ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಎಲ್ಲ ಬಾರಿಯೂ ಲಾಭವೇ ಆಗುತ್ತದೆ ಎಂದಿಲ್ಲ, ನಷ್ಟವೂ ಆಗಬಹುದು. ಇದಕ್ಕಾಗೇ ತೆರಿಗೆ ನಿಯಮಗಳಲ್ಲಿ ಕೆಲವು ಅನುಕೂಲಗಳನ್ನು ಒದಗಿಸಲಾಗಿದೆ. ಷೇರುಪೇಟೆಯಲ್ಲಿ ವ್ಯವಹರಿಸುವ ಮುನ್ನ ಈ ವಿಚಾರಗಳನ್ನು ಅರಿತು ಮುನ್ನಡೆಯಬೇಕು.

* ನಷ್ಟವನ್ನು ಸರಿದೂಗಿಸುವುದು ಎಂದರೇನು?: ನಷ್ಟವನ್ನು ಸರಿದೂಗಿಸುವುದು (Set off of *osses) ಅಂದರೆ ನಿರ್ದಿಷ್ಟ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ ಆದ ಲಾಭ ಮತ್ತು ನಷ್ಟವನ್ನು ಹೂಂದಾಣಿಕೆ ಮಾಡುವ ಪ್ರಕ್ರಿಯೆ. ಉದಾಹರಣೆಗೆ, ನೀವು ನಿರ್ದಿಷ್ಟ ವರ್ಷದಲ್ಲಿ ಷೇರು ಮಾರುಕಟ್ಟೆ ವಹಿವಾಟು ನಡೆಸಿದಾಗ ಒಮ್ಮೆ ₹ 40 ಸಾವಿರ ಲಾಭವಾಗುತ್ತದೆ. ಮತ್ತೊಮ್ಮೆ ₹ 10 ಸಾವಿರ ನಷ್ಟವಾಗುತ್ತದೆ ಎಂದು ಭಾವಿಸೋಣ. ಈ ಲಾಭ-ನಷ್ಟವನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯನ್ನು ನಷ್ಟ ಸರಿದೂಗಿಸುವುದು (Set off of *osses) ಎನ್ನಬಹುದು.

* ನಷ್ಟ ಮುಂದಕ್ಕೊಯ್ಯುವುದು ಎಂದರೇನು?: ಒಂದೊಮ್ಮೆ ನಿಮಗೆ ನಿರ್ದಿಷ್ಟ ವರ್ಷದಲ್ಲಿ ಷೇರು ಹೂಡಿಕೆಯಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಇದ್ದರೆ, ಆ ನಷ್ಟದ ಮೊತ್ತವನ್ನು ನೀವು ಮುಂದಿನ ವರ್ಷಕ್ಕೆ ಪರಿಗಣಿಸಿ ಮುಂದಕ್ಕೊಯ್ದು (Carry Forward) ಸರಿದೂಗಿಸಿಕೊಳ್ಳಬಹುದು. ಇದೇ ರೀತಿ ಎಂಟು ವರ್ಷಗಳ ಅವಧಿಗೆ ನಷ್ಟವನ್ನು ಮುಂದಕ್ಕೊಯ್ಯುವ ಅವಕಾಶವಿದೆ. ಆದರೆ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರೆ ಮಾತ್ರ ಈ ಅನುಕೂಲ ಸಿಗುತ್ತದೆ.

* ಯಾವ ನಷ್ಟವನ್ನು ಯಾವುದರ ಜತೆ ಸರಿದೂಗಿಸಬಹುದು?: ದೀರ್ಘಾವಧಿ ಬಂಡವಾಳ ನಷ್ಟ (*TC*- *ong Term Capita* *oss) ಆದಾಗ ಅದನ್ನು ದೀರ್ಘಾವಧಿ ಬಂಡವಾಳ ಗಳಿಕೆ (*TCG) ಜತೆ ಮಾತ್ರ ಸರಿದೂಗಿಸಬಹುದು. ಆದರೆ, ಅಲ್ಪಾವಧಿ ಬಂಡವಾಳ ನಷ್ಟ (STC* – Short Term Capita* *oss) ಉಂಟಾದಾಗ ಅದನ್ನು ಅಲ್ಪಾವಧಿ ಬಂಡವಾಳ ಗಳಿಕೆ (STCG) ಅಥವಾ ದೀರ್ಘಾವಧಿ ಬಂಡವಾಳ ಗಳಿಕೆ (*TCG) ಜತೆ ಹೂಂದಿಸಬಹುದು.

* ನಷ್ಟ ಸರಿದೂಗಿಸುವುದು ಹೇಗೆ? ಉದಾಹರಣೆ- 1: ನೀವು ಒಂದು ವರ್ಷದಲ್ಲಿ 10 ಬಾರಿ ಷೇರುಗಳ ಮಾರಾಟ ಮಾಡಿದ್ದು, ಅದರಲ್ಲಿ ಎಂಟು ಬಾರಿ ಲಾಭ, ಎರಡು ಬಾರಿ ನಷ್ಟ ಅನುಭವಿಸಿದ್ದೀರಿ ಎಂದಿಟ್ಟುಕೊಳ್ಳಿ. ಎಂಟು ಬಾರಿ ಷೇರುಗಳನ್ನು ಮಾರಾಟ ಮಾಡಿದಾಗ ಒಟ್ಟು ₹ 60 ಸಾವಿರ ಲಾಭವಾಗಿದೆ ಎಂದು ಭಾವಿಸೋಣ. ಇನ್ನುಳಿದ ಎರಡು ಬಾರಿ ಷೇರುಗಳನ್ನು ಮಾರಾಟ ಮಾಡಿದಾಗ ₹ 50 ಸಾವಿರ ನಷ್ಟವಾಗಿದೆ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ ನೀವು ₹ 60 ಸಾವಿರ ಲಾಭದ ಮೇಲೆ ತೆರಿಗೆ ಕಟ್ಟಬೇಕಿಲ್ಲ. ₹ 60 ಸಾವಿರದಲ್ಲಿ ₹ 50 ಸಾವಿರವನ್ನು ಕಳೆದು ₹ 10 ಸಾವಿರದ ಗಳಿಕೆ ಮೇಲೆ ಮಾತ್ರ ತೆರಿಗೆ ಕಟ್ಟಬೇಕಾಗುತ್ತದೆ.

* ನಷ್ಟ ಸರಿದೂಗಿಸುವುದು ಹೇಗೆ? ಉದಾಹರಣೆ- 2: ನೀವು 2021ರಲ್ಲಿ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ವೇಳೆ ಷೇರು ಖರೀದಿಸಿ, ಕೂಡಲೇ ಮಾರಾಟ ಮಾಡಿ ₹ 5 ಸಾವಿರ ನಷ್ಟ ಮಾಡಿಕೊಂಡಿದ್ದೀರಿ ಎಂದುಕೊಳ್ಳೋಣ. ಇದೇ ವೇಳೆ ನೀವು 2018-19 ರಲ್ಲಿ ಖರೀದಿಸಿದ್ದ ಷೇರುಗಳನ್ನು 2021ರಲ್ಲಿ ಮಾರಾಟ ಮಾಡಿ ₹ 50 ಸಾವಿರ ಲಾಭ ಗಳಿಸಿದ್ದೀರಿ ಎಂದು ಭಾವಿಸೋಣ. ಇಂತಹ ಸಂದರ್ಭದಲ್ಲಿ ₹ 5 ಸಾವಿರದ ನಷ್ಟ ಕಳೆದು ₹ 45 ಸಾವಿರದ ಮೇಲೆ (50,000- 5,000= 45,000) ಮಾತ್ರ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.