ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 500 ಅಂಶ ಜಿಗಿತ; ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌ ಷೇರುಗಳತ್ತ ಒಲವು

Last Updated 19 ಮೇ 2020, 7:20 IST
ಅಕ್ಷರ ಗಾತ್ರ

ಮುಂಬೈ: ವಾರದ ಮೊದಲ ದಿನದ ವಹಿವಾಟಿನಲ್ಲೇ 1,000 ಅಂಶ ಕುಸಿದಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ಮಂಗಳವಾರ 500 ಅಂಶಗಳನ್ನು ಏರಿಕೆ ಕಂಡಿದೆ. ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್‌ ಹಾಗೂ ಕೊಟ್ಯಾಕ್‌ ಬ್ಯಾಂಕ್‌ ಷೇರುಗಳ ಖರೀದಿಗೆ ಹೂಡಿಕೆದಾರರು ಉತ್ಸಾಹ ತೋರಿದ್ದಾರೆ.

ಮಧ್ಯಾಹ್ನ 12ರ ವರೆಗೂ ಸೆನ್ಸೆಕ್ಸ್‌ 561.67 ಅಂಶ (ಶೇ 1.87ರಷ್ಟು) ಏರಿಕೆಯಾಗಿ 30,590.65 ಅಂಶ ತಲುಪಿತು. ನಿಫ್ಟಿ 163.80 ಅಂಶ (ಶೇ 1.86) ಹೆಚ್ಚಳವಾಗಿ 8,987.05 ಅಂಶ ತಲುಪಿದೆ.

ಸೆನ್ಸೆಕ್ಸ್‌ ಕಂಪನಿಗಳ ಸಾಲಿನಲ್ಲಿ ಒಎನ್‌ಜಿಸಿ ಮತ್ತು ಭಾರ್ತಿ ಏರ್‌ಟೆಲ್‌ ಷೇರು ಕ್ರಮವಾಗಿ ಶೇ 6.68ರಷ್ಟು, ಶೇ 9.38ರಷ್ಟು ಗಳಿಕೆ ದಾಖಲಿಸಿದೆ. ಎಚ್‌ಡಿಎಫ್‌ಸಿ, ಮಾರುತಿ, ಬಜಾಜ್‌ ಆಟೊ, ಕೊಟ್ಯಾಕ್‌ ಬ್ಯಾಂಕ್‌, ಹೀರೊ ಮೊಟೊಕಾರ್ಪ್‌ ಹಾಗೂ ಪವರ್‌ಗ್ರಿಡ್‌ ಷೇರುಗಳ ಬೆಲೆ ಹೆಚ್ಚಳ ಕಂಡಿವೆ.

ಆದರೆ, ಬ್ಯಾಂಕ್‌ ವಲಯದ ಷೇರುಗಳು ನಷ್ಟು ಅನುಭವಿಸಿವೆ. ಇಂದೂ ಸಹ ಇಂಡಸ್‌ಇಂಡ್‌ ಬ್ಯಾಂಕ್‌, ಏಷಿಯನ್‌ ಪೇಂಟ್ಸ್‌ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳ ಬೆಲೆ ಇಳಿಕೆಯಾಗಿದೆ.

ಕಳೆದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,068.75 ಅಂಶ ಕಡಿಮೆಯಾಗಿ 30,028.98 ಅಂಶ ತಲುಪಿತ್ತು. ನಿಫ್ಟಿ 313.60 ಅಂಶ ಇಳಿದು 8,823.25 ಅಂಶ ಮುಟ್ಟಿತ್ತು.

ಸೊಮವಾರ ವಿದೇಶಿ ಹೂಡಿಕೆದಾರರು ₹2,512.82 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಕೋವಿಡ್‌–19 ಲಸಿಕೆ ಕುರಿತಾದ ಭರವಸೆ ಹಾಗೂ ದೇಶದ ಕೆಲವು ಭಾಗಗಳಲ್ಲಿ ಲಾಕ್‌ಡೌನ್‌ ಸಡಿಲಿಕೆಗಳಿಂದ ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT