ಬೆಂಗಳೂರು: ಕಚೇರಿ ಸ್ಥಳಗಳನ್ನು ಒದಗಿಸುವ ‘ವರ್ಕ್ ಈಸಿ ಸ್ಪೇಸ್ ಸಲ್ಯೂಷನ್ಸ್’ ಕಂಪನಿಯು ಬೆಂಗಳೂರಿನಲ್ಲಿ ತನ್ನ ಮೊದಲ ಕೇಂದ್ರವನ್ನು ಆರಂಭಿಸಿದ್ದು, ಬೆಳ್ಳಂದೂರು ಹೊರ ವರ್ತುಲ ರಸ್ತೆಯಲ್ಲಿ ವರ್ಕ್ಈಸಿ ಟೆಕ್ಶೈರ್ ಹೆಸರಿನ ಕಟ್ಟಡದಲ್ಲಿ ಕಚೇರಿ ಸ್ಥಳದ ಸೌಲಭ್ಯಗಳನ್ನು ಕಲ್ಪಿಸಿದೆ.

ಇಲ್ಲಿ ಅಂದಾಜು 2 ಲಕ್ಷ ಚದರ ಅಡಿ ವಿಸ್ತೀರ್ಣದ ಸ್ಥಳ ಲಭ್ಯವಿದೆ. ‘ಚೆನ್ನೈನಲ್ಲಿ ಕೇವಲ 1 ಲಕ್ಷ ಚದರ ಅಡಿಗಳ ಕಚೇರಿ ಸ್ಥಳದೊಂದಿಗೆ ಆರಂಭವಾದ ಕಂಪನಿಯು ಈಗ 10.25 ಲಕ್ಷ ಚದರ ಅಡಿಗಳ ಕಚೇರಿ ಸ್ಥಳವನ್ನು ಮೂರು ನಗರಗಳಲ್ಲಿ ಹೊಂದಿದೆ. ಕಂಪನಿ ಆರಂಭವಾದ ನಂತರದಲ್ಲಿ ವರ್ಷದಿಂದ ವರ್ಷಕ್ಕೆ ಶೇ 45ರಷ್ಟು ಬೆಳವಣಿಗೆ ಸಾಧಿಸಿದೆ’ ಎಂದು ಕಂಪನಿಯ ಸಿಇಒ ಪ್ರತಾಪ್ ಮುರಳಿ ಹೇಳಿದ್ದಾರೆ.

ಬಿಹೈವ್, ವಿವರ್ಕ್, ಆವ್ಫೀಸ್ನಂತಹ ಕಂಪನಿಗಳು ಬೆಂಗಳೂರಿನ ಕಚೇರಿ ಸ್ಥಳ ಮಾರುಕಟ್ಟೆಯಲ್ಲಿ ಈಗಾಗಲೇ ತಮ್ಮ ಸೇವೆ ಒದಗಿಸುತ್ತಿವೆ. ಅವುಗಳ ಸಾಲಿಗೆ ಈಗ ವರ್ಕ್ ಈಸಿ ಕಂಪನಿಯೂ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.