ಯು.ಪಿ. ಪುರಾಣಿಕ್

ಚಂದ್ರಯ್ಯ, ಯಲಹಂಕ, ಬೆಂಗಳೂರು

ನನ್ನ ವಯಸ್ಸು 57. ನಾನು ಒಂದು ಬ್ಯಾಂಕ್ನಲ್ಲಿ ವ್ಯವಹಾರಕ್ಕೋಸ್ಕರ ₹ 2.50 ಲಕ್ಷ ಸಾಲ ಪಡೆದಿದ್ದೆ. ಕಳೆದೆರಡು ವರ್ಷಗಳಿಂದ ವ್ಯವಹಾರ ಸರಿಯಾಗಿ ನಡೆಯದೆ ಸಾಲ ಮರುಪಾವತಿಸಲಾಗಲಿಲ್ಲ. ಸಾಲ ಎನ್ಪಿಎ ಆಗಿ ನೋಟಿಸ್ ಜಾರಿ ಮಾಡಿದ್ದಾರೆ. ಒಮ್ಮೆಲೇ ಮರುಪಾವತಿಸುವುದಾದರೆ ₹ 1.75 ಲಕ್ಷ ಕೊಡಿ ಎನ್ನುತ್ತಾರೆ. ನಾನು ಏನಾದರೂ ಮಾಡಿ ₹ 1.75 ಲಕ್ಷ ತುಂಬಿ ಸಾಲಮುಕ್ತನಾಗಲು ಇಚ್ಛಿಸಿದ್ದೇನೆ. ನನಗೆ ಊರಿನಲ್ಲಿ ಪಿತ್ರಾರ್ಜಿತ ಒಂದು ನಿವೇಶನ ಇದೆ. ಅಲ್ಲಿ ಮನೆ ಕಟ್ಟಲು ₹ 15 ಲಕ್ಷ ಸಿಗಬಹುದೇ ತಿಳಿಸಿ.

ಉತ್ತರ: ಓರ್ವ ವ್ಯಕ್ತಿ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಯಿಂದ ಸಾಲ ಪಡೆದು ಸುಸ್ತಿದಾರನಾದಲ್ಲಿ ಅಥವಾ ಎಷ್ಟಾದರಷ್ಟು ಸಾಲ ತುಂಬಿ ಸಾಲ ತೀರಿಸುವಲ್ಲಿ ಆತನ ಮುಂದಿನ ಸಾಲ ಪಡೆಯುವ ಸಾಮರ್ಥ್ಯ ಕುಂದುತ್ತದೆ. ಆರ್ಥಿಕ ಸಂಸ್ಥೆಗಳು, ಬ್ಯಾಂಕ್ಗಳು ಸಾಲ ವಿತರಿಸುವ ಮುನ್ನ ಕ್ರೆಡಿಟ್ ರೇಟಿಂಗ್ ಕಂಪನಿಗಳನ್ನು ವಿಚಾರಿಸಿ ನಂತರವೇ ಸಾಲ ನೀಡುತ್ತವೆ.

ನಿಮ್ಮ ವಯಸ್ಸಿಗೆ ಕೂಡಾ ಗೃಹ ಸಾಲ ದೊರೆಯುವುದಿಲ್ಲ. ಇದೇ ವೇಳೆ ಗೃಹ ಸಾಲ ₹ 15 ಲಕ್ಷ ಪಡೆದಲ್ಲಿ, ಸಾಲ ಮರು ಪಾವತಿಸುವ ಸಾಮರ್ಥ್ಯ ಕೂಡಾ ನಿಮ್ಮಲ್ಲಿ ಇಲ್ಲ. ಸದ್ಯಕ್ಕೆ ಮನೆ ಕಟ್ಟುವ ಕೆಲಸ ಮುಂದೂಡಿ. ಸುಸ್ತಿದಾರರಾದರೆ ಮುಂದೆ ಸಾಲ ದೊರೆಯುವುದು ಕಷ್ಟ. ₹ 1.75 ಲಕ್ಷ ಪಾವತಿಸಿ ಸಾಲಮುಕ್ತರಾಗಿರಿ.

ಓರ್ವ ವ್ಯಕ್ತಿ ಇನ್ನೊಬ್ಬರಿಗೆ ಚೆಕ್ ಕೊಟ್ಟು, ಆ ಚೆಕ್ ಡಿಸ್ ಆನರ್ ಆದಲ್ಲಿ ಕೂಡಾ ವ್ಯಕ್ತಿಯ ಕ್ರೆಡಿಟ್ ರೇಟಿಂಗ್ ಕಡಿಮೆಯಾಗುತ್ತದೆ. ಅದೇ ರೀತಿ, ಇನ್ನೊಬ್ಬರ ಸಾಲಕ್ಕೆ ಜಾಮೀನು ಹಾಕಿ, ಅಂತಹ ಸಾಲ ಸುಸ್ತಿಯಾದರೂ ಜಾಮೀನುದಾರರ ಕ್ರೆಡಿಟ್ ರೇಟಿಂಗ್ ಕಡಿಮೆಯಾಗುತ್ತದೆ.

ತಿಪ್ಪಣ್ಣವರ್, ಸಿಂದಗಿ

ನಾನು ಸಣ್ಣ ಉದ್ದಿಮೆ ಮಾಡಿ ಜೀವಿಸುತ್ತಿದ್ದೇನೆ. ನನ್ನ ಆದಾಯ ಚೆನ್ನಾಗಿದೆ. ಬ್ಯಾಂಕ್ನಲ್ಲಿ ಗೃಹ ಸಾಲ ಹಾಗೂ ವಾಹನ ಸಾಲ ಮಾಡಿರುತ್ತೇನೆ. ಒಂದು ಚೀಟಿ ಹಾಕಿದ್ದು, ಅದು ಈಗ ₹ 4 ಲಕ್ಷಕ್ಕೆ ಬರುತ್ತಿದೆ. ಈ ಹಣ ಸಾಲಕ್ಕೆ ಜಮೆ ಮಾಡುವುದಾದರೆ ಯಾವ ಸಾಲಕ್ಕೆ ಜಮೆ ಮಾಡಲಿ?

ಉತ್ತರ: ಚಿಟ್ ಫಂಡ್ನಿಂದ ಬರುವ ₹ 4 ಲಕ್ಷವನ್ನು ವಾಹನ ಸಾಲಕ್ಕೆ ಜಮೆ ಮಾಡಿ. ಪ್ರಾಯಶಃ ವಾಹನ ಸಾಲ ಸಂಪೂರ್ಣ ತೀರುತ್ತದೆ. ಗೃಹ ಸಾಲದ ಬಡ್ಡಿಗಿಂತ ವಾಹನ ಸಾಲದ ಬಡ್ಡಿದರ ಹೆಚ್ಚಿಗೆ ಇದ್ದು, ಈ ಸಾಲ ತೀರಿಸುವುದರಿಂದ ನಿಮಗೆ ಅನುಕೂಲವಾಗುತ್ತದೆ. ಜತೆಗೆ ಗೃಹ ಸಾಲ ದೀರ್ಘಾವಧಿ ಸಾಲವಾಗಿದ್ದು, ನೀವು ಮುಂದಿನ ವರ್ಷಗಳಲ್ಲಿ ಇಎಂಐ ಕಟ್ಟುವಾಗ ಹಣದುಬ್ಬರದಿಂದಾಗಿ ಸಾಲ ತೀರಿಸುವುದು ಸುಲಭ ಸಾಧ್ಯ.

ನೀವು ಆದಾಯ ತೆರಿಗೆಗೆ ಮುಂದೆ ಒಳಗಾಗಬಹುದು ಅಥವಾ ಈಗಾಗಲೇ ತೆರಿಗೆಗೆ ಒಳಗಾಗಿರಬಹುದು. ಗೃಹ ಸಾಲದ ಕಂತು ಸೆಕ್ಷನ್ 80ಸಿ ಹಾಗೂ ಬಡ್ಡಿ 24 (ಬಿ) ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಅನುಕೂಲವಾಗಲಿದೆ. ಚೀಟಿ ವ್ಯವಹಾರ ಎಷ್ಟು ಸುರಕ್ಷಿತ ಎನ್ನುವುದು ಹೇಳಲು ಸಾಧ್ಯವಿಲ್ಲ. ಚೀಟಿಗೆ ತುಂಬುವ ಹಣ ಆರ್.ಡಿ ಮಾಡಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.