ನವದೆಹಲಿ (ಐಎಎನ್‌ಎಸ್):  2010-11ನೇ ಸಾಲಿನಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ಉದ್ಯಮ (ಐಟಿ) ಶೇ 19ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು ರೂ 4,38,296 ಕೋಟಿ ವರಮಾನ ದಾಖಲಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದ ನಂತರ ದಾಖಲಾದ ಅತ್ಯುತ್ತಮ ಪ್ರಗತಿ ಇದಾಗಿದೆ. 2009-10ನೇ ಸಾಲಿನಲ್ಲಿ ಐ.ಟಿ ಕ್ಷೇತ್ರವು ಶೇ 8ರಷ್ಟು ಮಾತ್ರ ಪ್ರಗತಿ ದಾಖಲಿಸಿತ್ತು ಎಂದು ಸಮೀಕ್ಷಾ ಸಂಸ್ಥೆ `ಸೈಬರ್ ಮೀಡಿಯಾ~ ಹೇಳಿದೆ.

ದೇಶೀಯ ಐ.ಟಿ ಮಾರುಕಟ್ಟೆ ಶೇ 23ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು ರೂ1,47,152 ಕೋಟಿ ವರಮಾನ ದಾಖಲಿಸಿದೆ. ರಫ್ತು ವಹಿವಾಟಿನ ಮೂಲಕ ರೂ 2,91,144 ಕೋಟಿ ವರಮಾನ ದಾಖಲಾಗಿದೆ. ಒಟ್ಟು ಐ.ಟಿ ವರಮಾನಕ್ಕೆ ರಫ್ತು ಮಾರುಕಟ್ಟೆ ಶೇ 66 ಮತ್ತು ದೇಶೀಯ ಮಾರುಕಟ್ಟೆ ಶೇ 33ರಷ್ಟು ಕೊಡುಗೆ ನೀಡುತ್ತದೆ.

ಈ ಅವಧಿಯಲ್ಲಿ ಐ.ಟಿ ಸೇವೆಗಳ ರಫ್ತು ವಹಿವಾಟು ಶೆ 21ರಷ್ಟು ಹೆಚ್ಚಿದೆ. ಎಂಜಿನಿಯರಿಂಗ್ ಸೇವೆಗಳು ಮತ್ತು ಹೊರಗುತ್ತಿಗೆ ಉದ್ಯಮ (ಬಿಪಿಒ) ಕ್ರಮವಾಗಿ ಶೇ 22 ಮತ್ತು ಶೇ 7 ರಷ್ಟು ಪ್ರಗತಿ ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಾಫ್ಟ್‌ವೇರ್ ರಫ್ತು ಒಳಗೊಂಡ ಐ.ಟಿ ಸೇವೆಗಳ ಒಟ್ಟು ವರಮಾನ 64 ಶತಕೋಟಿ ಡಾಲರ್(ರೂ2,88,000 ಕೋಟಿ)ಗಳಷ್ಟಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮಾರುಕಟ್ಟೆ ಶೇ 28ರಷ್ಟು ಪ್ರಗತಿ ಕಂಡಿದ್ದು, ರೂ 29,151 ಕೋಟಿ ವರಮಾನ ದಾಖಲಿಸಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆ ರೂ 8,796 ಕೋಟಿ ವರಮಾನ ದಾಖಲಿಸಿದೆ. ಐ.ಟಿ ವರಮಾನದಲ್ಲಿ ಟಿಸಿಎಸ್, ಕಾಗ್ನಿಜೆಂಟ್ ಮತ್ತು ವಿಪ್ರೊ ಸಂಸ್ಥೆಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದು, ರೂ 29,801, ರೂ 25,477 ಮತ್ತು ರೂ 21,393 ಕೋಟಿ ವರಮಾನ ದಾಖಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.