ಸೋಮವಾರ, ಅಕ್ಟೋಬರ್ 25, 2021
24 °C

ಷೇರುಪೇಟೆಯಲ್ಲಿ ಹೊಸ ದಾಖಲೆ: 60,000 ಅಂಶಗಳ ಗಡಿ ದಾಟಿದ ಸೆನ್ಸೆಕ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಲ್ಲಿ ಷೇರುಪೇಟೆಯಲ್ಲಿ ಶುಕ್ರವಾರ ಹೊಸ ದಾಖಲೆ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 60,000 ಅಂಶಗಳ ಗಡಿ ದಾಟಿದೆ.

ತಂತ್ರಜ್ಞಾನ ಮತ್ತು ರಿಯಲ್‌ ಎಸ್ಟೇಟ್‌ ವಲಯದ ಷೇರುಗಳತ್ತ ಹೂಡಿಕೆದಾರರು ಮುಖ ಮಾಡಿದ್ದಾರೆ. ಬೆಳಿಗ್ಗೆ 10:15ರವರೆಗೂ ಸೆನ್ಸೆಕ್ಸ್‌ 264 ಅಂಶ ಹೆಚ್ಚಳವಾಗಿ 60,150 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 66.88 ಅಂಶ ಏರಿಕೆಯಾಗಿ 17,889 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ. ನಿಫ್ಟಿ ಸಹ ಹೊಸ ಎತ್ತರ ತಲುಪಿದಂತಾಗಿದೆ.

ದೇಶದಾದ್ಯಂತ ಕೋವಿಡ್‌–19 ಲಸಿಕೆ ಅಭಿಯಾನದಲ್ಲಿ ಕ್ಷಿಪ್ರಗತಿಯಲ್ಲಿ ಸಾಗಿರುವುದು ಹಾಗೂ ಕೋವಿಡ್‌–19 ಮೂರನೇ ಅಲೆಯ ಸಾಧ್ಯತೆ ಕ್ಷೀಣಿಸಿರುವುದು ಹೂಡಿಕೆದಾರರಲ್ಲಿ ಹೂಡಿಕೆಯ ಉತ್ಸಾಹ ಹೆಚ್ಚಿಸಿದೆ.

ತಂತ್ರಜ್ಞಾನ ವಲಯದ ಷೇರುಗಳು ಶೇ 1.6ರಷ್ಟು ಹೆಚ್ಚಳವಾಗಿದೆ. ಇನ್ಫೊಸಿಸ್‌ ಷೇರು ಶೇ 2.15ರಷ್ಟು ಏರಿಕೆ ದಾಖಲಿಸಿದೆ.

ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಹ ಸೂಚ್ಯಂಕಗಳು ಏರಿಕೆಯಾಗಿತ್ತು. ಸೆನ್ಸೆಕ್ಸ್‌ 59,885 ಅಂಶಗಳು ಹಾಗೂ ನಿಫ್ಟಿ 17,823 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು.


ಸೆನ್ಸೆಕ್ಸ್‌ 1,000 ಅಂಶಗಳಿಂದ 60,000 ಅಂಶಗಳವರೆಗಿನ ಪ್ರಯಾಣ– ಕೃ‍ಪೆ:ಬಿಎಸ್‌ಇ ಟ್ವಿಟರ್‌ ಖಾತೆ

ನಿನ್ನೆಯ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 3.16 ಲಕ್ಷ ಕೋಟಿಯಷ್ಟು ಹೆಚ್ಚಾಯಿತು. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 261.73 ಲಕ್ಷ ಕೋಟಿಗೆ ತಲುಪಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು