‘ನನ್ನ ಸ್ನೇಹಿತ ರಂಜಿತ್ 2017ರಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಒಂದನ್ನು ಬುಕ್ ಮಾಡಿದರು. ಆ ಆಪಾರ್ಟ್ಮೆಂಟ್ ಕಟ್ಟಡವನ್ನು ಮೂರು ವರ್ಷಗಳಲ್ಲಿ ಪೂರೈಸಿ ಗೃಹಪ್ರವೇಶಕ್ಕೆ ಅನುವು ಮಾಡಿಕೊಡುವುದಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಹೇಳಿತ್ತು. ರಂಜಿತ್ ಖಾಸಗಿ ಬ್ಯಾಂಕ್ ಒಂದರಲ್ಲಿ ₹35 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿ, ಕಟ್ಟಡ ನಿರ್ಮಾಣ ಪ್ರಗತಿ ಸಾಧಿಸಿದಂತೆಲ್ಲಾ ವಿವಿಧ ಹಂತಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡರು.

ಅದಾಗಿ ಈಗ 8 ವರ್ಷಗಳು ಕಳೆದಿವೆ. ಬ್ಯಾಂಕ್ನಿಂದ ಸಾಕಷ್ಟು ಹಣ ಬಿಲ್ಡರ್ ಖಾತೆಗೆ ಹರಿದಿದೆ. ಆದರೆ ಈವರೆಗೂ ರಂಜಿತ್ಗೆ ಅವರ ಕನಸಿನ ಮನೆ ಸಿಕ್ಕಿಲ್ಲ. ಯಾವಾಗ ಮನೆ ಸಿಗುತ್ತದೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಕೇಳಿದರೆ ‘ಆರು ತಿಂಗಳು, ಒಂದು ವರ್ಷ’ ಎಂಬ ಉತ್ತರ ಬರುತ್ತದೆ. ಇನ್ನೂ ಸ್ವಲ್ಪ ದಬಾಯಿಸಿ ಕೇಳಿದರೆ ‘ನಮ್ಮ ಹತ್ತಿರ ಬಂಡವಾಳ ಇಲ್ಲ, ನಿರ್ಮಾಣ ತಡವಾಗುತ್ತೆ, ದೂರು ನೀಡಿ ಹೋಗಿ’ ಎಂಬ ಉದ್ಧಟತನದ ಉತ್ತರ ಸಿಗುತ್ತದೆ. ಇದು ರಂಜಿತ್ ಒಬ್ಬರು ಅನುಭವಿಸುತ್ತಿರುವ ಸಮಸ್ಯೆಯಲ್ಲ. ಬೆಂಗಳೂರಿನಲ್ಲಿ ಹಲವರು ಹೀಗೆ ವಿಶ್ವಾಸಕ್ಕೆ ಅರ್ಹವಲ್ಲದ ಸಂಸ್ಥೆಗಳಿಂದ ನಿರ್ಮಾಣ ಹಂತದ ಅಪಾರ್ಟ್ಮೆಂಟ್ಗಳನ್ನು/ ಕಟ್ಟಡಗಳನ್ನು ಖರೀದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅತ್ತ ಸಾಲ ಮಾಡಿ, ಇತ್ತ ಮನೆ ಸಿಗದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಜೀವನ ಸಾಗಿಸುವ ಪರಿಸ್ಥಿತಿ ಅವರಿಗೆ ಎದುರಾಗಿದೆ. ಹೀಗಿರುವಾಗ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಅಥವಾ ಮನೆ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಕನಸಿನ ಮನೆ ಖರೀದಿ ಕಹಿ ಆಗಬಾರದು ಅಂದರೆ ಏನು ಮಾಡಬೇಕು ಎಂಬುದನ್ನು ವಿವರವಾಗಿ ತಿಳಿಯೋಣ.

2,600 ಯೋಜನೆಗಳು ವಿಳಂಬ: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (KRERA)
ಮೂಲಗಳಿಂದ ಸಿಗುವ ಮಾಹಿತಿ ಪ್ರಕಾರ 2025ರ ಆರಂಭದಲ್ಲಿ ಕರ್ನಾಟಕದಾದ್ಯಂತ ಸುಮಾರು 2,600 ಕಟ್ಟಡ ನಿರ್ಮಾಣ ಯೋಜನೆಗಳು ವಿಳಂಬವಾಗಿವೆ. ಈ ಪೈಕಿ 1,301 ಯೋಜನೆಗಳು ಬೆಂಗಳೂರಿನ ವ್ಯಾಪ್ತಿಯಲ್ಲಿವೆ. ಅನೇಕರು ನಿರ್ಮಾಣ ಸಂಸ್ಥೆಗಳ ವಿರುದ್ಧ ಕಾನೂನು ಸಮರ ಸಾರಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ.

ಖರೀದಿಸುವಾಗ ಗಮನಿಸಬೇಕಾದ ಅಂಶಗಳು

ರೇರಾ ನೋಂದಣಿ ಪರಿಶೀಲಿಸಿ: ಯಾವುದೇ ವಸತಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅದಕ್ಕೆ ರೇರಾ ಸಂಖ್ಯೆ ಇರಲೇಬೇಕು. ರೇರಾ ಅನುಮತಿ ಇದೆಯೇ, ಯೋಜನೆಯ ವಿವರಗಳು ಸರಿ ಇವೆಯೇ, ಯಾವಾಗ ನಿರ್ಮಾಣ ಪೂರ್ಣಗೊಳುತ್ತದೆ, ಎಲ್ಲಾ ಅನುಮೋದನೆಗಳನ್ನು ಪಡೆದಿದ್ದಾರೆಯೇ ಎನ್ನುವುದನ್ನು ಅಧಿಕೃತ ರೇರಾ ವೆಬ್ಸೈಟ್ನಲ್ಲಿ ಪರಿಶೀಲಿಸಿ. ರೇರಾ ನೋಂದಣಿ ಇಲ್ಲದ ಆಸ್ತಿ ಖರೀದಿ ಬೇಡ.

ನಿರ್ಮಾಣ ಸಂಸ್ಥೆಯ ನಿಖರತೆ: ಯಾವುದೇ ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಆಸ್ತಿ ಖರೀದಿಸಲು ಮುಂದಾಗುವಾಗ ಈ ಹಿಂದೆ ಅದು ಹೇಗೆ ಕಾರ್ಯನಿರ್ವಹಿಸಿದೆ, ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಪೂರ್ಣಗೊಳಿಸಿದೆಯೇ, ಸಂಸ್ಥೆಯ ಬಗ್ಗೆ ಏನಾದರೂ ದೂರುಗಳಿವೆಯೇ ಎನ್ನುವುದನ್ನು ರೇರಾ ವೆಬ್ಸೈಟ್ ಮೂಲಕ ಪರಿಶೀಲಿಸಿ.

ಹಣಕಾಸಿನ ಆರೋಗ್ಯ ಹೇಗಿದೆ?: ಆಸ್ತಿ ಖರೀದಿಸುವ ಮೊದಲು, ಕಟ್ಟಡ ನಿರ್ಮಾಣ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಬಗ್ಗೆ ಅವಲೋಕನ ಮಾಡಿ. ವಾಣಿಜ್ಯ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವ ಲಾಭ–ನಷ್ಟದ ವಿವರಣೆಯನ್ನು ಪೂರ್ತಿಯಾಗಿ ಗಮನಿಸಿ. ಸಂಸ್ಥೆಗೆ ಏನಾದರೂ ಹಣದ ಅಡಚಣೆ ಇದ್ದರೆ ಅದರಿಂದ ದೂರ ಉಳಿಯಿರಿ.

ಕರಾರು ಪತ್ರ ಸರಿಯಾಗಿ ಓದಿ: ಕಟ್ಟಡ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಕರಾರು
ಪತ್ರವನ್ನು ಸರಿಯಾಗಿ ಓದಿಕೊಳ್ಳಿ. ಆಸ್ತಿಯ ಖರೀದಿ ಹೇಗೆ ಆಗಿದೆ, ಜಮೀನನ್ನು ಹೇಗೆ ಸ್ವಾಧೀನ ಮಾಡಿಕೊಳ್ಳಲಾಗಿದೆ, ನಕ್ಷೆ ಮಂಜೂರಾತಿ ಮುಂತಾದ ಅಗತ್ಯ ಮಾಹಿತಿ ಅದರಲ್ಲಿರುತ್ತದೆ. ಒಂದಷ್ಟು ಸಮಯ ಕೊಟ್ಟು ಅದನ್ನೆಲ್ಲಾ ಗಮನಿಸಿದ ಮೇಲೆ ಸಮಾಧಾನವಾದರೆ ಖರೀದಿಸುವ ಬಗ್ಗೆ ತೀರ್ಮಾನಕ್ಕೆ ಬನ್ನಿ.

ನಿಯಮ ಉಲ್ಲಂಘನೆ: ಆಸ್ತಿಯ ಪ್ರದೇಶದಲ್ಲಿ ಹೈಟೆನ್ಶನ್ ವಯರ್ ಇದೆಯೇ, ರಾಜಕಾಲುವೆ ಸಮೀಪದಲ್ಲಿದೆಯೇ, ಬಫರ್ ಜೋನ್ನಲ್ಲಿ ಜಮೀನು ಇದೆಯೇ ಎಂಬ ವಿವರ ಪಡೆಯಿರಿ. ಮಾಸ್ಟರ್ ಪ್ಲ್ಯಾನ್ ಪ್ರಕಾರ ಕಟ್ಟಡ ಹೇಗೆ ನಿರ್ಮಾಣವಾಗುತ್ತದೆ, ಎಷ್ಟು ಕ್ಲಬ್ಹೌಸ್ಗಳು ಬರುತ್ತವೆ, ವಾಹನ ನಿಲುಗಡೆಗೆ ಎಷ್ಟು ಜಾಗ ಇದೆ, ಮಕ್ಕಳಿಗೆ ಆಟಕ್ಕೆ ಜಾಗ ಮೀಸಲಿದೆಯೇ, ವಿದ್ಯುತ್ ಸರಬರಾಜು, ನೀರು ಸರಬರಾಜು, ಎಸ್ಟಿಪಿ, ಅಗ್ನಿ ಸುರಕ್ಷತೆ... ಹೀಗೆ ಎಲ್ಲ ಆಯಾಮಗಳಲ್ಲೂ ಪರಿಶೀಲಿಸುವುದನ್ನು ಮರೆಯಬೇಡಿ. ಎಲ್ಲದಕ್ಕಿಂತ ಮುಖ್ಯವಾಗಿ ಆಸ್ತಿಯ ಟೈಟಲ್ ಕಾನೂನುಬದ್ಧವಾಗಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ.

ಜಂಟಿಯಾಗಿ ಆಸ್ತಿಯ ಅಭಿವೃದ್ಧಿಯಾಗುತ್ತಿದೆಯೇ ಅಥವಾ ಒಬ್ಬರೇ ಮಾಲೀಕರು ಆಸ್ತಿ ನಿರ್ಮಾಣ
ಮಾಡುತ್ತಿರುವರೇ ನೋಡಿಕೊಳ್ಳಿ. ಒಟ್ಟಾರೆಯಾಗಿ ಆಸ್ತಿ ವಿವಾದ ರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಆಸ್ತಿಯನ್ನು ಕೊಳ್ಳುವ ತೀರ್ಮಾನಕ್ಕೆ ಬರುವ ಮುನ್ನ ಆಸ್ತಿ ದಾಖಲೆಗಳ ಪರಿಶೀಲನೆಯಲ್ಲಿ ಪಕ್ವತೆ ಹೊಂದಿರುವ ಕಾನೂನು ತಜ್ಞರ ನೆರವು ಪಡೆಯಿರಿ.

ರೇರಾ ನೋಂದಾಯಿತ ನಿರ್ಮಾಣ ಸಂಸ್ಥೆಯಿಂದ ಆಸ್ತಿ ಖರೀದಿಸುವುದರಿಂದ ಆಗುವ ಲಾಭವೇನು?

ರೇರಾದಲ್ಲಿ ನೋಂದಣಿಯಾಗಿರುವ ಸಂಸ್ಥೆಗಳಿಂದ ಆಸ್ತಿ ಖರೀದಿಸಿದಾಗ ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ನಿರ್ಮಾಣ ಸಂಸ್ಥೆ ವರ್ತಿಸಬೇಕಾಗುತ್ತದೆ. ರೇರಾ ಅಡಿಯಲ್ಲಿನ ಕಟ್ಟಡ ನಿರ್ಮಾಣ ಸಂಸ್ಥೆಯು ಆಸ್ತಿ ಖರೀದಿದಾರರಿಂದ ಪಡೆದ ಶೇ 70ರಷ್ಟು ಮೊತ್ತವನ್ನು ಯೋಜನೆಗಾಗಿ ತೆರೆದ ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇರಿಸಬೇಕಾಗುತ್ತದೆ. ಖಾತೆಯಲ್ಲಿರುವ ಹಣವನ್ನು ನಿರ್ದಿಷ್ಟ ಮತ್ತು ಸೂಚಿತ ಆಸ್ತಿಯ ಆಭಿವೃದ್ಧಿಗೆ ಮಾತ್ರ ಬಳಸಬೇಕಾಗುತ್ತದೆ. ಹೀಗಿದ್ದಾಗ ಬಿಲ್ಡರ್ಗಳಿಂದ ಹಣದ ದುರ್ಬಳಕೆ ತಪ್ಪುತ್ತದೆ. ಇದಲ್ಲದೆ ರೇರಾ ಅಡಿಯಲ್ಲಿ ನಿರ್ದಿಷ್ಟ ಯೋಜನೆಯನ್ನು ಆಭಿವೃದ್ಧಿಪಡಿಸುವಾಗ ಅದರ ನೋಂದಣಿ ಸಹ ಕಡ್ಡಾಯ.

ವಾಣಿಜ್ಯ ಮತ್ತು ವಸತಿ ಕಟ್ಟಡಗಳಿಗೂ ರೇರಾ ಅನ್ವಯಿಸುತ್ತದೆ. ಕಟ್ಟಡ ನಿರ್ಮಾಣವಾದ 5 ವರ್ಷಗಳಲ್ಲಿ ಏನಾದರೂ ಗಂಭೀರ ದೋಷಗಳು ಕಂಡುಬಂದರೆ ನಿರ್ಮಾಣ ಸಂಸ್ಥೆ ಅದರ ಹೊಣೆ ಹೊರಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಆಸ್ತಿಯನ್ನು ಖರೀದಿದಾರರಿಗೆ ಹಸ್ತಾಂತರಿಸುವ ಜವಾಬ್ದಾರಿಯೂ ರೇರಾ ವ್ಯಾಪ್ತಿಗೆ ಬರುತ್ತದೆ. ಯೋಜನೆ ಮತ್ತು ಒಪ್ಪಂದದಲ್ಲಿ ಪೂರ್ವಾನುಮತಿಯಿಲ್ಲದೆ ಯಾವುದೇ ಬದಲಾವಣೆ ಮಾಡುವಂತಿಲ್ಲ. ರೇರಾ ಅಡಿ ನೋಂದಾಯಿತ ಬಿಲ್ಡರ್ಗಳು ಎಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕಟ್ಟಡ ನಿರ್ಮಾಣ ವಿಳಂಬವಾದಲ್ಲಿ ಗ್ರಾಹಕರಿಗೆ ಮೊತ್ತ ವಾಪಸ್ ಮಾಡಬೇಕಾಗುತ್ತದೆ. ಇದರ ಜೊತೆ ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ರೇರಾ ನೋಂದಾಯಿತ ಆಸ್ತಿ ಖರೀದಿಸುವುದರಿಂದ ವಂಚನೆಗಳನ್ನು ತಡೆಯುವ ಜೊತೆಗೆ ಆಸ್ತಿಗಳ ಹಸ್ತಾಂತರದಲ್ಲಿನ ವಿಳಂಬ ನಿಯಂತ್ರಿಸಲು ಸಾಧ್ಯ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.