ಕತ್ತೆಗೆ ತನ್ನ ಜೀವನದ ಬಗ್ಗೆಯೇ ಬೇಜಾರಾಗಿ ಹೋಯಿತು. ಎಲ್ಲರೂ ಅದನ್ನು ಟೀಕಿಸುವವರೇ. ಯಾಕೆ ತನ್ನನ್ನು ಹೀಯಾಳಿಸುತ್ತಾರೆ, ತನ್ನನ್ನು ಕಂಡರೆ ಯಾಕೆ ತಿರಸ್ಕಾರ ಮಾಡುತ್ತಾರೆ ಎಂಬುದು ತಿಳಿದಿರಲಿಲ್ಲ.

ಒಂದು ದಿನ ತಿರುಗಾಡುತ್ತ ಊರ ಹೊರಗಿದ್ದ ಹಾಳು ಮನೆಯ ಹತ್ತಿರ ಬಂದಿತು. ಅಲ್ಲಿ ಯಾರೋ ಮನೆಯ ಹಳೆಯ ಮುರುಕು ಸಾಮಾನುಗಳನ್ನೆಲ್ಲ ಹಾಕಿ ಹೋಗಿದ್ದರು. ಕತ್ತೆ ಸುತ್ತಾಡುತ್ತಿರುವಾಗ ಒಂದು ಕ್ಷಣ ಅದಕ್ಕೆ ಹೆದರಿಕೆಯಾಯಿತು. ಏಕೆಂದರೆ ಅದರ ಮುಂದೆಯೇ ಮತ್ತೊಂದು ಕತ್ತೆ ನಿಂತಿದೆ! ಸ್ವಲ್ಪ ಸುಧಾರಿಸಿ ನೋಡಿದಾಗ, ತಾನು ನೋಡುತ್ತಿರುವುದು ಒಂದು ಕನ್ನಡಿ ಎಂಬುದು ತಿಳಿಯಿತು. `ಹಾಗಾದರೆ ನಾನು ನೋಡುತ್ತಿರುವುದು ನನ್ನದೇ ಪ್ರತಿಬಿಂಬ? ಛೇ ಏನು ನನ್ನ ಮೈ ಬಣ್ಣ, ಗುಳಿಬಿದ್ದ ದುಃಖ ತುಂಬಿದ ಕಣ್ಣುಗಳು, ಸೊಣಕಲಾದ ಕಾಲುಗಳು~ ಎಂದು ಬೇಜಾರು ಮಾಡಿಕೊಂಡಿತು. `ಅದಕ್ಕೇ ಯಾರೂ ನನ್ನನ್ನು ಕಂಡರೆ ಇಷ್ಟಪಡುವುದಿಲ್ಲ~ ಎಂದುಕೊಂಡಿತು. ಈ ದುಃಖದಲ್ಲೇ ನಾಡೇ ಬೇಡ, ಕಾಡಿಗೇ ಹೋಗುತ್ತೇನೆಂದು ಹೊರಟಿತು.

`ಅಲ್ಲಿಯಾದರೂ ಪ್ರಾಣಿಗಳು ನನ್ನನ್ನು ನೋಡಿ ನಗಲಿಕ್ಕಿಲ್ಲ, ಇಲ್ಲವಾದರೆ ಯಾವುದೋ ಕಾಡುಪ್ರಾಣಿ ನನ್ನನ್ನು ಕೊಂದೇ ಬಿಡಬಹುದು. ಆಗಲಿ, ಹಾಗಾದರೂ ಈ ಜೀವನ ಹೋಗಿಬಿಡುತ್ತದಲ್ಲ~ ಎಂದುಕೊಂಡು ತಲೆತಗ್ಗಿಸಿ ನಡೆಯಿತು. ಕಾಡಿನ ನಡುವೆ ಬರುವಾಗ ಅಲ್ಲೊಂದು ಹುಲಿ ಸತ್ತು ಬಿದ್ದದ್ದು ಕಂಡಿತು. ಹತ್ತಿರ ಹೋಗಿ ನೋಡಿದರೆ ಅದು ಸತ್ತು ಕೆಲವು ದಿನಗಳೇ ಆಗಿರಬೇಕು. ದೇಹವೆಲ್ಲ ಕೊಳೆತು ಹೋಗಿದೆ, ವಾಸನೆ ಬರುತ್ತಿದೆ. ಹುಳಗಳು ಮಾಂಸವನ್ನೆಲ್ಲ ತಿಂದು ಮುಗಿಸಿಬಿಟ್ಟಿವೆ. ಕತ್ತೆಗೊಂದು ಯೋಚನೆ ಬಂತು. ಆ ಸತ್ತ ಹುಲಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು, ಎಳೆದುಕೊಂಡು ಕೆರೆಯ ಬಳಿಗೆ ಹೋಯಿತು. ವಾಸನೆಯನ್ನು ತಡೆದುಕೊಂಡು ಹುಲಿಯ ಚರ್ಮವನ್ನು ಚೆನ್ನಾಗಿ ತೊಳೆದು ಶುದ್ಧಮಾಡಿತು. ನಿಧಾನವಾಗಿ ಅದನ್ನು ಎಳೆಎಳೆದು ತನ್ನ ದೇಹದ ಮೇಲೆ ಹಾಕಿಕೊಂಡಿತು. ಸತ್ತದ್ದು ದೊಡ್ಡ ಹುಲಿಯಾದ್ದರಿಂದ ಕತ್ತೆಯ ಮೈಯನ್ನು ಸಂಪೂರ್ಣವಾಗಿ ಮುಚ್ಚಿತ್ತು. ಈಗ ನೋಡಿದರೆ ಕತ್ತೆ ಹುಲಿಯಂತೆಯೇ ಕಾಣುತ್ತಿತ್ತು.

ಸ್ವಲ್ಪ ಭಯದಿಂದ, ಆದರೂ ಠೀವಿಯಿಂದ ಮುಂದೆ ನಡೆಯಿತು. ಅದಕ್ಕೇ ಆಶ್ಚರ್ಯವಾಗುವ ಹಾಗೆ ಇದನ್ನು ಕಂಡೊಡನೆ ಪ್ರಾಣಿಗಳು ಓಡಿ ಹೋಗುತ್ತಿದ್ದವು. ಹುಲಿಯಾದ ಕತ್ತೆ ನಂತರ ನಿಧಾನವಾಗಿ ಹತ್ತಿರದ ಹಳ್ಳಿಗೆ ಹೋಯಿತು. ರೈತರೆಲ್ಲ ಗಾಬರಿಯಾಗಿ ಓಡಿಹೋದರು. ಇಡೀ ಹೊಲವೆಲ್ಲ ಕತ್ತೆಯದೇ. ಸಂತಪ್ತಿಯಾಗುವ ವರೆಗೆ ತಿಂದಿತು. ಈಗ ಅದಕ್ಕೆ ತನ್ನ ಶಕ್ತಿಯ ಅರಿವಾಯಿತು. ಹಸಿವೆಯಾದಾಗಲೆಲ್ಲ ಯಾವುದೋ ಹೊಲವನ್ನು ಪ್ರವೇಶಿಸಿಬಿಟ್ಟರೆ ಸಾಕು, ಅಲ್ಲಿದ್ದ ಬೆಳೆಗಳ ರಾಶಿ, ಹಣ್ಣುಗಳು, ಕಾಯಿಗಳು ಎಲ್ಲವೂ ಅದರ ವಶ.

ಇದು ಹೀಗೆಯೇ ಸ್ವಲ್ಪ ದಿನ ನಡೆಯಿತು. ಬರಬರುತ್ತ ಕತ್ತೆ ರಾತ್ರಿ ಕೂಡ ತನ್ನ ಮೈಮೇಲಿನ ಹುಲಿಯ ಚರ್ಮವನ್ನು ತೆಗೆಯುತ್ತಿರಲಿಲ್ಲ. ಜನ, ಪ್ರಾಣಿಗಳು ಹೆದರಿ ಓಡಿಹೋಗುವುದನ್ನು ನೋಡಿ, ನೋಡಿ ತಾನು ನಿಜವಾಗಿಯೂ ಬಲಿಷ್ಠವಾಗಿದ್ದೇನೆ ಎಂದು ನಂಬತೊಡಗಿತು. ತಾನು ಕತ್ತೆಯೆಂಬುದು ಮರೆತು ಹೋಗಿ ತಾನು ನಿಜವಾಗಿಯೂ ಹುಲಿ ಎಂದೇ ಭಾವಿಸಿತು. ಹೀಗೊಂದು ದಿನ ಹಳ್ಳಿಯ ತೋಟಕ್ಕೆ ನುಗ್ಗಿದಾಗ ರೈತರೆಲ್ಲ ದೂರ ನಿಂತು ನೋಡುತ್ತಿದ್ದರು. ಆಗ ಅಲ್ಲಿಗೆ ಇನ್ನೊಂದು ಹೆಣ್ಣು ಕತ್ತೆ ಬಂದಿತು. ಅದೂ ಈ ಹುಲಿಯನ್ನು ನೋಡಿ ಓಡಿಹೋಗುವುದರಲ್ಲಿತ್ತು.

ಹುಲಿಯಾದ ಕತ್ತೆಗೆ ಅದನ್ನು ನೋಡಿ ತುಂಬ ಸಂತೋಷವಾಗಿತ್ತು. ಅದೆಲ್ಲಿ ಓಡಿಹೋಗುತ್ತದೋ ಎಂದು ಜೋರಾಗಿ ಹೂಂಕರಿಸತೊಡಗಿತು. ಆಗ ರೈತರಿಗೆ ಈ ಹುಲಿಯ ನಿಜ ರೂಪ ತಿಳಿದು ಕೋಲುಗಳಿಂದ ಸೇವೆ ಸಲ್ಲಿಸಿದರು. ಮತ್ತೆ ಕತ್ತೆ ತನ್ನ ನಿಜರೂಪಕ್ಕೆ ಇಳಿಯಿತು.

ಯಾವುದೋ ಸ್ಥಾನ ದೊರೆತಾಗ, ಜನ ಮೆಚ್ಚಿಗೆ ತೋರಿದಾಗ, ಯಶಸ್ಸು ಬಂದಾಗ `ನಾವು ನಿಜವಾಗಿಯೂ ಭಾರೀ ಶಕ್ತಿಶಾಲಿಗಳು~ ಎಂದು ಭಾವಿಸುತ್ತೇವೆ. ಅದೊಂದು ಅವಕಾಶ ಮಾತ್ರ. ಅಲ್ಲದೆ ಮುಂದೊಂದು ದಿನ ಇರದೇ ಹೋಗಬಹುದು ಎಂಬ ಕಲ್ಪನೆಯೂ ಬರದೇ ಸೊಕ್ಕು ತೋರಿಸುತ್ತೇವೆ. ಆ ಯಶಸ್ಸಿನ ಗಳಿಗೆ ಕಳೆದು ಹೋದ ಮೇಲೆ ಮೊದಲು ಅಹಂಕಾರ ಪಟ್ಟಿದ್ದವರು ದುಃಖ ಅನುಭವಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.