ನಾಸಿಕ್ (ಪಿಟಿಐ): ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ಹೇರಿರುವ ನಿಷೇಧ ತೆರವಿಗೆ ಆಗ್ರಹಿಸಿ, ನಾಸಿಕ್ನಲ್ಲಿ ವರ್ತಕರು ಸೋಮವಾರದಿಂದ ಈರುಳ್ಳಿ ಹರಾಜು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿರ್ದೇಶಕರು ಭಾನುವಾರ ಇಲ್ಲಿ ಸಭೆ ಸೇರಿ, ಈರುಳ್ಳಿ ಹರಾಜನ್ನು ಕೆಲ ದಿನಗಳ ಕಾಲ ನಿಲ್ಲಿಸುವ ಒಮ್ಮತದ ತೀರ್ಮಾನ ಕೈಗೊಂಡರು ಎಂದು ಮೂಲಗಳು ತಿಳಿಸಿವೆ.

ಈರುಳ್ಳಿ ಬೆಳೆಯುವ ಸಟಾನ, ನಿಪ್ಪಾಡ್ ಪ್ರದೇಶದ ರೈತರು ರಫ್ತು ನಿಷೇಧ ಹಿಂತೆಗೆದುಕೊಳ್ಳಲು ಆಗ್ರಹಿಸಿ ಭಾನುವಾರ ರಸ್ತೆ ತಡೆ ಚಳುವಳಿ ನಡೆಸಿದರು. ಈರುಳ್ಳಿ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ, ಪೂರೈಕೆ ಹೆಚ್ಚಿಸಲು ಕಳೆದ ಸೆಪ್ಟೆಂಬರ್ 8ರಿಂದ ಸರ್ಕಾರ ರಫ್ತು ನಿಷೇಧ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.