿ ನಿವ್ವಳ ಲಾಭ ಗಳಿಸಿದ್ದ ಕಂಪನಿಯು, 2023ರ ಡಿಸೆಂಬರ್‌ನಲ್ಲಿ ₹4,350 ಕೋಟಿ ಗಳಿಸಿದೆ. 

2023ರಲ್ಲಿ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ 1.11ರಷ್ಟು ಹೆಚ್ಚಳವಾಗಿದೆ. 2022ರಲ್ಲಿ 2.22 ಲಕ್ಷವಿದ್ದ ಉದ್ಯೋಗಿಗಳ ಸಂಖ್ಯೆ 2023ರಲ್ಲಿ 2.24 ಲಕ್ಷಕ್ಕೆ ಏರಿದೆ. ಹೊಸದಾಗಿ 3,818 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT