ಬುಧವಾರ, ಮೇ 27, 2020
27 °C

ರಿಲಯನ್ಸ್‌ ಲಾಭಾಂಶ ಗಳಿಕೆ ಕುಸಿತ; ಶೇ 3ರಷ್ಟು ಇಳಿದ ಷೇರು ಬೆಲೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌

ನವದೆಹಲಿ: ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ಗಳಿಕೆ ಕುಸಿದಿರುವ ಕಾರಣ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಸೋಮವಾರ ಶೇ 3ರಷ್ಟು ಇಳಿಕೆಯಾಗಿದೆ. 

ಮುಂಬೈ ಷೇರುಪೇಟೆಯಲ್ಲಿ ರಿಲಯನ್ಸ್‌ ಷೇರು ಬೆಲೆ ಶೇ 3.22ರಷ್ಟು ಕಡಿಮೆಯಾಗಿ ₹1,419.75 ತಲುಪಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 3.31ರಷ್ಟು ಇಳಿಕೆಯಾಗಿ ₹1,417.45ರಲ್ಲಿ ವಹಿವಾಟು ನಡೆದಿದೆ. 

ಕಳೆದ ವಹಿವಾಟಿಗಿಂತ ಕಡಿಮೆ ಮಟ್ಟದಲ್ಲಿ ಆರಂಭವಾದ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌, ಮಧ್ಯಾಹ್ನ 2:30ಕ್ಕೆ 1,909.67 (ಶೇ 5.66) ಅಂಶ ಕುಸಿದು 31,807.95 ಅಂಶ ತಲುಪಿದೆ. ನಿಫ್ಟಿ 551.75  (ಶೇ 5.60) ಅಂಶ ಕಡಿಮೆಯಾಗಿ  9,308.15 ಮುಟ್ಟಿದೆ. 

ಜನವರಿ–ಮಾರ್ಚ್‌ ಅವಧಿಯಲ್ಲಿ ರಿಲಯನ್ಸ್‌ ಕಂಪನಿಯ ಲಾಭಾಂಶ ಶೇ 37ರಷ್ಟು ಕುಸಿದು ₹6,546 ಕೋಟಿ ವರದಿಯಾಗಿದೆ. ಪೆಟ್ರೋಕೆಮಿಕಲ್‌ ವಲಯದಲ್ಲಿ ವಹಿವಾಟು ತೀವ್ರ ಇಳಿಕೆಯಾಗಿರುವ ಪರಿಣಾಮ ಕಳೆದ 3 ವರ್ಷಗಳಲ್ಲಿ ಕಡಿಮೆ ಲಾಭಾಂಶ ದಾಖಲಾಗಿದೆ. ಸಾಲ ಮುಕ್ತಗೊಳ್ಳುವ ಪ್ರಯತ್ನದಲ್ಲಿರುವ ಕಂಪನಿ 30 ವರ್ಷಗಳಲ್ಲಿ ಮೊದಲ ಬಾರಿಗೆ ಹಕ್ಕಿನ ಷೇರು ವಿತರಣೆಗೆ ಮುಂದಾಗಿದೆ. ₹53,125 ಕೋಟಿ ಮೌಲ್ಯದ ಷೇರುಗಳು ವಿತರಣೆಯಾಗಲಿದ್ದು, 1:15 ಅನುಪಾತದಲ್ಲಿ ಪ್ರತಿ ಷೇರು ಬೆಲೆ ₹1,257 ನಿಗದಿ ಪಡಿಸಲಾಗಿದೆ. 

ಫೇಸ್‌ಬುಕ್‌ ರಿಲಯನ್ಸ್‌ ಜಿಯೊದಲ್ಲಿ ₹43,574 ಕೋಟಿ ಹೂಡಿಕೆ ಮಾಡಿದ್ದು, ಜಗತ್ತಿನ ಟೆಕ್‌ ವಲಯದಲ್ಲಿ ಬೃಹತ್‌ ಹೂಡಿಕೆದಾರರಾಗಿರುವ 'ಸಿಲ್ವರ್ ಲೇಕ್‌' ಸಂಸ್ಥೆ ಸಹ  ₹5,655.75 ಕೋಟಿ ಹೂಡಿಕೆ ಮೂಲಕ ಜಿಯೊದಲ್ಲಿ ಶೇ 1.15ರಷ್ಟು ಪಾಲುದಾರಿಕೆ ಹೊಂದಲು ಮುಂದಾಗಿದೆ. 

ಕಳೆದ ಶುಕ್ರವಾರ ಮಹಾರಾಷ್ಟ್ರ ದಿನದ ಪ್ರಯುಕ್ತ ಷೇರುಪೇಟೆ ವಹಿವಾಟು ನಡೆದಿರಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು