ಮುಂಬೈ (ಪಿಟಿಐ): ಹಣದುಬ್ಬರ ಇಳಿಕೆ, ಕೈಗಾರಿಕಾ ಸೂಚ್ಯಂಕದ ಪ್ರಗತಿ ಹಾಗೂ ರೂಪಾಯಿ ಚೇತರಿಕೆಯು ಶುಕ್ರವಾರಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 373 ಅಂಶ ಜಿಗಿತ ಕಂಡು 38, 090 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಗಿದೆ. ಸೆಪ್ಟೆಂಬರ್ 7ರ ನಂತರದ (38,389 ಅಂಶ) ಗರಿಷ್ಠ ಮಟ್ಟದ ವಹಿವಾಟು ಅಂತ್ಯ ಇದಾಗಿದೆ. ಬುಧವಾರ 304 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 145 ಅಂಶ ಏರಿಕೆ ಕಂಡು 11,515 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಿಯಲ್ ಎಸ್ಟೇಟ್, ವಿದ್ಯುತ್, ಗ್ರಾಹಕ ಬಳಕೆ ವಸ್ತುಗಳು ಹಾಗೂ ಲೋಹ ವಲಯದ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡುಕೊಂಡವು.

ವೇದಾಂತ ಷೇರುಗಳು ಶೇ 5.25 ರಷ್ಟು ಗರಿಷ್ಠ ಏರಿಕೆ ಕಂಡುಕೊಂಡರೆ,ಇನ್ಫೊಸಿಸ್, ಕೋಲ್ ಇಂಡಿಯಾ ಷೇರುಗಳ ಮೌಲ್ಯ ಇಳಿಕೆಯಾಗಿದೆ.

ಸಕಾರಾತ್ಮಕ ಅಂಶಗಳು:ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರ 10 ತಿಂಗಳ ಕನಿಷ್ಠ ಮಟ್ಟವಾದ 3.69ಕ್ಕೆ ಇಳಿಕೆಯಾಗಿದೆ.ಸಗಟು ಹಣದುಬ್ಬರ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ತಗ್ಗಿದೆ. ಇನ್ನು ಜುಲೈ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಶೇ 6.6ಕ್ಕೆ ಏರಿಕೆಯಾಗಿದೆ.ಕಚ್ಚಾ ತೈಲ ದರ ಇಳಿಕೆಯಿಂದಾಗಿಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರ65 ಪೈಸೆಯಷ್ಟು ಚೇತರಿಸಿಕೊಂಡಿದ್ದು 71.53ರಂತೆ ವಹಿವಾಟು ನಡೆಸಿತು.ಈ ಅಂಶಗಳು ಷೇರುಪೇಟೆಯಲ್ಲಿ ಹೊಸ ಉತ್ಸಾಹ ಮೂಡಿಸಿವೆ.

ದೇಶದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎನ್ನುವ ಅಂಶವು ಉತ್ತಮ ಖರೀದಿ ವಹಿವಾಟಿಗೆ ಕಾರಣವಾಯಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ರೂಪಾಯಿ ಚೇತರಿಕೆಯುದೇಶಿ ಹೂಡಿಕೆಗೆ ಉತ್ತೇಜನ ನೀಡಿದ್ದು, ಸೂಚ್ಯಂಕಗಳು ಚೇತರಿಕೆ ಹಾದಿಗೆ ಮರಳುವಂತಾಯಿತು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

‘ಅಮೆರಿಕ ಮತ್ತು ಚೀನಾ ಮಧ್ಯೆ ಮೂಡಿರುವ ವಾಣಿಜ್ಯ ಬಿಕ್ಕಟ್ಟು ಬಗೆಹರಿಯವ ನಿರೀಕ್ಷೆ ವ್ಯಕ್ತವಾಗಿದೆ. ಹೀಗಾಗಿಜಾಗತಿಕ ಷೇರುಪೇಟೆಗಳ ವಹಿವಾಟು ಸಹ ಸಕಾರಾತ್ಮಕ ಮಟ್ಟದಲ್ಲಿ ಅಂತ್ಯವಾಗಿದೆ. ಬಿಕ್ಕಟ್ಟು ಹೆಚ್ಚಾದಲ್ಲಿ ದೇಶಿ ಮಾರುಕಟ್ಟೆಯಲ್ಲಿ ಮತ್ತೆ ಏರಿಳಿತ ಉಂಟಾಗಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಜಪಾನ್ನ ನಿಕೇಯ್ ಶೇ 1.20, ಹಾಂಕಾಂಗ್ನ ಹಾಂಗ್ ಸೆಂಗ್ ಶೇ 0.97ರಷ್ಟು ಏರಿಕೆ ಕಂಡುಕೊಂಡಿವೆ. ಶಾಂಘೈ ಕಾಂಪೊಸಿಟ್ ಶೇ 0.18ರಷ್ಟು ಇಳಿಕೆ ಕಂಡಿದೆ.

ಯುರೋಪ್ ವಲಯದಲ್ಲಿ, ಫ್ರಾಂಕ್ಫರ್ಟ್ ಡಿಎಕ್ಸ್ ಶೇ 0.59, ಪ್ಯಾರಿಸ್ ಸಿಎಸಿ ಶೇ 0.58, ಲಂಡನ್ನ ಎಫ್ಟಿಎಸ್ಇ ಶೇ 0.42 ರಷ್ಟುಏರಿಕೆಯಾಗಿವೆ.

₹ 541 ಕೋಟಿ – ದೇಶಿ ಸಾಂಸ್ಥಿಕ ಹೂಡಿಕೆ

₹ 1,086 ಕೋಟಿ – ವಿದೇಶಿ ಬಂಡವಾಳ ಹೊರಹರಿವು

1.62 % – ಬಿಎಸ್ಇ ಮಧ್ಯಮ ಶ್ರೇಣಿ ಸೂಚ್ಯಂಕದ ಏರಿಕೆ

1.38 ₹ – ಬಿಎಸ್ಇ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕದ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.