ಬುಧವಾರ, ಫೆಬ್ರವರಿ 26, 2020
19 °C

ಮಂಗಳವಾರವೂ ಗೂಳಿ ಓಟ ಜೋರು; ಷೇರುಪೇಟೆಗಳಲ್ಲಿ ಮತ್ತೊಂದು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ ಸೂಚ್ಯಂಕ ದಾಖಲೆ ಏರಿಕೆ

ಮುಂಬೈ: ಮಂಗಳವಾರವೂ ದೇಶದ ಷೇರುಪೇಟೆಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು ದಾಖಲಾಯಿತು. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 41,000 ಅಂಶಗಳ ಗಡಿ ದಾಟಿತು. 

ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ 218.80 ಅಂಶಗಳ (ಶೇ 0.54) ಏರಿಕೆ ಮೂಲಕ 41,108.05 ಅಂಶಗಳಿಗೆ ಜಿಗಿಯಿತು. ಜಾಗತಿಕ ಮಟ್ಟದಲ್ಲಿ ಸಕಾರಾತ್ಮ ವಾತಾವರಣ ಹಾಗೂ ಹರಿದು ಬರುತ್ತಿರುವ ವಿದೇಶ ಹೂಡಿಕೆಗಳ ಪರಿಣಾಮ ದೇಶದ ಪೇರುಪೇಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಸಹ ಶೇ 0.43ರಷ್ಟು ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ 12,126 ಅಂಶಗಳನ್ನು ಮುಟ್ಟಿತು. 

ಸೂಚ್ಯಂಕ ಜಿಗಿತದ ನಡುವೆಯೂ ಭಾರ್ತಿ ಏರ್‌ಟೆಲ್‌ ಷೇರು ಶೇ 1.73ರಷ್ಟು ಇಳಿಕೆ ಕಂಡಿದೆ. ಕೊಟಾಕ್‌ ಬ್ಯಾಂಕ್‌ ಶೇ 0.40, ಬಜಾಜ್‌ ಆಟೊ ಶೇ 0.33, ಎಲ್‌ಆ್ಯಂಡ್‌ಟಿ ಶೇ 0.22 ಹಾಗೂ ಹೀರೊಕಾರ್ಪ್‌ ಷೇರುಗಳು ಶೇ 0.05ರಷ್ಟು ಕುಸಿದಿವೆ. 

ಇದನ್ನೂ ಓದಿ: ಷೇರುಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು

ಯೆಸ್‌ ಬ್ಯಾಂಕ್ ಷೇರು ಶೇ 1.57, ಟಾಟಾ ಸ್ಟೀಲ್‌ ಶೇ 1.54, ಸನ್‌ ಫಾರ್ಮಾ ಶೇ 1.45, ಐಸಿಐಸಿಐ ಬ್ಯಾಂಕ್‌ ಶೇ 1.48, ಇನ್ಫೊಸಿಸ್‌ ಶೇ 1.10 ಹಾಗೂ ಆರ್‌ಐಎಲ್‌ ಷೇರುಗಳು ಶೇ 0.76ರಷ್ಟು ಏರಿಕೆ ಕಂಡಿವೆ. 

ಸೋಮವಾರ ಸೆನ್ಸೆಕ್ಸ್‌ 40,889.23 ಹಾಗೂ ನಿಫ್ಟಿ 12,073.75 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು. ವಿದೇಶಿ ಸಾಂಸ್ಥಿತಿ ಹೂಡಿಕೆದಾರರು ₹960.90 ಕೋಟಿ ಮೌಲ್ಯದ ಷೇರುಗಳು ಖರೀದಿಸಿದ್ದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ₹213.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು