ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣಗಳಿಗೆ ಹೆಚ್ಚಿದ ಬೇಡಿಕೆ

Last Updated 5 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ದೇಶದಲ್ಲಿ ಚಿನ್ನಾಭರಣಗಳ ಬೇಡಿಕೆ ಶೇ 5ರಷ್ಟು ಹೆಚ್ಚಾಗಿದೆ.

ಹಿಂದಿನ ವರ್ಷದ 119 ಟನ್‌ಗಳಿಗೆ ಹೋಲಿಸಿದರೆ, ಈ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ125 ಟನ್‌ಗಳಷ್ಟು ಚಿನ್ನಾಭರಣಗಳಿಗೆ ಬೇಡಿಕೆ ಕಂಡು ಬಂದಿದೆ. 2015 ರಿಂದೀಚಿಗಿನ ಗರಿಷ್ಠ ಮಟ್ಟ ಇದಾಗಿದೆ.

ಮೌಲ್ಯದ ಲೆಕ್ಕದಲ್ಲಿಯೂ ಚಿನ್ನಾಭರಣಗಳ ಬೇಡಿಕೆಯು ಶೇ 13ರಷ್ಟು ಹೆಚ್ಚಳವಾಗಿದೆ. 2018ರ ಈ ತ್ರೈಮಾಸಿಕದಲ್ಲಿನ ₹ 32,790 ಕೋಟಿಗೆ ಹೋಲಿಸಿದರೆ, ಈ ವರ್ಷ ₹ 37,070 ಕೋಟಿಗೆ ಏರಿಕೆಯಾಗಿದೆ.

ಹೂಡಿಕೆ ಉದ್ದೇಶದ ಚಿನ್ನದ ಬೇಡಿಕೆಯು ಕೂಡ ಹಿಂದಿನ ವರ್ಷದ 32.3 ಟನ್‌ಗಳಿಂದ 33.6 ಟನ್‌ಗಳಿಗೆ ಹೆಚ್ಚಳಗೊಂಡು ಶೇ 4ರಷ್ಟು ಏರಿಕೆ ದಾಖಲಿಸಿದೆ. ಮೌಲ್ಯದ ಲೆಕ್ಕದಲ್ಲಿ ಇದು ₹ 8,890 ಕೋಟಿಗಳಿಂದ ₹ 9,940 ಕೋಟಿಗೆ ಹೆಚ್ಚಳಗೊಂಡಿದೆ.

ಡಾಲರ್‌ ಎದುರು ರೂಪಾಯಿ ವಿನಿಮಯ ದರ ಹೆಚ್ಚಳಗೊಂಡಿರುವುದರಿಂದ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೂ ಬೇಡಿಕೆ ಹೆಚ್ಚಿದೆ. ಚಿನ್ನದ ಮರು ಬಳಕೆಯೂ ಶೇ 14ರಷ್ಟು ಹೆಚ್ಚಾಗಿ 14 ಟನ್‌ಗಳಿಂದ 16 ಟನ್‌ಗಳಿಗೆ ಏರಿಕೆಯಾಗಿದೆ.

ಭಾರತದಲ್ಲಿನ ಈ ಬೇಡಿಕೆ ಭರಾಟೆಯುಜಾಗತಿಕ ಮಟ್ಟದಲ್ಲಿಯೂ ಚಿನ್ನಾಭರಣಗಳ ಬೇಡಿಕೆಗೆ ಶೇ 1ರಷ್ಟು ಉತ್ತೇಜನ ನೀಡಿದೆ ಎಂದು ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯುಜಿಸಿ) ವರದಿಯಲ್ಲಿ ತಿಳಿಸಲಾಗಿದೆ. ಚಿನ್ನ ಖರೀದಿಗೆ ಪವಿತ್ರ ದಿನವಾಗಿರುವ ‘ಅಕ್ಷಯ ತೃತೀಯ’ ಸಂದರ್ಭದಲ್ಲಿಯೇ ಚಿನ್ನಾಭರಣ ವ್ಯಾಪಾರಿಗಳಿಗೆ ಉತ್ತೇಜನಕಾರಿಯಾದ ಮಾಹಿತಿಯನ್ನು ಈ ವರದಿ ಒಳಗೊಂಡಿದೆ.

ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳ, ಮದುವೆ ದಿನಗಳು ಮತ್ತುಅಕ್ಷಯ ತೃತೀಯದ ಕಾರಣದಿಂದ ಕ್ಯಾಲೆಂಡರ್‌ ವರ್ಷದದ್ವಿತೀಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಹೆಚ್ಚಳಗೊಳ್ಳಲಿದೆ ಎಂದು ‘ಡಬ್ಲ್ಯುಜಿಸಿ’ಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌ ಹೇಳಿದ್ದಾರೆ.

ಭಾರತದ ಚಿನ್ನದ ಬೇಡಿಕೆಯು ಮೊದಲ ತ್ರೈಮಾಸಿಕದಲ್ಲಿ 159 ಟನ್‌ಗಳಿಗೆ ತಲುಪಿದೆ.2018ರಲ್ಲಿ ಈ ಪ್ರಮಾಣ 151.5 ಟನ್‌ಗಳಷ್ಟಿತ್ತು.

ರೂಪಾಯಿ ಮೌಲ್ಯ ವೃದ್ಧಿ ಮತ್ತು ಸ್ಥಳೀಯ ಚಿನ್ನದ ದರದಲ್ಲಿ ಇಳಿಕೆ ಆಗಿರುವುದರಿಂದ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಬಾರಿ ಮದುವೆ ಸಮಾರಂಭ ದಿನಗಳು ಹೆಚ್ಚಳಗೊಂಡಿರುವುದು ಸಹ ಚಿನ್ನದ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಮಾರ್ಚ್‌ನ ಮೊದಲ ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ ₹ 32 ಸಾವಿರಕ್ಕೆ ಇಳಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT