ಮೈಸೂರು: ದಸರಾ ಅಂಗವಾಗಿ ಚಲನಚಿತ್ರೋತ್ಸವ ಉಪ ಸಮಿತಿಯಿಂದ ಈ ಬಾರಿ ಮುಂಚಿತವಾಗಿಯೇ ಚಲನಚಿತ್ರೋತ್ಸವ ನಡೆಸಲಾಗುತ್ತಿದೆ.

ಈ ಹಿಂದಿನ ವರ್ಷಗಳಲ್ಲಿ ದಸರಾ ಉದ್ಘಾಟನೆಯ ದಿನದಂದೇ ಕಲಾಮಂದಿರದಲ್ಲಿ ಚಲನಚಿತ್ರೋತ್ಸವಕ್ಕೂ ಚಾಲನೆ ಕೊಡಲಾಗುತ್ತಿತ್ತು. ಮುಖ್ಯಮಂತ್ರಿ, ಸಚಿವರು, ಚಲನಚಿತ್ರ ತಾರೆಯರ ದಂಡು ನೆರೆಯುತ್ತಿತ್ತು. ಈ ಬಾರಿ, ಮಾಲ್ ಆಫ್ ಮೈಸೂರ್ನ ನೆಲಮಹಡಿಯಲ್ಲಿ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸೆ.13ರಂದು ಬೆಳಿಗ್ಗೆ 11ಕ್ಕೆ ನೆರವೇರಿಸಲಿದ್ದಾರೆ. ಇದರೊಂದಿಗೆ, ನಾಡಹಬ್ಬಕ್ಕೂ ಮುನ್ನವೇ ಚಲನಚಿತ್ರೋತ್ಸವ ಗರಿಗೆದರಲಿದೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಸು ಫ್ರಮ್ ಸೋ’ ಚಲನಚಿತ್ರ ಖ್ಯಾತಿಯ ಸಂಧ್ಯಾ ಅರಕೆರೆ, ನಾಯಕ ನಟ ಪೃಥ್ವಿ ಅಂಬರ್, ಹಿನ್ನೆಲೆ ಗಾಯಕ ಜಸ್ಕರಣ್, ನಾಗಾರ್ಜುನ್ ಶರ್ಮಾ, ನಾಯಕ ನಟಿ ಅಂಜಲಿ ವಿಶೇಷ ಆಕರ್ಷಣೆಯಾಗಿದ್ದಾರೆ.

ಕನ್ನಡದ ಪ್ರಖ್ಯಾತ ನಟಿ ದಿವಂಗತ ಬಿ.ಸರೋಜಾದೇವಿ ಅವರ ಸವಿನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಅವರು ಅಭಿನಯಿಸಿರುವ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು.

‘ಸದಭಿರುಚಿಯ, ಸಾಮಾಜಿಕ ಕಳಕಳಿಯ ಸಂದೇಶ ನೀಡುವ ಹಾಗೂ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ಸೆ. 14ರಿಂದ 20ರವರೆಗೆ ಮಾಲ್ ಆಫ್ ಮೈಸೂರ್ನ ‘ಐನಾಕ್ಸ್ ಸಿನಿಮಾಸ್’ನ ಮೂರು ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಮಕ್ಕಳ ಚಿತ್ರಗಳು ಹಾಗೂ ಮಹಿಳಾ ನಿರ್ದೇಶನದ ಚಿತ್ರಗಳಿಗೂ ಪ್ರಾಧಾನ್ಯತೆ ನೀಡಲಾಗಿದೆ. ಈ ಬಾರಿ ಒಟ್ಟು 84 ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಚಿತ್ರ ರಸಿಕರಿಗೆ ದೊರೆಯಲಿದೆ’ ಎಂದು ಉಪ ಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ತಿಳಿಸಿದ್ದಾರೆ.

‘ಈ ಬಾರಿ ಪ್ರಗತಿ ಅಶ್ವತ್ನಾರಾಯಣ್ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಎನ್.ಲಕ್ಷ್ಮೀನಾರಾಯಣ್, ಸಿದ್ಧಲಿಂಗಯ್ಯ, ರವಿ ಅವರ ತೆರೆಯ ಹಿಂದಿನ ಶೈಲಿಯನ್ನು ಬಿತ್ತರಿಸುವ ಛಾಯಾಚಿತ್ರ ಪ್ರದರ್ಶನವನ್ನು (ಸಿನಿ ಫೋಟೊ) ಸೆ. 14ರಿಂದ 18ರವರೆಗೆ ‘ಐನಾಕ್ಸ್ ಸಿನಿಮಾಸ್’ ಹೊರಾವರಣದಲ್ಲಿ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲೆಂದು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳನ್ನು ಕೂಡ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಸೆ. 18ರಂದು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಅತ್ಯುತ್ತಮ ಸಂಕಲನಗಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಗುವುದು’ ಎಂದು ವಿವರಿಸಿದ್ದಾರೆ.

ಸಿನಿರಸಿಕರಿಗೆ ಅನುಕೂಲ ಆಗುವಂತೆ ಪಾಸ್ ವಿತರಿಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ₹ 300 ಹಾಗೂ ಇತರರಿಗೆ ₹ 500 ನಿಗದಿಪಡಿಸಲಾಗಿದೆ. ಪಾಸ್ ಪಡೆದವರು ಚಿತ್ರೋತ್ಸವದ 7 ದಿನವೂ ಸಿನಿಮಾಗಳನ್ನು ವೀಕ್ಷಿಸಬಹುದು, ಚಲನಚಿತ್ರಗಳ ಮಾಹಿತಿಯುಳ್ಳ ಕಿರುಹೊತ್ತಿಗೆ ಪಡೆಯಬಹುದು. ಪಾಸ್ಗಳನ್ನು ಸೆ.8ರಿಂದ ಧನ್ವಂತರಿ ರಸ್ತೆಯ ವಾರ್ತಾ ಭವನದಲ್ಲಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 74115 64510 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ದಸರಾ ಚಲನಚಿತ್ರೋತ್ರವದಲ್ಲಿ ಹೆಚ್ಚು ಜನರು ಭಾಗವಹಿಸಲೆಂದು ಈ ಬಾರಿ ಮುಂಚಿತವಾಗಿಯೇ ನಡೆಸಲಾಗುತ್ತಿದೆ. ಸಿನಿರಸಿಕರಿಗೆ ರಸದೌತಣ ಸಿಗಲಿದೆ
ಹರೀಶ್ ಟಿ.ಕೆ. ಕಾರ್ಯದರ್ಶಿ ದಸರಾ ಚಲನಚಿತ್ರೋತ್ಸವ ಉಪ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.