ಬಿಹಾರ ಚುನಾವಣೆಯ ಫಲಿತಾಂಶ ಕರ್ನಾಟಕದ ವಿಷಯದಲ್ಲಿ ನಿರ್ಣಾಯಕ ಆಗುವ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿದೆ. ಅಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ವಿಜಯ ಸಾಧಿಸಿದರೆ, ಇಲ್ಲಿನ ಸರ್ಕಾರದ ಪತನಕ್ಕೆ ಕಮಲ ಪಡೆ ಕೈ ಹಾಕುವ ಸಂಭವ ಹೆಚ್ಚಾಗಿದೆ. ಆರ್‌ಜೆಡಿ– ಕಾಂಗ್ರೆಸ್ ಅಧಿಕಾರ ಹಿಡಿದರೆ ಇಲ್ಲಿನ ಕಾಂಗ್ರೆಸ್ ಸರ್ಕಾರದ ಮೇಲೆ ಹಸ್ತಕ್ಷೇಪ ಮಾಡಲು ಹೈಕಮಾಂಡ್ ಮುಂದಾದರೂ ಅಚ್ಚರಿಯಿಲ್ಲ.