ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ಸುಂಕ ಯೋಜನೆ ಒಂದು ದೊಡ್ಡ ಜೂಜಾಟದ ರೀತಿ ಕಂಡುಬರುತ್ತಿದೆ. ಇದು ಜಾಗತಿಕ ವ್ಯಾಪಾರವನ್ನು ಅಮೆರಿಕಾಕ್ಕೆ ಪೂರಕವಾಗಿ ಬದಲಾಯಿಸಬಹುದು, ಅಥವಾ ಅಮೆರಿಕದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೂ ನೀಡಬಹುದು. ಹಾಗೆ ನೋಡಿದರೆ, ಇದರಿಂದ ಪ್ರಯೋಜನಗಳು ಮತ್ತು ಕಷ್ಟ ಎರಡೂ ತಲೆದೋರಲೂಬಹುದು. ಹೊಸ ಸುಂಕ ನೀತಿಗೆ ಸಂಬಂಧಿಸಿದಂತೆ ಶ್ವೇತಭವನ ಒಂದಷ್ಟು ರಿಯಾಯಿತಿಗಳನ್ನು ನೀಡುವ ಸಂದೇಶ ನೀಡಿದ್ದು, ಅಮೆರಿಕದ ಸುಂಕ-ಸಂತ್ರಸ್ತ ದೇಶಗಳು ಅಮೆರಿಕಕ್ಕೆ ಪೂರಕವಾಗಿ ಸ್ಪಂದಿಸಿದರೆ ಸುಂಕ ಕಡಿತಗೊಳಿಸಬಹುದು ಎಂದಿದೆ. ಆದರೆ ಈಗ ಷೇರು ಮಾರುಕಟ್ಟೆಗಳು ಕುಸಿದು, ಅಮೆರಿಕನ್ ಡಾಲರ್ ದುರ್ಬಲವಾಗಿರುವಾಗ, ಇಂತಹ ಸಮಾಲೋಚನೆಗಳು ಬುದ್ಧಿವಂತಿಕೆಯ ನಡೆಯಾಗಬಹುದೇ ಅಥವಾ ಅನಾಹುತಕಾರಿ ಆರ್ಥಿಕ ಅಪಾಯಕ್ಕೆ ಹಾದಿ ಮಾಡಿಕೊಡಬಹುದೇ?

ನಾವು ಅಮೆರಿಕದ ಈಗಿನ ಕಾರ್ಯತಂತ್ರದತ್ತ ಗಮನ ಹರಿಸೋಣ. ನೂತನ ಸುಂಕ ನೀತಿ ಅಮೆರಿಕಕ್ಕೆ ಇತರ ದೇಶಗಳ ಮೇಲೆ ಒಂದಷ್ಟು ಒತ್ತಡ ಹೇರುವ ಶಕ್ತಿಯನ್ನು ನೀಡುತ್ತದೆ. ಉದಾಹರಣೆಗೆ, ಟ್ರಂಪ್ ಒಂದು ವೇಳೆ ಟಿಕ್ಟಾಕ್ ಆ್ಯಪ್ನ ಚೀನೀ ಮಾಲೀಕ ಸಂಸ್ಥೆಯಾದ ಬೈಟ್ಡ್ಯಾನ್ಸ್ ಟಿಕ್ಟಾಕ್ ಅನ್ನು ಅಮೆರಿಕನ್ ಉದ್ಯಮಕ್ಕೆ ಮಾರಾಟ ಮಾಡಿದರೆ ಒಂದಷ್ಟು ಸುಂಕ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ. ಟ್ರಂಪ್ ಟಿಕ್ಟಾಕ್ ಆ್ಯಪ್ ಮಾಲೀಕತ್ವ ಒಂದು ಭದ್ರತಾ ವಿಚಾರ ಎಂದು ಪರಿಗಣಿಸಿದ್ದಾರೆ. "ಒಂದು ವೇಳೆ ಯಾವುದೇ ದೇಶ ಅಮೆರಿಕಕ್ಕೆ ಅನುಕೂಲಕರ ಕೊಡುಗೆ ನೀಡಲು ಮುಂದಾದರೆ, ನಾವು ಅವರೊಡನೆ ವಿನಾಯಿತಿಯ ಮಾತುಕತೆ ನಡೆಸಲು ಸಿದ್ಧರಿದ್ದೇವೆ" ಎಂದು ಟ್ರಂಪ್ ಏರ್ಫೋರ್ಸ್ ವನ್ ವಿಮಾನದಿಂದ ಮಾಧ್ಯಮಗಳಿಗೆ ಹೇಳಿದ್ದಾರೆ. ಒಂದು ವೇಳೆ ಚೀನಾ ಟ್ರಂಪ್ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರೆ, ಅಮೆರಿಕ ಒಂದು ಜನಪ್ರಿಯ ಆ್ಯಪ್ ಮೇಲೆ ನಿಯಂತ್ರಣ ಸಾಧಿಸಿ, ವ್ಯಾಪಾರ ಮಾತುಕತೆಯಲ್ಲಿ ಸಾಮರ್ಥ್ಯ ಸಾಧಿಸುವುದು ಅದಕ್ಕೆ ದೊಡ್ಡ ಗೆಲುವಾಗಬಹುದು. ಇಂತಹ ಒತ್ತಡ ಇತರ ದೇಶಗಳೂ ತಮ್ಮ ಮಾರುಕಟ್ಟೆಗಳನ್ನು ತೆರೆದು, ವಿಶೇಷವಾಗಿ ಚಿಪ್ ಉತ್ಪಾದನೆ ಮತ್ತು ಔಷಧ ಉತ್ಪಾದನೆಯನ್ನು ಅಮೆರಿಕದಲ್ಲಿ ನಡೆಸಿ, ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸಲು ನೆರವಾಗಬಹುದು. ಇದು ಅಮೆರಿಕಕ್ಕೆ ವಿದೇಶೀ ಪೂರೈಕೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಆಂತರಿಕವಾಗಿ ಹೆಚ್ಚು ಉದ್ಯೋಗ ಸೃಷ್ಟಿಸಲು ನೆರವಾಗಬಹುದೇ? ಎಂಬುದು ಕುತೂಹಲಕರ.

ಹಾಗೆಂದು ಈ ಕತೆಗೆ ಇನ್ನೊಂದು ಆಯಾಮವೂ ಇದೆ. ಕೋವಿಡ್ 19 ಸಾಂಕ್ರಾಮಿಕದ ಬಳಿಕ ಸಂಭವಿಸಿದ ಅತಿದೊಡ್ಡ ಷೇರು ಮಾರುಕಟ್ಟೆ ಕುಸಿತದಲ್ಲಿ, ಎಸ್&ಪಿ 500 ಕೇವಲ ಒಂದು ದಿನದಲ್ಲಿ 2.5 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿತು. ಇನ್ನು ಸಣ್ಣ ಸಂಸ್ಥೆಗಳತ್ತ ಕೇಂದ್ರಿತವಾಗಿರುವ ರಸೆಲ್ 2000 ತಾನು 2021ರಲ್ಲಿ ಸಾಧಿಸಿದ ಗರಿಷ್ಠ ಪ್ರಮಾಣದಿಂದ 20% ಕುಸಿತ ಕಂಡಿತು. ಇನ್ನು ಅಮೆರಿಕನ್ ಡಾಲರ್ ಮೌಲ್ಯ 1.5% ಕುಸಿತ ಕಂಡಿದ್ದು, ಬಾಂಡ್ ಮೌಲ್ಯಗಳೂ ಕುಸಿಯುತ್ತಿದ್ದು, ಜಗತ್ತಿನಾದ್ಯಂತ ಜನರು ಆತಂಕಕ್ಕೆ ಒಳಗಾಗಿರುವ ಸಂದೇಶ ರವಾನಿಸಿದೆ. ವ್ಯಾಪಾರದಲ್ಲಿ ಇಂತಹ ಅನಿರೀಕ್ಷಿತ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಣ್ಣ ಕಂಪನಿಗಳಿಗೆ ಕಷ್ಟವಾಗುತ್ತಿರುವುದರಿಂದ, ಅವುಗಳು ಅತಿಹೆಚ್ಚು ಕಷ್ಟಪಡುತ್ತಿವೆ. ಇದು ಕೇವಲ ಅಲ್ಪಕಾಲೀನ ಸಂಕಷ್ಟವೇ? ಅಥವಾ ಟ್ರಂಪ್ ಜಾರಿಗೆ ತಂದ ಸುಂಕಗಳು ಅಮೆರಿಕಕ್ಕೆ ಲಾಭಕ್ಕಿಂತಲೂ ಹೆಚ್ಚು ನಷ್ಟ ಉಂಟುಮಾಡಲಿವೆಯೇ? ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯೂ ಸಹ ಅಪಾರ ಹೆಚ್ಚಳ ಕಾಣುವ ಸಾಧ್ಯತೆಗಳಿದ್ದು, ಇದರಿಂದಾಗಿ ಆಹಾರ ಉತ್ಪನ್ನಗಳು ಮತ್ತು ಇಲೆಕ್ಟ್ರಾನಿಕ್ಸ್ನಂತಹ ದೈನಂದಿನ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗಲಿದೆ.

ಇನ್ನು ಹೆಚ್ಚಿನ ಗಮನ ಸೆಳೆದಿರುವ ಅಂಶವೆಂದರೆ ಟಿಕ್ಟಾಕ್ ಆ್ಯಪ್. ಅಮೆರಿಕದಲ್ಲಿ ಆ್ಯಪ್ ಮಾರಾಟಕ್ಕೆ ನೀಡಲಾದ ಗಡುವು ಸಮೀಪಿಸುತ್ತಿದೆ. ಆದರೆ, ಈ ಕುರಿತು ಒಂದು ಒಪ್ಪಂದ ರೂಪುಗೊಳ್ಳುತ್ತಿರುವುದರಿಂದ, ಟ್ರಂಪ್ ಈ ಗಡುವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ. ಒಂದು ವೇಳೆ ಇದು ಹೊಂದಾಣಿಕೆಯ ಸಂಕೇತವೇ? ಅಥವಾ ಟ್ರಂಪ್ ಅತಿಯಾಗಿ ಒತ್ತಡ ಹೇರುತ್ತಿದ್ದಾರೆಯೇ? ಸುಂಕದ ಕಾರಣದಿಂದಾಗಿ ಚೀನಾ ಅಮೆರಿಕಕ್ಕೆ ಪ್ರತಿರೋಧ ಒಡ್ಡಬಹುದು, ಅಥವಾ ಟಿಕ್ಟಾಕ್ ಆ್ಯಪನ್ನು ಉಳಿಸಲು ಪ್ರಯತ್ನ ನಡೆಸಬಹುದು. ಹಾಗೆಂದು ಕೇವಲ ಒಂದು ಆ್ಯಪ್ ಅನ್ನು ಗುರಿಯಾಗಿಸುವುದು ವಿಶಾಲ ಆರ್ಥಿಕತೆಗೆ ಹಾನಿ ಉಂಟುಮಾಡುವುದಕ್ಕೆ ಸಮವೇ ಎಂಬ ಪ್ರಶ್ನೆಗಳೂ ಮೂಡಬಹುದು.

ಜಗತ್ತಿನಾದ್ಯಂತ ಈಗ ಟ್ರಂಪ್ ಸುಂಕ ನೀತಿಯ ಪರಿಣಾಮಗಳು ಕಾಣಿಸುತ್ತಿವೆ. ಶುಕ್ರವಾರ ಭಾರತೀಯ ಔಷಧ ಷೇರುಗಳು ಮತ್ತು ಏಷ್ಯನ್ ಷೇರು ಮಾರುಕಟ್ಟೆಗಳು ಕುಸಿತ ಅನುಭವಿಸಿದವು. ಇಸ್ರೇಲ್ ತನ್ನ ಮೇಲೆ ಅಮೆರಿಕ ಹೇರಬಹುದಾದ ಸುಂಕವನ್ನು ತಪ್ಪಿಸಲು ಅಮೆರಿಕ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಿತು. ಆದರೂ ಅಮೆರಿಕ ಇಸ್ರೇಲ್ ಮೇಲೆ 17% ಸುಂಕ ವಿಧಿಸಿದೆ! ಯುರೋಪಿಯನ್ ಒಕ್ಕೂಟದ ಎಲ್ಲ ದೇಶಗಳ ಮೇಲೆ 20% ಸುಂಕ ವಿಧಿಸಿದ್ದರೆ, ಯುನೈಟೆಡ್ ಕಿಂಗ್ಡಮ್ ಮೇಲೆ ಕೇವಲ 10% ಸುಂಕ ವಿಧಿಸಲಾಗಿದೆ. ಇಂತಹ 'ಒಡೆದು ಆಳುವ ನೀತಿ' ಅಮೆರಿಕಕ್ಕೆ ಸಹಾಯ ಮಾಡುತ್ತಿದೆಯೇ? ಅಥವಾ ಅದರ ವಿರುದ್ಧ ಎಲ್ಲ ಸಹಯೋಗಿಗಳಿಗೆ ಒಗ್ಗೂಡಲು ನೆರವಾಗುತ್ತಿದೆಯೇ? ಇದು ಯೋಚಿಸಬೇಕಾದ ವಿಚಾರ.

ಟ್ರಂಪ್ ಇಂದಿಗೂ ಆತ್ಮವಿಶ್ವಾಸದ ಮಾತುಗಳನ್ನು ಆಡುತ್ತಿದ್ದಾರೆ. "ಮಾರುಕಟ್ಟೆಗಳು ಕ್ರಮೇಣ ಶಕ್ತಿ ಪಡೆದುಕೊಳ್ಳುತ್ತವೆ. ಅವುಗಳಿಗೆ ಕೊಂಚ ಸಮಯ ನೀಡಬೇಕು" ಎಂದು ಅವರು ಸಲಹೆ ನೀಡಿದ್ದಾರೆ. ಅದರೊಡನೆ, ಕಡಿಮೆಯಾಗುತ್ತಿರುವ ಇಂಧನ ದರ ಮತ್ತು ಬಡ್ಡಿ ದರಗಳು ಒಳ್ಳೆಯ ಸಂಕೇತ ಎಂದು ಅವರು ಪ್ರತಿಪಾದಿಸಿದ್ದಾರೆ. ಹಾಗೆಂದು ಅದು 2.5 ಟ್ರಿಲಿಯನ್ ಡಾಲರ್ ಮಾರುಕಟ್ಟೆ ನಷ್ಟಕ್ಕೆ ಪರಿಹಾರವಾದೀತೇ? ಹಿಂದಿನ ಅಧ್ಯಕ್ಷರು ಕೈಗೊಳ್ಳಲು ಸಾಧ್ಯವಾಗದ ಕಠಿಣವಾದ ಹೆಜ್ಜೆಯನ್ನು ಟ್ರಂಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ಬೆಂಬಲಿಗರು ಶ್ಲಾಘಿಸುತ್ತಿದ್ದಾರೆ. ಆದರೆ, ಟ್ರಂಪ್ ಟೀಕಾಕಾರರು ಈಗಾಗಲೇ ಮಾರುಕಟ್ಟೆ ಕಳೆದುಕೊಂಡಿರುವ ಹಣ, ಕುಸಿದ ನಂಬಿಕೆ ಸಂಭಾವ್ಯ ಪ್ರಯೋಜನಗಳಿಗಿಂತಲೂ ದೊಡ್ಡದು ಎನ್ನುತ್ತಿದ್ದಾರೆ.

ಒಂದು ವೇಳೆ ಟ್ರಂಪ್ ಏನಾದರೂ ಟಿಕ್ಟಾಕ್ ವ್ಯಾಪಾರ ಅಥವಾ ಬೃಹತ್ ಮಾರುಕಟ್ಟೆಗೆ ಪ್ರವೇಶದಂತಹ ಒಪ್ಪಂದ ಕೈಗೊಳ್ಳಲು ಸಾಧ್ಯವಾದರೆ, ಅವರು ಕೈಗೊಂಡ ಅಪಾಯಕಾರಿ ನಡೆ ಲಾಭದಾಯಕವಾದೀತು. ಇದರಿಂದ ಜಾಗತಿಕ ವ್ಯಾಪಾರದಲ್ಲಿ ಅಮೆರಿಕ ಇನ್ನಷ್ಟು ಶಕ್ತಿಶಾಲಿಯಾದೀತು. ಒಂದು ವೇಳೆ ಟ್ರಂಪ್ ಪಾಲಿಗೆ ಅಂತಹ ಯಾವುದೇ ಹೇಳಿಕೊಳ್ಳುವಂತಹ ಲಾಭದಾಯಕ ಒಪ್ಪಂದ ನಡೆಯದಿದ್ದರೆ, ಸುಂಕ ನೀತಿ ಅಮೆರಿಕ ಪಾಲಿಗೆ ವೆಚ್ಚದಾಯಕವಾಗಲಿದ್ದು, ಟ್ರಂಪ್ ನಿರ್ಧಾರ ಅವರ ದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೀಡು ಮಾಡಬಹುದು. ಈ ಕುರಿತ ವಾಸ್ತವ ಸಂಗತಿಗಳು ಈಗಾಗಲೇ ನಮ್ಮ ಮುಂದಿವೆ. ಮಾರುಕಟ್ಟೆಗಳು ಕುಸಿತ ಕಂಡಿವೆ, ಸುಂಕ ಹೆಚ್ಚಾಗುತ್ತಿದೆ, ಮತ್ತು ಅಭಿವೃದ್ಧಿಯ ಕುರಿತು ಭರವಸೆ ನೀಡಲಾಗುತ್ತಿದೆ. ಟ್ರಂಪ್ ನಿರ್ಧಾರಗಳು ನಿಜಕ್ಕೂ ಬುದ್ಧಿವಂತಿಕೆಯ ನಡೆಯೇ, ಅಥವಾ ದೊಡ್ಡ ತಪ್ಪೇ ಎನ್ನುವುದನ್ನು ಕೆಲವು ದಿನಗಳ ಕಾಲ ಕಾದು ನೋಡಬೇಕಿದೆ.
.Trump Tariffs: ಅಮೆರಿಕದ ಸರಕುಗಳ ಮೇಲೆ ಶೇ 34ರಷ್ಟು ಚೀನಾ ಸುಂಕ: ಏ.10ರಿಂದ ಜಾರಿ.Share Market | ಅಮೆರಿಕ ಸುಂಕ ಆತಂಕದ ನಡುವೆ ಸೆನ್ಸೆಕ್ಸ್ 930 ಅಂಶಗಳಷ್ಟು ಇಳಿಕೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.