ಅರ್ಜುನ ಮಹಾಭಾರತ ಯುದ್ಧಕ್ಕೆ ಪ್ರವೇಶ ಮಾಡುವ ಮೊದಲು ಕೃಷ್ಣನ ಸಲಹೆಯಂತೆ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಯುದ್ಧರಂಗವನ್ನು ಪ್ರವೇಶಿಸಿದನು. ಅದೇ ರೀತಿಯಾಗಿ ರಾವಣನ ಸಂಹಾರ ಮಾಡುವುದಕ್ಕೆ ಮುನ್ನ ರಾಮನು ಶಿವನ ಅನುಗ್ರಹ ಪಡೆದನು ಎಂದು ಪುರಾಣ ಕಥೆಗಳಲ್ಲಿ ಹೇಳಲಾಗುತ್ತದೆ.

ವಿಷ್ಣುವಿನ ಪಾದದಿಂದ ಜನಿಸಿ, ಶಿವನ ಶಿರಸ್ಸಿನಿಂದ ಹರಿಯುವ ಗಂಗಾ ನದಿ ಪವಿತ್ರವಾಗಿದೆ. ಆದ್ದರಿಂದ ಗಂಗೆಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ನಶಿಸಿ ಹೋಗುತ್ತವೆ. ಗಂಗಾ ನದಿ ಅಲ್ಲದೇ ಯಾವುದೇ ನೀರನ್ನು ಗಂಗಾ, ಗಂಗಾ, ಗಂಗಾ, ಎಂದು ಮೂರು ಬಾರಿ ಹೇಳಿ ಕುಡಿದರೆ, ಗಂಗಾಜಲಕ್ಕೆ ಸಮಾನವಾಗುತ್ತದೆ ಎಂಬ ನಂಬಿಕೆ ಇದೆ.

ಗಂಗಾ ಜಲದಲ್ಲಿ ವಿಷ್ಣು ಸಾನಿಧ್ಯವಿರುತ್ತದೆ. ಕಾರ್ತಿಕ, ಮಾಘ, ಮಾರ್ಗಶಿರ ಯಾವುದೇ ಪುಣ್ಯ ಮಾಸಗಳಲ್ಲಿ ಶಿವ ಮತ್ತು ವಿಷ್ಣುವಿನ ಆರಾಧನೆಯನ್ನು ಭಕ್ತಿಯಿಂದ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುವುದರೊಂದಿಗೆ ಪುಣ್ಯ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
.ಸಿಎಂ ಸಿದ್ದರಾಮಯ್ಯ ಪೂರ್ತಿ ಅವಧಿ ಮುಗಿಸುವರೇ?: ಜ್ಯೋತಿಷ ಏನು ಹೇಳುತ್ತದೆ?.ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?.
ಅರಳಿ ಮರದ ಪುರಾಣ ಕಥೆ:

ಸಮುದ್ರ ಮಂಥನದಲ್ಲಿ ದೊರಕಿದ ಅನೇಕ ಅನರ್ಘ್ಯ ವಸ್ತುಗಳಲ್ಲಿ ಲಕ್ಷ್ಮೀ ಮತ್ತು ಕೌಸ್ತುಭಗಳನ್ನು ಶ್ರೀಹರಿಗೆ ಅರ್ಪಿಸಲಾಯಿತು. ಉಳಿದ ಸಂಪತ್ತುಗಳನ್ನೆಲ್ಲ ದೇವತೆಗಳು ಹಂಚಿಕೊಂಡರು. ಮಹಾವಿಷ್ಣು ಲಕ್ಷ್ಮೀಯನ್ನು ವಿವಾಹವಾದ ಸಮಯದಲ್ಲಿ ಲಕ್ಷ್ಮೀ ನಾರಾಯಣನಿಗೆ ಹೇಳಿದಳು, ‘ಸ್ವಾಮಿ ನನಗಿಂತ ಹಿರಿಯಳಾದ ನಮ್ಮಅಕ್ಕ ಜೇಷ್ಠಾದೇವಿ ಇದ್ದಾಳೆ. ಹಿರಿಯಳಾದ ಅವಳಿಗೆ ಮದುವೆಯಾಗುವ ಮೊದಲೇ ಕಿರಿಯಳಾದ ನನಗೆ ಮದುವೆಯಾಯಿತು. ಆದ್ದರಿಂದ ಅವಳಿಗೂ ಬೇಗ ಮದುವೆ ಮಾಡಬೇಕು’ ಎಂದಳು. ಆಗ ನಾರಾಯಣನು ಉದ್ಧಾಲಕ ಎಂಬ ಮಹರ್ಷಿಗೆ ಜೇಷ್ಠಾದೇವಿಯ ಜೊತೆ ವಿವಾಹ ಮಾಡಿಸಿದನು. ಜೇಷ್ಠಾದೇವಿ ನೋಡಲು ಸ್ಥೂಲ ಕಾಯ, ಕೆಂಪು ಕಣ್ಣುಗಳು, ಒರಟು ಮುಖದಿಂದ ಕೂಡಿದ್ದಳು.

ಉದ್ದಾಲಕ ಋಷಿಯ ಆಶ್ರಮವು ಜೇಷ್ಠಾ ದೇವಿಗೆ ಇಷ್ಟವಾಗಲಿಲ್ಲ. ಅಲ್ಲಿ ನಡೆಯುವ ಹೋಮ, ವೇದ ಘೋಷಣೆ ಹಾಗೂ ಮಂತ್ರ ಪಠಣೆಗಳು ನೋಡೋದಕ್ಕೂ ಕೇಳುವುದಕ್ಕೂ ಅವಳಿಗೆ ಆಗಲಿಲ್ಲ. ಈ ಆಚರಣೆಗಳಿಂದ ನನಗೆ ಉಸಿರುಗಟ್ಟಿ ಹೋಗಿದೆ. ಇನ್ನು ಅರ್ಧ ಕ್ಷಣವು ನಾನು ಇಲ್ಲಿ ಇರಲಾರೆ ಎಂದಳು. ಉದ್ಧಾಲಕನು ಹಾಗಾದರೆ ನಿನಗೆ ಯಾವ ಸ್ಥಳ ಬೇಕು ಎಂದು ಕೇಳಿದನು. ಅದಕ್ಕೆ ಅವಳು ಎಲ್ಲಿ ಹಗಲು ಹಾಗೂ ರಾತ್ರಿ ಗಂಡ ಹೆಂಡತಿ ಇಬ್ಬರು ಜಗಳ ಮಾಡುತ್ತಾರೋ, ಯಾವ ಜಾಗದಲ್ಲಿ ಸಜ್ಜನರಿಗೆ ಅವಮಾನವಾಗುವುದೋ, ಬೈಗುಳ, ಅಶ್ಲೀಲ ಶಬ್ದ, ದುರಾಚಾರ, ದುರ್ನಡತೆ ಹಾಗೂ ಕಿರುಕುಳವಿರುವ ಸ್ಥಳಗಳು ನನ್ನ ನೆಚ್ಚಿನ ತಾಣಗಳು ಎಂದಳು.

ಆಕೆಯನ್ನು ಒಂದು ಕ್ಷಣವೂ ತನ್ನ ಆಶ್ರಮದಲ್ಲಿ ಇರಿಸಿಕೊಳ್ಳಲು ಋಷಿಯ ಮನಸ್ಸು ಒಪ್ಪಲಿಲ್ಲ. ಕುಟೀರದಿಂದ ಆಕೆಯನ್ನು ಕರೆದುಕೊಂಡು ಬೇರೆ ಸ್ಥಳ ಹುಡುಕುತ್ತಾ ಹೊರಟನು. ಎಷ್ಟು ಅಲೆದರೂ ಅಂತಹ ಸ್ಥಳ ಸಿಗಲಿಲ್ಲ. ಹೋಗುತ್ತಿದ್ದ ರಸ್ತೆ ಬದಿಯಲ್ಲಿದ್ದ ಒಂದು ಅರಳಿ ಮರ ಕಾಣುತ್ತದೆ. ನೀನು ಸ್ವಲ್ಪ ಹೊತ್ತು ಇಲ್ಲಿ ಕುಳಿತಿರು ನಾನು ಸ್ಥಳವನ್ನು ಹುಡುಕಿ ಬಂದು ಕರೆದೊಯ್ಯುತ್ತೇನೆ ಎಂದು ಹೇಳಿ ಹೊರಟನು. ಗಂಡನ ಆಜ್ಞೆಯಂತೆ ಜೇಷ್ಠಾದೇವಿಯು ಅಲ್ಲೇ ಕುಳಿತಲು. ಎಷ್ಟು ದಿನಗಳಾದರೂ ಪತಿ ಉದ್ಧಾನಕ ವಾಪಸ್ಸು ಬರಲಿಲ್ಲ. ಗಂಡ ಬರದೇ ಇದ್ದ ಕಾರಣ ಆಕೆ ಜೋರಾಗಿ ಅಳತೊಡಗಿದಳು. ಅವಳ ದುಃಖವನ್ನು ಕಂಡ ಲಕ್ಷ್ಮೀನಾರಾಯಣ ಪ್ರತ್ಯಕ್ಷನಾದ.

ಅಳುತ್ತಿದ್ದ ಜೇಷ್ಠಾದೇವಿಯನ್ನು ಸಮಾಧಾನಪಡಿಸಿ, ನೋಡು ಈ ಅರಳಿ ಮರದಲ್ಲಿ ನನ್ನ ಸನ್ನಿಧಿ ಇರುತ್ತದೆ. ಆದ್ದರಿಂದ ನೀನು ಈ ವೃಕ್ಷದ ಮೂಲದಲ್ಲಿ ನೆಲೆಸು. ನಿನ್ನನ್ನು ಪ್ರತಿ ವರ್ಷ ಯಾರು ಪೂಜಿಸುತ್ತಾರೋ, ಅವರಿಗೆ ಮಾತೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಶ್ರೀ ಹರಿ ಹೇಳುತ್ತಾನೆ.

ಶನಿವಾರ ಅರಳಿ ವೃಕ್ಷವನ್ನು ಯಾರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ. ಬೇರುಗಳಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣು, ಎಲೆಗಳಲ್ಲಿ ಶಿವ ವಾಸಿಸುತ್ತಾರೆ ಎಂಬ ನಂಬಿಕೆ ಇದೆ.