ನವದೆಹಲಿ: ಬ್ಯಾಂಕ್ ಖಾತೆ ಆಧಾರಿತ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬುಧವಾರ ಹೇಳಿದೆ.
ಆದರೆ ಪ್ರಿಪೇಯ್ಡ್ ಪಾವತಿ ವ್ಯವಸ್ಥೆ (ಪಿಪಿಐ) ಬಳಿಸಿ ಯುಪಿಐ ಮಾಡುವ ಪಾವತಿ ವರ್ತಕರಿಗೆ ಇಂಟರ್‌ಚೇಂಜ್ ಶುಲ್ಕ ಅನ್ವಯವಾಗುತ್ತದೆ. ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎನ್‌ಪಿಸಿಐ ಪ್ರಕಟಣೆ ತಿಳಿಸಿದೆ.
ಪಿಪಿಐ ಬಳಸಿ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮೂಲಕ ನಡೆಸುವ ವಹಿವಾಟುಗಳ ಮೇಲೆ ಶೇಕಡಾ 1.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ.
ಪರಿಚಯಿಸಲಾದ ಇಂಟರ್‌ಚೇಂಜ್ ಶುಲ್ಕಗಳು ಪಿಪಿಐ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ. ಬ್ಯಾಂಕ್ ಖಾತೆ ಆಧಾರಿತ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಿಪೇಯ್ಡ್ ಪಾವತಿ ವ್ಯವಸ್ಥೆ ಅಂದರೆ ಉದಾಹರಣೆಗೆ ಸ್ಮಾರ್ಟ್ ಕಾರ್ಡ್, ಆನ್ ಲೈನ್ ಅಕೌಂಟ್, ಆನ್ ಲೈನ್ ವ್ಯಾಲೆಟ್, ಸ್ಟ್ರೀಪ್ ಕಾರ್ಡ್, ಪೇಪರ್ ವಂಚರ್ಸ್ ಮುಂತಾದವು.
ಇವನ್ನೂ ಓದಿ; ಕಳಪೆ ಗುಣಮಟ್ಟ: 18 ಔಷಧ ಕಂಪನಿಗಳ ಪರವಾನಗಿ ರದ್ದು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.