ಭಾರತದ ಸಂವಿಧಾನಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಏಪ್ರಿಲ್ 14. ಸ್ವಾತಂತ್ರ್ಯ ದೊರೆತ ನಂತರದ ವರ್ಷಗಳಲ್ಲಿ ಭಾರತವು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಾಧಿಸಿರುವ ಮುನ್ನಡೆಯನ್ನು ಕಂಡಾಗ, ಅಂಬೇಡ್ಕರ್ ಅವರಲ್ಲಿನ ಅಸಾಮಾನ್ಯ ದೂರದರ್ಶಿತ್ವದ ಬಗ್ಗೆ, ದೇಶದ ಏಕತೆ, ಸಂವಿಧಾನ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಾಗರಿಕರು ನಡೆದುಕೊಳ್ಳಬೇಕಿರುವುದು ಹೇಗೆ ಎಂಬ ಕುರಿತು ಅವರು ನೀಡಿದ್ದ ಸಲಹೆಯ ಬಗ್ಗೆ ನಾವು ಅವಲೋಕನ ನಡೆಸಬೇಕು.

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ 1949ರ ನವೆಂಬರ್ 25ರಂದು ಮಾಡಿದ ಅಂತಿಮ ಭಾಷಣದಲ್ಲಿ ಸಂವಿಧಾನದ ತಾತ್ವಿಕತೆಯನ್ನು ಹೇಳಿದರು. ಪ್ರಜಾತಂತ್ರ ರಾಷ್ಟ್ರದ ಗುರಿಗಳನ್ನು ತಲುಪಲು, ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಮತ್ತು ಜನರ ಸರ್ವಾಂಗೀಣ ಮುನ್ನಡೆಗೆ ಅಗತ್ಯವಿರುವ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಲು ನಾಗರಿಕರು ಇರಿಸಬೇಕಿರುವ ಮಹತ್ವದ ಹೆಜ್ಜೆಗಳ ಬಗ್ಗೆ ಅವರು ಆ ಭಾಷಣದಲ್ಲಿ ಉಲ್ಲೇಖಿಸಿದರು.

ಅವರ ಸಲಹೆಗಳು ರಾಷ್ಟ್ರೀಯ ನೀತಿಗಳಲ್ಲಿ ಯಾವ ರೀತಿಯಲ್ಲಿ ಪ್ರವೇಶಿಸಿವೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಹೇಗೆ ಸಾಧ್ಯವಾಗಿಸಿವೆ? ನಾವು ಇದರ ಬಗ್ಗೆ ಅವಲೋಕನ ನಡೆಸಬೇಕಿದೆ.

ರಾಜಕೀಯ ಪ್ರಜಾಸತ್ತೆಗೇ ನಾವು ತೃಪ್ತರಾಗಬಾರದು ಎಂದು ಅವರು ಹೇಳಿದ್ದರು. ರಾಜಕೀಯ ಪ್ರಜಾಸತ್ತೆಯನ್ನು ನಾವು ಸಾಮಾಜಿಕ ಪ್ರಜಾಸತ್ತೆಯನ್ನಾಗಿಯೂ
ಪರಿವರ್ತಿಸಬೇಕು ಎಂದಿದ್ದರು. ಅದಾಗದಿದ್ದರೆ ರಾಜಕೀಯ ಪ್ರಜಾಸತ್ತೆ ಉಳಿಯುವುದಿಲ್ಲ. ‘ಸಾಮಾಜಿಕ ಪ್ರಜಾಸತ್ತೆ ಅಂದರೆ ಏನು? ಇದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವವನ್ನಾಗಿ ಗುರುತಿಸುವ ಜೀವನಕ್ರಮ... ಒಂದನ್ನು ಇನ್ನೊಂದರಿಂದ ಬೇರ್ಪಡಿಸುವುದು ಪ್ರಜಾತಂತ್ರದ ಉದ್ದೇಶವನ್ನೇ ಸೋಲಿಸಿದಂತೆ. ಸಮಾನತೆ ಇಲ್ಲದಿದ್ದರೆ ಸ್ವಾತಂತ್ರ್ಯವು ಕೆಲವರ ಮೇಲರಿಮೆಗೆ ಕಾಣವಾಗುತ್ತದೆ... ಭ್ರಾತೃತ್ವ ಇಲ್ಲದಿದ್ದರೆ, ಸ್ವಾತಂತ್ರ್ಯ ಮತ್ತು ಸಮಾನತೆಯು ಸಹಜವಾಗಿ ಬರುವುದಿಲ್ಲ’ ಎಂದು ಅವರು ಹೇಳಿದ್ದರು.

ಈ ಆದರ್ಶಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳನ್ನು ಎಲ್ಲರಿಗೂ ಖಾತರಿಪಡಿಸಿದರು. ಅದರ ಜೊತೆಯಲ್ಲೇ, ಸರ್ಕಾರದ ನೀತಿಗೆ ಒಂದು ಕಿವಿಮಾತು ಹೇಳಿದರು. ಅದು: ಅಸ್ಪೃಶ್ಯತೆಯ ನಿಷೇಧ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ, ಇತರೆ ಹಿಂದುಳಿದ ವರ್ಗದವರಿಗೆ (ಒಬಿಸಿ) ಮೀಸಲಾತಿ ಸೌಲಭ್ಯ ಮತ್ತು ಸಾಮಾಜಿಕವಾಗಿ ಸಮಾನತೆಯನ್ನು ಬೆಳೆಸುವ ಇತರ ಹಲವು ಸಾಂವಿಧಾನಿಕ ಖಾತರಿಗಳು.

ಸಂವಿಧಾನವನ್ನು ದೇಶವು ಒಪ್ಪಿಕೊಂಡ ದಿನದಿಂದಲೂ ಸರ್ಕಾರಗಳು ಬಡತನ ನಿರ್ಮೂಲನೆಗೆ, ಎಲ್ಲರ ಜೀವನಮಟ್ಟ ಸುಧಾರಿಸಲು ದೊಡ್ಡ ಪ್ರಯತ್ನ
ಗಳನ್ನು ನಡೆಸಿವೆ. ವಸತಿ, ಕುಡಿಯುವ ನೀರಿನ ಲಭ್ಯತೆ, ಉದ್ಯೋಗ, ಪ್ರಾಥಮಿಕ ಶಿಕ್ಷಣ, ಅಡುಗೆ ಅನಿಲ ಪೂರೈಕೆಯಂತಹ ಯೋಜನೆಗಳಿಗಾಗಿ ಸರ್ಕಾರಗಳು ರಾಷ್ಟ್ರವ್ಯಾಪಿಯಾಗಿ ಕ್ರಮಗಳನ್ನು ಕೈಗೊಂಡಿವೆ. ಅದರಲ್ಲೂ ಮುಖ್ಯವಾಗಿ, ಬಡ ವರ್ಗಗಳನ್ನು ಗುರಿಯಾಗಿಸಿಕೊಂಡು ಇಂತಹ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಸಂವಿಧಾನ ರಚನಾ ಸಭೆಯು 1946ರ ಡಿಸೆಂಬರ್ 9ರಂದು ಮೊದಲು ಸಭೆ ಸೇರಿತು. ಅದು ಒಟ್ಟು 165 ದಿನ ಸಮಾಲೋಚಿಸಿ ಸಂವಿಧಾನ ರೂಪಿಸಿತು. ಈ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಕೀರ್ಣತೆಗಳನ್ನು ಗಮನದಲ್ಲಿ ಇರಿಸಿಕೊಂಡು, ಭಾರತೀಯ ಸಂವಿಧಾನವು ಆರಂಭದಲ್ಲಿ 395 ವಿಧಿಗಳನ್ನು, 8
ಪರಿಚ್ಛೇದಗಳನ್ನು ಹೊಂದಿತ್ತು. ಬೇರೆ ದೇಶಗಳ ಸಂವಿಧಾನಗಳು ಇದಕ್ಕೆ ಹೋಲಿಸಿದರೆ ಕಿರಿದಾಗಿವೆ. ಅಮೆರಿಕದ ಸಂವಿಧಾನವು ಏಳು ವಿಧಿಗಳನ್ನಷ್ಟೇ ಹೊಂದಿದೆ. ಅವುಗಳಲ್ಲಿ ಮೊದಲ ನಾಲ್ಕು ವಿಧಿಗಳನ್ನು 21 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕೆನಡಾ ಸಂವಿಧಾನ ಅಂಗೀಕಾರ ಆದಾಗ ಅದು 147 ವಿಧಿಗಳನ್ನು, ದಕ್ಷಿಣ ಆಫ್ರಿಕಾ ಸಂವಿಧಾನ 153 ವಿಧಿಗಳನ್ನು ಮತ್ತು ಆಸ್ಟ್ರೇಲಿಯಾದ ಸಂವಿಧಾನ 128 ವಿಧಿಗಳನ್ನು ಹೊಂದಿದ್ದವು. ಈ ಬಗ್ಗೆ ಅರಿವಿದ್ದವರು ಭಾರತದ ಸಂವಿಧಾನವು ಅನಗತ್ಯ ಎನ್ನುವಷ್ಟು ದೀರ್ಘವಾಗಿದೆ ಎಂದು ದೂರಿದ್ದರು.

ಬೇರೆ ಬೇರೆ ವಲಯಗಳಿಂದ ಇಂತಹ ಟೀಕೆಗಳು ಬಂದಿವೆ. ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ವಿದ್ವಾಂಸರು ಹಾಗೂ ಅವರಿಂದ ಪ್ರಭಾವಿತರಾದವರು
ಹೀಗೆ ಹೇಳಿದ್ದಾರೆ. ದೇಶದ ಸಾಮಾನ್ಯ ಪ್ರಜೆಗಳು ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದಿದ್ದಿದೆ. ಟೀಕಾಕಾರರೊಬ್ಬರು, ಭಾರತದ ಸಂವಿಧಾನದಲ್ಲಿ 1.46 ಲಕ್ಷ ಪದಗಳು ಇವೆ ಎಂದೂ ಅದು ಬಹಳ ಸಂಕೀರ್ಣವಾಗಿದೆ ಎಂದೂ ಅಮೆರಿಕದ ಸಂವಿಧಾನದಲ್ಲಿ 4,543 ಪದಗಳಷ್ಟೇ ಇವೆ ಎಂದೂ ಹೇಳಿದ್ದಿದೆ.

ಭಾರತದ ಸಂವಿಧಾನವು 106 ಬಾರಿ ತಿದ್ದುಪಡಿಗಳನ್ನು ಕಂಡಿದೆ ಎಂದು ಟೀಕಾಕಾರರು ಹಾಸ್ಯ ಮಾಡಿರುವುದೂ ಇದೆ. ಆದರೆ ಸ್ವಾತಂತ್ರ್ಯಾನಂತರದ 78 ವರ್ಷಗಳನ್ನು ಅವಲೋಕಿಸಿದಾಗ ಈ ಟೀಕೆಗಳನ್ನು ತಳ್ಳಿಹಾಕಬೇಕು ಎಂಬುದು ಗೊತ್ತಾಗುತ್ತದೆ.

ಭಾರತವು ವಿಶ್ವದಲ್ಲೇ ಅತ್ಯಂತ ಹೆಚ್ಚು ಶಕ್ತಿಶಾಲಿಯಾದ ಹಾಗೂ ಅತ್ಯಂತ ಹೆಚ್ಚು ವೈವಿಧ್ಯಮಯ ಸಮಾಜವನ್ನು ಹೊಂದಿರುವ ಪ್ರಜಾತಂತ್ರ. ದೇಶದ ಬಹುಸಂಖ್ಯಾತ ಹಿಂದೂಗಳಲ್ಲಿ ಸರಿಸುಮಾರು ಆರು ಸಾವಿರ ಜಾತಿಗಳಿವೆ (ಈ ಜಾತಿಗಳಲ್ಲಿ ಅಂದಾಜು 3,500 ಜಾತಿಗಳು ಒಬಿಸಿ ಸಮುದಾಯಕ್ಕೆ ಸೇರಿದವು). ಜಾತಿ ವ್ಯವಸ್ಥೆಯು ಇಸ್ಲಾಂ, ಕ್ರೈಸ್ತ ಮತ್ತು ಇತರ ಧರ್ಮಗಳಿಗೂ ಹರಡಿದೆ. ಭಾರತೀಯರು 122 ಭಾಷೆಗಳನ್ನು, 270 ಉಪಭಾಷೆಗಳನ್ನು ಮಾತನಾಡುತ್ತಾರೆ. ಜಗತ್ತಿನ ಬಹುತೇಕ ಎಲ್ಲ ಧರ್ಮಗಳೂ ಭಾರತದಲ್ಲಿವೆ. ದೇಶದಲ್ಲಿ ಉತ್ತರದ ತುದಿಯಿಂದ ದಕ್ಷಿಣದ ತುದಿಯವರೆಗೆ, ಪಶ್ಚಿಮದ ತುದಿಯಿಂದ ಪೂರ್ವದ ತುದಿಯವರೆಗೆ ಹಲವು ಲಕ್ಷಣಗಳನ್ನು ಹೊಂದಿರುವ ಜನರಿದ್ದಾರೆ, ಹಲವು ಜನಾಂಗಗಳಿಗೆ ಸೇರಿದ ಜನರಿದ್ದಾರೆ. ಹೀಗಿದ್ದರೂ ಇದು ಒಂದಾಗಿ ನಿಂತಿರುವ ದೇಶ. ಈ ವೈವಿಧ್ಯಮಯ ಸಮಾಜವನ್ನು ಒಂದಾಗಿಸುವುದು ಅಂಬೇಡ್ಕರ್ ಅವರ ಪ್ರಯತ್ನವಾಗಿತ್ತು. ಸಂವಿಧಾನಕ್ಕೆ ತಿದ್ದುಪಡಿ ತರಲು ತೀರಾ ಸಂಕೀರ್ಣವಲ್ಲದ ಮಾರ್ಗವನ್ನು ಹಾಕಿಕೊಟ್ಟ ಅಂಬೇಡ್ಕರ್ ಅವರು, ಸ್ವಾತಂತ್ರ್ಯಾನಂತರದ ಮೂರು ತಲೆಮಾರಿನ ಜನರಿಗೆ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಮೂಲಕ ಅವರು, ಆಧುನಿಕ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಸಂವಿಧಾನವು ಇರುವಂತೆ ಮಾಡಲು ನೆರವಾಗಿದ್ದಾರೆ.

ಬದಲಾವಣೆಗೆ ಸ್ಪಂದಿಸದೆ ಇರುವುದಕ್ಕಿಂತಲೂ ಹೆಚ್ಚಿನ ಆದ್ಯತೆಯನ್ನು ಅಂಬೇಡ್ಕರ್ ಅವರು ಬದಲಾವಣೆಗಳಿಗೆ ಹೊಂದಿಕೊಳ್ಳುವುದಕ್ಕೆ ನೀಡಿದ್ದಾರೆ. ಇದು ಈ ದೇಶವನ್ನು ಒಂದಾಗಿ ಇರಿಸಿದೆ. ಹೀಗೆ ಮಾಡುವಾಗ ಅಂಬೇಡ್ಕರ್ ಅವರು, ಅಮೆರಿಕದ ಪಿತಾಮಹರ ಪೈಕಿ ಒಬ್ಬರು ಎಂಬ ಹೆಗ್ಗಳಿಕೆ ಹೊಂದಿರುವ ಥಾಮಸ್ ಜೆಫರ್ಸನ್ ಅವರ ಅಭಿಪ್ರಾಯದಿಂದ
ಪ್ರಭಾವಿತರಾಗಿದ್ದರು.

ಅಂಬೇಡ್ಕರ್ ಮತ್ತು ಅವರ ಸಹೋದ್ಯೋಗಿಗಳು ತಾವು ಸಾಧಿಸಿ ತೋರಿಸಿದ್ದಕ್ಕೆ ಅತ್ಯಂತ ಹೆಚ್ಚಿನ ಮಟ್ಟದ ಪ್ರಶಂಸೆಗೆ ಅರ್ಹರಾಗಿರುತ್ತಾರೆ. ಮುಂದಿನ ದಿನಗಳನ್ನು ನೋಡುವ ಸಾಮರ್ಥ್ಯ, ಆ ಮುಂಗಾಣ್ಕೆಯು ನಮ್ಮ ಸಂವಿಧಾನದ ನೆಲಗಟ್ಟಿನಂತೆ ಇದೆ. ಇದು 1947ರಲ್ಲಿದ್ದ 35 ಕೋಟಿ ಭಾರತೀಯರಿಗೆ (ಈಗಿನ 145 ಕೋಟಿ ಭಾರತೀಯರಿಗೆ) ಒಂದಾಗಿ ಇರಲು ನೆರವಾಗಿದೆ. ಅವರಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕೋಲೆಗಳನ್ನು ಕಳಚಿಕೊಳ್ಳುವತ್ತ ಸದ್ದುಗದ್ದಲವಿಲ್ಲದೆ ಸಾಗಲು ನೆರವಾಗುತ್ತಿದೆ.

ಹೀಗಾಗಿ, ನಾವು ನಮ್ಮ ಸಂವಿಧಾನವನ್ನು ಹಾಗೂ ಸಂವಿಧಾನದಲ್ಲಿ ಹೇಳಿರುವ ವಿಧಾನಗಳನ್ನು ಟೀಕಿಸು ವವರನ್ನು ಖಂಡಿಸಬೇಕು. ಅಂಥವರಿಗೆ, ‘ನಿಮ್ಮ ಕೆಲಸ ನೋಡಿಕೊಂಡಿರಿ’ ಎಂದು ಹೇಳಬೇಕು. ಏಕೆಂದರೆ, ನಮ್ಮ ಸಂವಿಧಾನವನ್ನು ರೂಪಿಸಿದವರಿಗೆ ತಮ್ಮ ಹೊಣೆ ಏನು ಎಂಬುದು ಗೊತ್ತಿತ್ತು. ಅವರು ನಮಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಉದ್ದೀಪಿಸುವ ಹಾಗೂ ಎಲ್ಲವುಗಳಿಗಿಂತ ಮಿಗಿಲಾಗಿ ರಾಷ್ಟ್ರೀಯ ಏಕತೆಯನ್ನು ಬೆಳೆಸುವ ಸಂವಿಧಾನವನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.