ಶನಿವಾರ, ಜೂನ್ 19, 2021
27 °C

ಎಸ್‌ಬಿಐ: ಎನ್‌ಪಿಎ ಇಳಿಕೆ, ಲಾಭ ಶೇ 80ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿವ್ವಳ ಲಾಭವು 2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 80ರಷ್ಟು ಏರಿಕೆ ಆಗಿದೆ.

2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 3,580 ಕೋಟಿಯಷ್ಟಿದ್ದ ನಿವ್ವಳ ಲಾಭವು 2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 6,450 ಕೋಟಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಲಾಭ ಹೆಚ್ಚಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. ಒಟ್ಟಾರೆ ವರಮಾನವು ₹ 76,027 ಕೋಟಿಯಿಂದ ₹ 81,326 ಕೋಟಿಗೆ ಏರಿಕೆ ಕಂಡಿದೆ.

ಸರಾಸರಿ ಎನ್‌ಪಿಎ ಶೇ 6.15ರಷ್ಟು ಇದ್ದಿದ್ದು ಶೇ 4.98ಕ್ಕೆ ಇಳಿಕೆ ಕಂಡಿದೆ. ಅದೇ ರೀತಿ ನಿವ್ವಳ ಎನ್‌ಪಿಎ ಶೇ 2.23ರಿಂದ ಶೇ 1.50ಕ್ಕೆ ಇಳಿಕೆಯಾಗಿದೆ.

2020–21ನೇ ಹಣಕಾಸು ವರ್ಷಕ್ಕೆ ಒಟ್ಟಾರೆ ಲಾಭವು ₹ 20,110 ಕೋಟಿಯಷ್ಟಾಗಿದೆ. 2019–20ರಲ್ಲಿದ್ದ ₹ 14,488 ಕೋಟಿ ಲಾಭಕ್ಕೆ ಹೋಲಿಸಿದರೆ ಶೇ 41ರಷ್ಟು ವೃದ್ಧಿಯಾಗಿದೆ.

ಲಾಭಾಂಶ: ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 4ರಂತೆ ಲಾಭಾಂಶ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿ ಶಿಫಾರಸು ಮಾಡಿದೆ. ಲಾಭಾಂಶ ಪಾವತಿ ದಿನಾಂಕವನ್ನು ಜೂನ್‌ 18ಕ್ಕೆ ನಿಗದಿಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು