ಭಾನುವಾರ, ಏಪ್ರಿಲ್ 5, 2020
19 °C

ದೇಶದ ಷೇರುಪೇಟೆಗಳಲ್ಲಿ ಮಾರಾಟ ಒತ್ತಡ, ಸೂಚ್ಯಂಕ ತಲೆಕೆಳಗು: ಕೋವಿಡ್‌–19 ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಬೆಂಗಳೂರು: ಬ್ಯಾಂಕ್‌ ವಲಯದ ಷೇರುಗಳು ಬುಧವಾರ ಮಾರಾಟ ಒತ್ತಡಕ್ಕೆ ಸಿಲುಕಿದ್ದು, ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಳಿಮುಖವಾಗಿವೆ. ಆರಂಭದಲ್ಲಿ ಸಕಾರಾತ್ಮ ವಹಿವಾಟು ಮೂಲಕ ಹೆಚ್ಚಿದ ಸಂಪತ್ತು ಕೆಲವೇ ನಿಮಿಷಗಳಲ್ಲಿ ಕರಗಿ ಹೋಯಿತು. 

ದೇಶದ ಕಂಪನಿಗಳ ಷೇರುಗಳು ಗಳಿಕೆ ಮತ್ತು ನಷ್ಟದ ನಡುವೆ ಹೋಯ್ದಾಡುತ್ತಿವೆ. ಕೊರೊನಾ ವೈರಸ್‌ ಸೋಂಕು ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ವಹಿವಾಟು ಆರಂಭದಲ್ಲಿ 500 ಅಂಶ ಏರಿಕೆ ಕಂಡಿದ್ದ ಸೆನ್ಸೆಕ್ಸ್‌, ನಂತರದಲ್ಲಿ 1,223.79 ಅಂಶ ಕಡಿಮೆಯಾಗಿ 29,355.30 ಅಂಶ ಮುಟ್ಟಿತು. ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. 

9,100 ಅಂಶಗಳ ಸಮೀಪದಲ್ಲಿ ವಹಿವಾಟು ಆರಂಭಿಸಿದ್ದ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 343.85 ಅಂಶ (ಶೇ 3.83) ಇಳಿಕೆಯಾಗಿ 8,623.20 ಅಂಶಗಳಿಗೆ ತಲುಪಿದೆ.   

ಆರಂಭದಲ್ಲಿ ಶೇ 5ರಷ್ಟು ಗಳಿಕೆ ಕಂಡ ಇಂಡಸ್‌ಇಂಡ್‌ ಬ್ಯಾಂಕ್‌ ಶೇ 2ರಷ್ಟು ಇಳಿಕೆ ದಾಖಲಿಸಿದೆ. ಟೈಟಾನ್‌ ಕಂಪನಿ ಷೇರು ಶೇ 7ರಷ್ಟು ಕುಸಿದು, 52 ವಾರಗಳ ಕಡಿಮೆ ಮಟ್ಟ ₹921 ತಲುಪಿದೆ. 

ಇದನ್ನೂ ಓದಿ: 

ಯೆಸ್‌ ಬ್ಯಾಂಕ್‌ ಷೇರು ಇಂದೂ ಸಹ ಗಳಿಕೆ ಕಂಡಿದೆ. ಶೇ 9.12ರಷ್ಟು ಏರಿಕೆಯೊಂದಿಗೆ ಷೇರು ಬೆಲೆ ₹64 ತಲುಪಿದೆ. ವೊಡಾಫೋನ್‌ ಐಡಿಯಾ ಷೇರು ಶೇ 40ರಷ್ಟು ಕುಸಿದಿದೆ. 

ಅಮೆರಿಕ ಷೇರುಪೇಟೆಯ ಫ್ಯೂಚರ್‌ಗಳು ಹಾಗೂ ಏಷ್ಯಾ ವಲಯದ ಹಲವು ಷೇರುಗಳು ದಿಢೀರ್‌ ಕುಸಿತ ಕಂಡಿವೆ. ಸೋಮವಾರ ಐತಿಹಾಸಿಕ ಕುಸಿತ ದಾಖಲಿಸಿದ್ದ ಅಮೆರಿಕದ ಷೇರುಪೇಟೆಗಳು ಮಂಗಳವಾರ ಚೇತರಿಕೆ ದಾಖಲಿಸಿವೆ. ಇದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾದರೂ, ದೇಶದ ಷೇರುಪೇಟೆಗಳು ಕೋವಿಡ್‌–19 ಭೀತಿಯಿಂದ ಮುಕ್ತವಾಗಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)