ಇಸ್ಲಾಮಾಬಾದ್: ಮುಂದಿನ ಹತ್ತು ವರ್ಷಗಳಲ್ಲಿ ಪಾಕಿಸ್ತಾನದ ಜನರ ಜೀವನಮಟ್ಟದ ಸುಧಾರಣೆಗಾಗಿ ₹1.71 ಲಕ್ಷ ಕೋಟಿ ಸಾಲದ ಪ್ಯಾಕೇಜ್ಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ.

ಈ ಕಾರ್ಯಕ್ರಮಕ್ಕೆ ‘ಪಾಕಿಸ್ತಾನ ರಾಷ್ಟ್ರೀಯ ಪಾಲುದಾರಿಕೆ ಚೌಕಟ್ಟು 2025– 2035’ ಎಂಬ ಶೀರ್ಷಿಕೆ ಇಡಲಾಗಿದೆ ಎಂದು ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಯ ವರದಿ ಭಾನುವಾರ ತಿಳಿಸಿದೆ.

ಪ್ರಮುಖ ಆರು ವಲಯಗಳ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಈ ಪ್ಯಾಕೇಜ್ ಪ್ರಕಟಿಸಿದೆ. ನಿಗದಿತ ಅವಧಿ ಮುಗಿಯುವವರೆಗೂ ಆರ್ಥಿಕ ನೆರವು ನೀಡಲಿದೆ. ಹಾಗಾಗಿ, ದೇಶದಲ್ಲಿ ರಾಜಕೀಯ ಪಕ್ಷಗಳ ಅಧಿಕಾರಾವಧಿ ಬದಲಾವಣೆಯಾದರೂ ಈ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ಮಕ್ಕಳ ಬೆಳವಣಿಗೆ ಕುಂಠಿತ ತಡೆಗಟ್ಟುವುದು, ಬಡತನ ನಿರ್ಮೂಲನೆ, ಹವಾಮಾನ ಬದಲಾವಣೆ ತಡೆಗಟ್ಟುವಿಕೆ, ಪರಿಸರದಲ್ಲಿ ಇಂಗಾಲ ಪ್ರಮಾಣವನ್ನು ಕಡಿಮೆ ಮಾಡುವುದು, ಹಣಕಾಸಿನ ಸ್ಥಿತಿ ವಿಸ್ತರಣೆ ಹಾಗೂ ಉತ್ಪಾದಕತೆ ಹೆಚ್ಚಿಸುವ ದೃಷ್ಟಿಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಭಾಗವಾಗಿವೆ.

ಪಾಕಿಸ್ತಾನದ ಜೊತೆಗಿನ ಈ ಪಾಲುದಾರಿಕೆ ಚೌಕಟ್ಟಿಗೆ ಜನವರಿ 14ರಂದು ವಿಶ್ವ ಬ್ಯಾಂಕ್ನ ಆಡಳಿತ ಮಂಡಳಿಯು ಅಧಿಕೃತವಾಗಿ ಒಪ್ಪಿಗೆಯ ಮುದ್ರೆ ಒತ್ತಲಿದೆ. ಈ ಕಾರ್ಯಕ್ರಮದ ಅಂಗವಾಗಿ ವಿಶ್ವ ಬ್ಯಾಂಕ್ನ ದಕ್ಷಿಣ ಏಷ್ಯಾದ ಉಪಾಧ್ಯಕ್ಷ ಮಾರ್ಟಿನ್ ರೈಸರ್ ಅವರು, ಇಸ್ಲಾಮಾಬಾದ್ಗೆ ಭೇಟಿ ನೀಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.