ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಆತಂಕ: ಸೆನ್ಸೆಕ್ಸ್ 795 ಅಂಶ ಕುಸಿತ, ಬ್ಯಾಂಕ್‌ ವಲಯದ ಷೇರುಗಳು ಇಳಿಕೆ

ಅಕ್ಷರ ಗಾತ್ರ

ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟ ಮಾಡುತ್ತಿರುವುದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ದಾಖಲಾಗಿರುವ ಪರಿಣಾಮ ಸೋಮವಾರ ದೇಶದ ಷೇರುಪೇಟೆಗಳಲ್ಲಿ ತಲ್ಲಣ ಉಂಟಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 795.78 ಅಂಶ (ಶೇ 2.36) ಕಡಿಮೆಯಾಗಿ 32,985.11 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 235.75 ಅಂಶ (ಶೇ 2.36) ಕಡಿಮೆಯಾಗಿ 9,737.15 ಅಂಶಗಳಲ್ಲಿ ವಹಿವಾಟು ನಡೆದಿದೆ.

ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 5ರಷ್ಟು ಕುಸಿದಿದೆ. ಸೆನ್ಸೆಕ್ಸ್‌ ಸಾಲಿನಲ್ಲಿ ಟಾಟಾ ಸ್ಟೀಲ್‌, ಬಜಾಜ್‌ ಫೈನಾನ್ಸ್‌, ಐಸಿಐಸಿಐ ಬ್ಯಾಂಕ್‌, ಆಕ್ಸಿಸ್ ಬ್ಯಾಂಕ್‌, ಎನ್‌ಟಿಪಿಸಿ, ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಸಹ ನಷ್ಟ ಅನುಭವಿಸಿವೆ.

ಆರಂಭದಲ್ಲಿ ಗಳಿಕೆ ದಾಖಲಿಸಿದ ಸನ್‌ ಫಾರ್ಮಾ, ಇನ್ಫೊಸಿಸ್‌, ನೆಸ್ಟ್ಲೆ ಇಂಡಿಯಾ ಹಾಗೂ ಏಷಿಯನ್‌ ಪೇಂಟ್ಸ್‌ ಕಂಪನಿ ಷೇರುಗಳು ನಂತರ ಕುಸಿತ ಕಂಡಿವೆ.

ಕಳೆದ ವಾರದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 242.52 ಅಂಶ ಹೆಚ್ಚಳೊಂದಿಗೆ 33,780.89 ಅಂಶ ತಲುಪಿತು. ನಿಫ್ಟಿ 70.90 ಅಂಶ ಏರಿಕೆಯಾಗಿ 9,972.90 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,311.49 ಕೋಟಿ ಮೌಲ್ಯದ ಷೇರುಗಳ ಮಾರಾಟ ಮಾಡಿದ್ದಾರೆ.

ಚೀನಾ, ಅಮೆರಿಕದಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಜಾಗತಿಕವಾಗಿ ಷೇರುಪೇಟೆಗಳಲ್ಲಿ ಹೂಡಿಕೆದಾರರು ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT