ಅನುಭವೇನ ವಿನಾಧಿಗತಂ ಶ್ರುತಂ

ಭವತಿ ನೈವ ನೃಣಾಮುಪಕಾರಕಮ್ ।

ದಧನಿ ವರ್ತತ ಏವ ಹವಿಃ ಪುನಃ

ನ ಮಥನೇನ ವಿನಾ ತದವಾಪ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಓದಿ ಕಲಿತದ್ದಾಗಲಿ, ಕೇಳಿ ತಿಳಿದದ್ದಾಗಲಿ ಸ್ವತಃ ಅನುಭವವಿಲ್ಲದೆ ಜನರಿಗೆ ಉಪಯುಕ್ತವಾಗುವುದಿಲ್ಲ. ಮೊಸರಲ್ಲಿ ತುಪ್ಪವೇನೋ ಇದೆ; ಆದರೆ ಕಡೆಯದೆ ಅದು ದೊರೆಯುವುದಿಲ್ಲ.’

ಅನುಭವ ಇಲ್ಲದ ವಿದ್ಯೆ, ಅದು ಬರಿ ಶುಷ್ಕವಿದ್ಯೆ, ಪ್ರಯೋಜನಕ್ಕೆ ಬಾರದು ಎಂದು ಸುಭಾಷಿತ ಹೇಳುತ್ತಿದೆ.

ಅಡುಗೆ ಮಾಡುವುದು ಹೇಗೆ ಎಂದು ನಾವು ದೊಡ್ಡ ಪುಸ್ತಕಗಳನ್ನು ಬರೆಯಬಹುದು; ಅದರ ಬಗ್ಗೆ ಸಂಶೋಧನಪ್ರಬಂಧವನ್ನು ಬರೆದು ಪಿಎಚ್.ಡಿ.ಯನ್ನೂ ಸಂಪಾದಿಸಬಹುದು. ಆದರೆ ಅಡುಗೆಯ ಬಗ್ಗೆ ನಿಜವಾದ ತಿಳಿವಳಿಕೆ ಎಂದರೆ ನಮಗೆ ಅಡುಗೆ ಮಾಡಲು ಬರಬೇಕು. ನಾಲ್ಕು ಜನರು ರುಚಿಯಾಗಿದೆ ಎಂದು ಹೇಳುವಂತೆ ಅಡುಗೆಮಾಡಿದಾಗಲೇ ನಮಗೆ ನಿಜವಾಗಿಯೂ ಅಡುಗೆ ಬಗ್ಗೆ ಜ್ಞಾನ ಇದೆ ಎಂಬುದು ಸಿದ್ಧವಾಗುವುದು.

ಈ ಮಾತು ಎಲ್ಲ ವಿಷಯಗಳಿಗೂ ಸಲ್ಲುತ್ತದೆ. ಈಜಿನ ಬಗ್ಗೆ ಎಷ್ಟು ಓದಿದರೆ ಏನುಪ್ರಯೋಜನ? ನಮಗೆ ನೀರಿನಲ್ಲಿ ಈಜುವುದು ಬರಬೇಕು; ಅದೇ ಈಜಿನ ಬಗ್ಗೆ ದಿಟವಾದ ತಿಳಿವಳಿಕೆ. ಲೈಸೆನ್ಸ್ ಇದ್ದ ಮಾತ್ರಕ್ಕೆ ನಮಗೆ ವಾಹನವನ್ನು ನಡೆಸಲು ಬರುತ್ತದೆ ಎಂಬುದು ಸಿದ್ಧವಾಗುವುದಿಲ್ಲ; ರಸ್ತೆಯಲ್ಲಿ ನಮಗೆ ವಾಹನವನ್ನು ಡ್ರೈವ್ ಮಾಡಲು ಬರಬೇಕು.

ನಮ್ಮ ಸಂಸ್ಕೃತಿಯಲ್ಲಿ ಶ್ರವಣ, ಮನನ ಮತ್ತು ನಿದಿಧ್ಯಾಸನ ಎಂಬ ಕಲ್ಪನೆಯಿದೆ. ಶಿಕ್ಷಣದ ಹಂತಗಳನ್ನು ಇದು ಸೂಚಿಸುತ್ತದೆ. ಮೊದಲಿಗೆ ಓದಬೇಕು; ಇದು ಶ್ರವಣ. ಬಳಿಕ ಅದನ್ನು ಚೆನ್ನಾಗಿ ಪರಾಮರ್ಶಿಸಬೇಕು; ಇದು ಮನನ. ಅನಂತರ ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು; ಇದು ನಿದಿಧ್ಯಾಸನ. ನಮ್ಮ ಜೀವನಕ್ಕೆ ನೇರವಾಗಿ ಯಾವುದು ಒದಗುತ್ತದೆಯೋ ಅದೇ ನಿಜವಾದ ಶಿಕ್ಷಣ ಎಂಬುದು ಈ ಪರಿಕಲ್ಪನೆಯ ಹಿನ್ನೆಲೆ.

ಅನುಭವ ಇಲ್ಲದ ಓದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸುಭಾಷಿತ ಹೇಳುತ್ತಿದೆ. ಅನುಭವಕ್ಕೆ ಓದು ಹೇಗೆ ಬರುತ್ತದೆ? ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ತಾನೆ? ಒಂದು ರಸ್ತೆ ಇಂಥ ಊರಿಗೆ ಹೋಗುತ್ತದೆ – ಎಂದು ನಾವು ಹೇಳುತ್ತೇವೆ. ಆ ಊರಿಗೆ ಆ ದಾರಿ ಎಂಬುದು ಯಾವಾಗ ಸಿದ್ಧವಾಗುತ್ತದೆ? ಆ ರಸ್ತೆ ಆ ಊರಿಗೆ ಸಂಪರ್ಕವನ್ನು ಕಲ್ಪಿಸಿದಾಗಲೇ ಅಲ್ಲವೆ? ಆ ರಸ್ತೆ ಆ ಊರಿಗೆ ಸೇರುತ್ತದೆ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ನಾವು ಆ ಊರಿಗೆ ಆ ರಸ್ತೆಯಲ್ಲಿ ಹೋಗಿಬಂದಿರಬೇಕು; ಅಥವಾ ಹೋಗಿಬಂದವರು, ನಮ್ಮ ಆಪ್ತರು, ಅದನ್ನು ಬಲಪಡಿಸಬೇಕು; ಅಥವಾ ನಿಖರವಾದ ತಿಳಿವಳಿಕೆ ಇರಬೇಕು. ಈ ಮೂರು ಮಾಹಿತಿಗಳೂ ಸರಿ ಎಂದು ನಮಗೆ ಸ್ಪಷ್ಟಪಡಿಸುವುದೇ ನಮ್ಮ ಅನುಭವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.