ಚಿಕ್ಕಮಗಳೂರು: ಶುಕ್ಲ ಯಜುರ್ವೇದದ 2 ಸಾವಿರ ಶ್ಲೋಕಗಳನ್ನು ಯಾವುದೇ ಅಡಚಣೆ ಇಲ್ಲದೆ 50 ದಿನಗಳ ಕಾಲ ಪಠಿಸಿದ ವಿದ್ವಾಸ ವೇದಮೂರ್ತಿ ವೇದವ್ರತ ಮಹೇಶ ರೇಖೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ದಂಡಕ್ರಮ ಪಾರಾಯಣ ಎಂದರೇನು, ಇದನ್ನು ಪಠಿಸುವುದು ಅಷ್ಟೊಂದು ಕಠಿಣ ಏಕೆ ಎಂಬ ಪ್ರಶ್ನೆ ಎಲ್ಲರಲ್ಲಿದೆ.

ದಂಡ ಎಂದರೆ ಲಂಬವಾದ ಸಾಲು. ವೇದ ಮಂತ್ರಗಳನ್ನು ಅತ್ಯಂತ ಸಂಕೀರ್ಣ ರೀತಿಯಲ್ಲಿ, ಲಂಬಸಾಲುಗಳಂತೆ ಜೋಡಿಸಿ, ಸ್ವರಗಳಲ್ಲಿ ಲೋಪವಿಲ್ಲದೆ ಪಠಿಸುವ ವಿಧಾನವೇ ದಂಡಕ್ರಮ.

ಈ ವಿಧಾನದಲ್ಲಿ ಶ್ಲೋಕಗಳನ್ನು ನಿರ್ದಿಷ್ಟ ಕ್ರಮ, ಲಯ ಮತ್ತು ಸ್ವರ ಮಾದರಿಗಳೊಂದಿಗೆ ದಂಡದ ಆಕಾರದಲ್ಲಿ ಜೋಡಿಸಿ ಪಠಿಸಲಾಗುತ್ತದೆ. ಪ್ರತಿ ಶ್ಲೋಕದ ಪದಗಳು ಮತ್ತು ಅಕ್ಷರಗಳನ್ನು ಮುಂದೆ, ಹಿಂದೆ, ಮಧ್ಯದಲ್ಲಿ ಮರುಸಂಯೋಜಿಸಿ ಪಠಿಸುವ ನಿಯಮವನ್ನು ಒಳಗೊಂಡಿದೆ.

ಸಾಮಾನ್ಯ ಪಾರಾಯಣಕ್ಕಿಂತ ಇದರಲ್ಲಿ ಸ್ವರಗಳ ನಿಖರತೆ ಅತ್ಯಂತ ಮುಖ್ಯ. ಅಕ್ಷರ, ಪದ, ವಾಕ್ಯಗಳನ್ನು ತಪ್ಪಿಲ್ಲದೆ ಪಠಣ ಮಾಡಬೇಕು. ಒಂದು ಅಕ್ಷರ ತಪ್ಪಾದರೂ ಪೂರ್ಣ ಕ್ರಮ ಹಾಳಾಗುತ್ತದೆ. ಋಷಿಮುನಿಗಳ ಕಾಲದಲ್ಲಿ ಹಿರಿಯ ವಿದ್ವಾಂಸರು ಈ ವಿಧಾನದಲ್ಲಿ ಪಠಿಣ ಮಾಡುತ್ತಿದ್ದರು. ದಂಡಕ್ರಮ ಪಾರಾಯಣವನ್ನು
ವೇದಪಠಣದ ಕಿರೀಟ ಅಥವಾ ಶಿರೋಮಣಿ ಎಂದು ಕರೆಯಲಾಗುತ್ತದೆ.

ದಂಡಕ್ರಮ ಪಾರಾಯಣದ ಇತಿಹಾಸ ಗಮನಿಸಿದರೆ ಕೆಲವೇ ಕೆಲವು ವಿದ್ವಾಂಸರು ಮಾತ್ರ ಪೂರ್ಣ ದಂಡಕ್ರಮ ಪಾರಾಯಣವನ್ನು ತಪ್ಪಿಲ್ಲದೆ ಪಠಿಸಿದ್ದಾರೆ. ವೇದ ಸಂರಕ್ಷಣೆ, ವ್ಯಕ್ತಿಯ ಏಕಾಗ್ರತೆ, ಶುದ್ಧ ಮನಸ್ಥಿತಿ ಹೆಚ್ಚಿಸಲು ಅನುಕೂಲವಾಗಲಿದೆ. ನಿಷ್ಠೆ, ಶ್ರದ್ಧೆ ಮತ್ತು ಸಮರ್ಪಣೆಯ ಗುರುತಾಗಿ ದಂಡಕ್ರಮ ಪಾರಾಯಣ ಪಠಿಸಲಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಪಠಣ ಜಠಿಲ ಏಕೆ:

ವೇದ ಶ್ಲೋಕಗಳಲ್ಲಿನ ಪದಗಳು ಮತ್ತು ಅಕ್ಷರಗಳ ಲಯಬದ್ಧವಾಗಿ ಪಠಿಸಲಾಗುತ್ತದೆ. ಪ್ರತಿ ಶ್ಲೋಕವನ್ನು ಸಾಮಾನ್ಯವಾಗಿ ಒಂದು ಬಾರಿ ಪಠಿಸುವುದಲ್ಲ. ಪದಗಳನ್ನು ವಿವಿಧ ರೀತಿಯಲ್ಲಿ ಮರುಸಂಯೋಜಿಸಿ ಪಠಿಸಬೇಕು.

ಮೊದಲ ಪದ ಮತ್ತು ಎರಡನೇ ಪದ, ಎರಡು ಪದಗಳಿಗೆ ಮೂರನೇ ಪದ, ಮೂರೂ ಪದಗಳಿಗೆ ನಾಲ್ಕನೇ ಪದ ಜೋಡಿಸಿಕೊಂಡು ಪಠಿಸಬೇಕು. ಅಲ್ಲದೇ ಮುಂದೆ–ಹಿಂದೆ–ಮಧ್ಯದಲ್ಲಿ ಜೋಡಿಸಿಕೊಂಡು ಲಯ ತಪ್ಪದಂತೆ ನೋಡಿಕೊಳ್ಳಬೇಕು.

ಇಷ್ಟು ಮಾತ್ರವಲ್ಲದೇ ಸ್ವರ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಉದಾತ್ತ, ಅನುದಾತ್ತ, ಸ್ವರಿತ ಸ್ವರಗಳನ್ನು ಒಂದೇ ಶ್ರುತಿಯಲ್ಲಿ ನೂರು ಬಾರಿ ಪಠಿಸಿದರೂ ತಪ್ಪುಗಳು ನುಸುಳಬಾರದು. ಈ ವೇಳೆ ಒಂದು ಅಕ್ಷರ ತಪ್ಪಾದರೂ ಸಂಪೂರ್ಣ ಕ್ರಮವೇ ಲೋಪವಾಗುತ್ತದೆ.

ಪಠಣದ ವೇಳೆ ಉಸಿರಾಟಕ್ಕೂ ನಿಯಮಗಳಿವೆ. ಮನಸ್ಸು, ಶರೀರ, ಸ್ವರ ಎಲ್ಲವೂ ಪರಿಪೂರ್ಣವಾಗಿ ಬೆಸೆಯಬೇಕು. ಈ ದಂಡಕ್ರಮ ಕಲಿಯಲು ಸಾಕಷ್ಟು ಶ್ರದ್ಧೆ ಮತ್ತು ಸಮಯ ಬೇಕಾಗುತ್ತದೆ. ಆದ್ದರಿಂದಲೇ ಈ ಕ್ರಮವನ್ನು ವೇದಪಠಣದ ಮಸ್ತಕ ಎಂದೂ ಕರೆಯಲಾಗುತ್ತದೆ ಎಂದು ವೇದ ಪಾರಾಯಣ ವಿದ್ವಾಂಸರು ಹೇಳುತ್ತಾರೆ.

ರೇಖೆ ಅವರ ನೆರವಿಗೆ ನಿಂತ ಶೃಂಗೇರಿ ಮಠ

ಮಹೇಶ ರೇಖೆ ಅವರ ಸಾಧನೆಗೆ ಶೃಂಗೇರಿ ಶಂಕರ ಮಠವು ಬೆನ್ನೆಲುಬಾಗಿ ನಿಂತಿದೆ. ಮಠದಿಂದ ₹5 ಲಕ್ಷ ಬೆಲೆಯ ಸುವರ್ಣ ಕಂಕಣ ಮತ್ತು ₹1,11,116 ನೀಡಲಾಗಿದೆ. ಕಾಶಿಯಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ಅವರನ್ನು ಸನ್ಮಾನಿಸಲಾಗಿದೆ. ಮಠದ ಪ್ರತಿನಿಧಿಯಾಗಿ ಶಿವಕುಮಾರ ಶರ್ಮ ಅವರು ದೇವವ್ರತ ರೇಖೆ ಅವರಿಗೆ ಸ್ವರ್ಣ ಕಂಕಣ ತೊಡಿಸಿದರು.

ಸಂಖ್ಯೆ ಅನುಕ್ರಮಣಿ ಅನುಸರಿಸಿ ಲಕ್ಷಗಟ್ಟಲೆ ಪದಗಳ ಪಾರಾಯಣ ಇದಾಗಿದೆ. ವೇದಮೂರ್ತಿ ವೇದವ್ರತ ಮಹೇಶ ರೇಖೆ ಅವರು ಮಾಡಿರುವವ ದಂಡಕ್ರಮ ಪಾರಾಯಣವು ಯಾಜ್ಞವಲ್ಕ್ಯ ಮಹರ್ಷಿಗಳಿಂದ ಪ್ರಚಾರಗೊಂಡ ಶುಕ್ಲಯಜುರ್ವೇದ. ಇದನ್ನು ಪಾರಾಯಣ ಮಾಡುವುದು ಸುಲಭದ ಮಾತಲ್ಲ. ವರ್ಷಗಳ ಕಠಿಣ ತಪಸ್ಸಿನಿಂದ ಮಾತ್ರ ಸಾಧ್ಯ. ಇತಿಹಾಸ ಸೃಷ್ಟಿಸುವ ಮೂಲಕ ಮಹೇಶ ರೇಖೆಯವರು ದೊಡ್ಡ ಸಾಧಕರು ಎಂದು ವಿದ್ವಾಂಸ ಸುಮುಖ ಶರ್ಮಾ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.