ಮುಂಬೈ: ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಬಗ್ಗೆ ಹೆಚ್ಚುತ್ತಿರುವ ಆಶಾವಾದದ ಮಧ್ಯೆ, ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡವು.

ಹೊಸ ವಿದೇಶಿ ನಿಧಿಯ ಒಳಹರಿವು ಮತ್ತು ಐಟಿ ಷೇರುಗಳಲ್ಲಿನ ಖರೀದಿಯು ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಏರಿಕೆಗೆ ಕಾರಣವಾದವು.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 734.36 ಅಂಶಗಳಷ್ಟು ಜಿಗಿದು 85,160.70ರಲ್ಲಿ ವಹಿವಾಟು ಆರಂಭಿಸಿತ್ತು. 50 ಷೇರುಗಳ ಎನ್ಎಸ್ಇ ನಿಫ್ಟಿ 198.3 ಅಂಶಗಳಷ್ಟು ಜಿಗಿದು 26,066.90ರಲ್ಲಿ ವಹಿವಾಟು ಆರಂಭಿಸಿತ್ತು.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಇನ್ಫೊಸಿಸ್, ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರ, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಲಾಭ ಗಳಿಸಿದವು. ಆದರೂ, ಎಟರ್ನಲ್ ಮತ್ತು ಬಜಾಜ್ ಫಿನ್ಸರ್ವ್ ನಷ್ಟ ಕಂಡಿವೆ.

ಭಾರತ ಮತ್ತು ಅಮೆರಿಕ ನಡುವಿನ ಸನ್ನಿಹಿತ ವ್ಯಾಪಾರ ಒಪ್ಪಂದದ ವರದಿಗಳು ಮಾರುಕಟ್ಟೆ ವಲಯಗಳಲ್ಲಿ ಸದ್ದು ಮಾಡುತ್ತಿವೆ. ನಿಫ್ಟಿಯ ಇಂದಿನ ಮಾರುಕಟ್ಟೆ ಪ್ರತಿಕ್ರಿಯೆಯು ಇದನ್ನು ದೃಢಪಡಿಸುತ್ತದೆ. ಹಬ್ಬದ ಋತುವಿನಲ್ಲಿ ಈಗಾಗಲೇ ಮಾರುಕಟ್ಟೆ ಏರಿಕೆಗೆ ಸಾಕ್ಷಿಯಾಗಿದ್ದು, ನಿಫ್ಟಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಬಹುದು ಎಂದು ವರದಿ ತಿಳಿಸಿದೆ.

ಏಷ್ಯಾ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದರೆ, ಜಪಾನ್ನ ನಿಕ್ಕಿ 225 ಸೂಚ್ಯಂಕ, ಶಾಂಘೈನ ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಇಳಿಕೆ ಕಂಡಿವೆ.

ಅಮೆರಿಕ ಮಾರುಕಟ್ಟೆಗಳು ಬುಧವಾರ ಇಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.