ಅಮೆರಿಕ ಹೇರಿರುವ ಸುಂಕ ಮತ್ತು ಅದಕ್ಕೆ ಪ್ರತಿಯಾಗಿ ಇತರ ದೇಶಗಳು ತಾವೂ ಸುಂಕ ಹೇರುವ ಕ್ರಮವು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಡಬಹುದು ಎಂಬ ಭೀತಿಯಿಂದಾಗಿ ಮಾರುಕಟ್ಟೆಗಳು ಕುಸಿದಿವೆ. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳ, ಬೆಳವಣಿಗೆ ಕುಂಠಿತವಾಗಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆಯ ಕಾರಣದಿಂದಾಗಿ ಐ.ಟಿ ಮತ್ತು ಲೋಹ ವಲಯದ ಷೇರುಗಳು ಹೆಚ್ಚು ಕುಸಿತ ಕಂಡಿವೆ.
-ವಿನೋದ್ ನಾಯರ್, ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ
ಅಮೆರಿಕ ಷೇರುಪೇಟೆಗಳಲ್ಲಿ ಶುಕ್ರವಾರ ಕಂಡುಬಂದ ಕುಸಿತದ ನಂತರ, ವಿಶ್ವದ ಇತರ ಸೂಚ್ಯಂಕಗಳು ಕುಸಿಯುವುದು ಖಚಿತವಾಗಿತ್ತು. ಇಸ್ಪೀಟಿನ ಕಾರ್ಡ್ ಬಳಸಿ ಕಟ್ಟಿದ ಮನೆ ಕುಸಿದುಬಿದ್ದಂತೆ ಅವೂ ಕುಸಿದವು. ಟ್ರಂಪ್ ಘೋಷಿಸಿರುವ ಪ್ರತಿಸುಂಕವು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಭೀತಿ ಮನೆಮಾಡಿದೆ.
-ಪ್ರಶಾಂತ್ ತಾಪ್ಸೆ ಮೆಹ್ತಾ ಈಕ್ಟಿಟೀಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ