ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಷೇರುಪೇಟೆ ಸೂಚ್ಯಂಕ ಇಳಿಕೆ

Last Updated 15 ಜೂನ್ 2020, 12:21 IST
ಅಕ್ಷರ ಗಾತ್ರ

ಮುಂಬೈ: ಎರಡನೇ ಹಂತದ ಕೊರೊನಾ ವೈರಸ್‌ ಸೋಂಕು ಹರಡುವ ಆತಂಕದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು.

ಹಣಕಾಸು ವಲಯದ ಷೇರುಗಳು ಅತಿ ಹೆಚ್ಚಿನ ನಷ್ಟಕ್ಕೆ ಒಳಗಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ವಹಿವಾಟಿನ ಒಂದು ಹಂತದಲ್ಲಿ 857 ಅಂಶಗಳವರೆಗೂ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ವಹಿವಾಟಿನ ಅಂತ್ಯದ ವೇಳೆಗೆ ತುಸು ಚೇತರಿಕೆ ಕಂಡಿತು. 552 ಅಂಶಗಳ ಇಳಿಕೆಯೊಂದಿಗೆ 33,229 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಸ್‌ಇ) ಸೂಚ್ಯಂಕ ನಿಫ್ಟಿ 159 ಅಂಶ ಇಳಿಕೆಯಾಗಿ 9,814 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ನಷ್ಟ: ಇಂಡಸ್‌ಇಂಡ್ ಬ್ಯಾಂಕ್‌ ಷೇರು ಶೇ 7ರಷ್ಟು ಗರಿಷ್ಠ ನಷ್ಟ ಕಂಡಿದೆ. ಆ್ಯಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಐಸಿಐಸಿಐ ಬ್ಯಾಂಕ್‌, ಎನ್‌ಟಿಪಿಸಿ, ಟಾಟಾ ಸ್ಟೀಲ್‌, ಐಟಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.

ಗಳಿಕೆ: ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಸಿಎಲ್‌ ಟೆಕ್, ಸನ್‌ ಫಾರ್ಮಾ ಮತ್ತು ಒಎನ್‌ಜಿಸಿ ಷೇರುಗಳ ಮೌಲ್ಯ ಹೆಚ್ಚಾಗಿದೆ.

ಚೀನಾ ಮತ್ತು ಅಮೆರಿಕದಲ್ಲಿ ಮತ್ತೆ ವೈರಸ್‌ ಮರುಕಳಿಸುತ್ತಿದ್ದು, ಆರ್ಥಿಕತೆಯು ಚೇತರಿಸಿಕೊಳ್ಳಲಿದೆ ಎನ್ನುವ ಹೂಡಿಕೆದಾರರ ವಿಶ್ವಾಸ ಕುಂದುವಂತೆ ಮಾಡಿದೆ ಎಂದು ವರ್ತಕರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ, ಹಾಂಗ್‌ಕಾಂಗ್‌, ಟೋಕಿಯೊ ಮತ್ತು ಸೋಲ್‌ ಸೂಚ್ಯಂಕಗಳು ಶೇ 4.6ರಷ್ಟು ಕುಸಿದಿವೆ. ಯುರೋಪ್‌ನ ಷೇರುಪೇಟೆಗಳು ಶೇ 1ರಷ್ಟು ಇಳಿಮುಖವಾಗಿ ವಹಿವಾಟು ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT