ಮುಂಬಯಿ: ಸೋಮವಾರ ಮಹಾಪತನ ಕಂಡು ಆತಂಕ ಮೂಡಿಸಿದ್ದ ಮುಂಬಯಿ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ, ಮಂಗಳವಾರ ವಹಿವಾಟು ಆರಂಭದಿಂದಲೇ ಚೇತರಿಸಿಕೊಂಡಿದ್ದು, ಭಾರತೀಯ ಹೂಡಿಕೆದಾರರಿಗೆ ಧೈರ್ಯ ತುಂಬಿದೆ.

ಸೋಮವಾರ ದಿನದ ವಹಿವಾಟು ಮುಗಿದಾಗ, 30 ಷೇರುಗಳ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 1,089.18 ಅಂಕ ಅಥವಾ ಶೇ.1.49 ಚೇತರಿಕೆ ಕಂಡು 74,227.08 ರಲ್ಲಿ ಸ್ಥಿರವಾಯಿತು. ಒಂದು ಹಂತದಲ್ಲಿ ಅದು 1,721.49 ಅಂಕ ಏರಿಕೆ ಕಂಡು (ಶೇ.2.35) 74,859.39ಕ್ಕೆ ತಲುಪಿತ್ತು.

ಎನ್ಎಸ್ಇ ಸೂಚ್ಯಂಕ ನಿಫ್ಟಿ ಕೂಡ 374.25 ಅಂಕ ಅಥವಾ ಶೇ.1.69 ಚೇತರಿಕೆ ದಾಖಲಿಸಿ 22,535.85 ಗೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ 535.6 ಅಂಕಗಳಷ್ಟು ಏರಿಕೆ ಕಂಡು (ಶೇ.2.41) 22,697.20ಕ್ಕೆ ತಲುಪಿತ್ತು..

ಸೋಮವಾರ ಸಂಜೆ ಸೆನ್ಸೆಕ್ಸ್ 2,226.79 ಅಂಕ (ಶೇ. 2.95) ಹಾಗೂ ನಿಫ್ಟಿ 742.85 ಅಂಕ (ಶೇ.3.24) ಕುಸಿತ ದಾಖಲಿಸಿ ಆತಂಕ ಉಂಟು ಮಾಡಿತ್ತು. ದಿನದ ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ 3,939 ಅಂಶಗಳವರೆಗೂ ಇಳಿಕೆ ಕಂಡಿತ್ತು.

ಜಾಗತಿಕ ಮಾರುಕಟ್ಟೆಗಳಲ್ಲೂ ಮಂಗಳವಾರ ಸಾಕಷ್ಟು ಚೇತರಿಕೆ ಕಂಡುಬಂದಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೋದ ನಿಕ್ಕೀ 225 ಸೂಚ್ಯಂಕ, ಹಾಂಕಾಂಗ್ನ ಹ್ಯಾಂಗ್ ಸೆಂಗ್, ಶಾಂಘಾಯ್ನ ಎಸ್ಎಸ್ಇ ಕಾಂಪೊಸಿಟ್ ಸೂಚ್ಯಂಕ ಹಾಗೂ ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕಗಳು ಕೂಡ ಚೇತರಿಕೆ ದಾಖಲಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಸರಕುಗಳಿಗೆ ವಿಧಿಸಿದ ಸುಂಕದಿಂದಾಗಿ ಸೋಮವಾರದ ವಹಿವಾಟಿನಲ್ಲಿ ಜಾಗತಿಕ ಮಾರುಕಟ್ಟೆಯು ಮಹಾಪತನ ಕಂಡಿತ್ತು.

ಆದರೆ ಮಂಗಳವಾರ ಸೆನ್ಸೆಕ್ಸ್ ಮತ್ತು ನಿಫ್ಟಿ - ಎರಡೂ ಸೂಚ್ಯಂಕಗಳು ಶೇ.2ಕ್ಕಿಂತ ಹೆಚ್ಚು ಗಳಿಕೆ ದಾಖಲಿಸಿದ್ದು, ಅಮೆರಿಕ ಒಡ್ಡಿರುವ ಪ್ರತಿ ಸುಂಕದ ಕುರಿತು ಹಲವು ರಾಷ್ಟ್ರಗಳು ಮಾತುಕತೆಗೆ ಮುಂದಾಗಿವೆ ಎಂಬ ವರದಿಗಳು ಮಾರುಕಟ್ಟೆಯ ಚೇತರಿಕೆಗೆ ಪೂರಕವಾಯಿತು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಇದಲ್ಲದೆ, ನಾಳೆ (ಏ.9), ಭಾರತೀಯ ರಿಸರ್ವ್ ಬ್ಯಾಂಕ್ನ ನೀತಿ ನಿರ್ಣಯ ಸಮಿತಿಯ ಸಭೆ ಸೇರಲಿದ್ದು, ಶೇ.0.25ರಷ್ಟು ಬಡ್ಡಿದರ ಕಡಿತವಾಗುವ ನಿರೀಕ್ಷೆಯೂ ಮಾರುಕಟ್ಟೆಯ ಉತ್ತೇಜನಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.