ನವದೆಹಲಿ: ದೂರಸಂಪರ್ಕ ವಲಯದ ಪರಿಹಾರ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟವು ಸಮ್ಮತಿಸಿದ್ದು, ಬುಧವಾರ ದೂರಸಂಪರ್ಕ ಕಂಪನಿಗಳ ಷೇರುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು.
ಮುಂಬೈ ಷೇರುಪೇಟೆಯಲ್ಲಿ ಭಾರ್ತಿ ಏರ್‌ಟೆಲ್ ಷೇರು ಶೇ 4.53ರಷ್ಟು ಏರಿಕೆಯಾದರೆ, ತೀವ್ರ ಕುಸಿತಕ್ಕೆ ಒಳಗಾಗಿದ್ದ ವೊಡಾಫೋನ್ ಐಡಿಯಾ ಷೇರು ಶೇ 2.76ರಷ್ಟು ಚೇತರಿಕೆ ಕಂಡಿದೆ. ಇಂದಿನ ವಹಿವಾಟಿನಲ್ಲಿ ವೊಡಾಫೋನ್ ಐಡಿಯಾ ಪ್ರತಿ ಷೇರು ಬೆಲೆ ₹ 9 ದಾಟಿದೆ.
ಟಾಟಾ ಟೆಲಿಸರ್ವೀಸಸ್ (ಮಹಾರಾಷ್ಟ್ರ) ಷೇರು ಬೆಲೆ ಶೇ 4.94 ಮತ್ತು ಟಾಟಾ ಕಮ್ಯುನಿಕೇಷನ್ಸ್ ಷೇರು ಬೆಲೆ ಶೇ 1.38ರಷ್ಟು ಏರಿಕೆ ದಾಖಲಿಸಿದೆ.
ದೂರಸಂಪರ್ಕ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ (ಪೂರ್ವಾನುಮತಿ ಇಲ್ಲದೆಯೂ) ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅವಕಾಶ; ಎಜಿಆರ್, ತರಂಗಾಂತರ ಬಳಕೆ ಶುಲ್ಕ ಹಾಗೂ ಬಾಕಿ ಮೊತ್ತದ ಮರು ಪಾವತಿಗೆ ನಾಲ್ಕು ವರ್ಷಗಳ ಗಡುವು ಕ್ರಮಗಳಿಗೆ ಸಚಿವ ಸಂಪುಟವು ಅನುಮೋದಿಸಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದರು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 476 ಅಂಶ ಏರಿಕೆ ಕಂಡು, ಇದುವರೆಗಿನ ಗರಿಷ್ಠ ಮಟ್ಟವಾದ 58,723 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 139 ಅಂಶ ಹೆಚ್ಚಳ ಆಗಿ, 17,519 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.