ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀ ಎಂಟರ್‌ಟೈನ್‌ಮೆಂಟ್ ಷೇರು ಶೇ 18.5 ಏರಿಕೆ; ಇಳಿದು ಏರಿದ ಸೆನ್ಸೆಕ್ಸ್‌

ಸಾಲ ತೀರಿಸಲು ಶೇ 16.5ರಷ್ಟು ಷೇರು ಮಾರಾಟಕ್ಕೆ ಎಸ್ಸೆಲ್‌ ಸಮೂಹ ನಿರ್ಧಾರ
Last Updated 21 ನವೆಂಬರ್ 2019, 7:58 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಷೇರು ಶೇ 18.5ರಷ್ಟು ಗಳಿಕೆ ದಾಖಲಿಸಿದೆ. ಸಾಲ ಮರುಪಾವತಿಗಾಗಿ ಎಸ್ಸೆಲ್‌ ಸಮೂಹ ಶೇ 16.5ರಷ್ಟು ಷೇರುಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡುವ ಯೋಜನೆ ಪ್ರಕಟಿಸಿರುವ ಬೆನ್ನಲೇ ಷೇರು ಬೆಲೆ ಏರಿಕೆ ಕಂಡಿದೆ.

ಮುಂಬೈ ಷೇರುಪೇಟೆಯಲ್ಲಿ ಶೇ 14.99 ಹೆಚ್ಚಳದೊಂದಿಗೆ ಪ್ರತಿ ಷೇರು ₹353.20 ಹಾಗೂ ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 18.56ರಷ್ಟು ಏರಿಕೆಯೊಂದಿಗೆ ಪ್ರತಿ ಷೇರು ₹364 ವಹಿವಾಟು ಬೆಲೆ ದಾಖಲಿಸಿದೆ.

ಸುಭಾಷ್‌ ಚಂದ್ರ ನೇತೃತ್ವದ ಎಸ್ಸೆಲ್‌ ಸಮೂಹ ಹಣದ ಮುಗ್ಗಟ್ಟಿನಿಂದಾಗಿ ತನ್ನ ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ನಲ್ಲಿ ಶೇ 16.5ರಷ್ಟು ಷೇರುಗಳನ್ನು ಮಾರಾಟ ಮಾಡುವುದಾಗಿ ಬುಧವಾರ ಪ್ರಕಟಿಸಿತ್ತು. ಈ ಮೂಲಕ ಸಾಲ ಹಿಂದಿರುಗಿಸಲು ನಿರ್ಧಾರಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಎಸ್ಸೆಲ್‌ ಸಮೂಹ ಜೀ ಎಂಟರ್‌ಟೈನ್‌ಮೆಂಟ್‌ನ ಶೇ 11ರಷ್ಟು ಷೇರುಗಳನ್ನು ಇನ್‌ವೆಸ್ಕೊ ಫಂಡ್‌ಗೆ ₹4,224 ಕೋಟಿಗೆ ಮಾರಾಟ ಮಾಡಿ, ₹4,000 ಕೋಟಿ ಸಾಲ ಮರುಪಾವತಿ ಮಾಡಿತ್ತು.

ವಹಿವಾಟು ಪ್ರಾರಂಭವಾಗುತ್ತಿದ್ದಂತೆ ದಿಢೀರ್‌ ಕುಸಿತ ಕಂಡ ದೇಶೀಯ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಮಧ್ಯಾಹ್ನದ ವೇಳೆಗೆ ಮತ್ತೆ ಚೇತರಿಕೆ ಹಾದಿ ಹಿಡಿದಿದೆ. 100 ಅಂಶಗಳ ಇಳಿಕೆ ಕಂಡಿದ್ದ ಸೆನ್ಸೆಕ್ಸ್‌ ಮತ್ತೆ ದಿನದ ಗರಿಷ್ಠ ಮಟ್ಟದತ್ತ(40,665 ಅಂಶ) ಮುನ್ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT