ನಾರಾಯಣನೊಮ್ಮೆ ಕ್ಷೀರಸಾಗರದೊಳಗೆ ಯೋಗನಿದ್ರೆಯಲ್ಲಿ ತಲ್ಲೀನನಾಗಿದ್ದ. ಆಗ ಆತನ ಕಿವಿಯಿಂದ ಮಧು-ಕೈಟಭರೆಂಬ ಇಬ್ಬರು ರಾಕ್ಷಸರು ಹೊರಬಂದರು. ಹಾಗೆ ಬಂದವರೇ ತಮ್ಮ ಪ್ರವೃತ್ತಿಗನುಗುಣವಾಗಿ ವಿಷ್ಣುವಿನ ನಾಭಿಕಮಲದಲ್ಲಿ ಕುಳಿತಿದ್ದ ಬ್ರಹ್ಮನನ್ನು ಕೊಲ್ಲಲು ಮುಂದಾದರು. ಈ ಅನಿರೀಕ್ಷಿತವಾಗಿ ಎರಗಿದ ಆಪತ್ತಿನಿಂದ ಬೆದರಿದ ಬ್ರಹ್ಮ ವಿಷ್ಣುವನ್ನು ಎಚ್ಚರಿಸಲೆಂದು ನಾನಾ ಬಗೆಯಲ್ಲಿ ಆತನನ್ನು ಸ್ತುತಿಸಿದ. ಆದರೆ ಹರಿಯ ನಿದ್ರೆ ಹರಿಯಲಿಲ್ಲ. ವ್ಯಾಕುಲನಾದ ಬ್ರಹ್ಮ ಇನ್ನೇನು ಹತಾಶನಾಗಿ ಕೈಚೆಲ್ಲಬೇಕೆಂದಿರುವಷ್ಟರಲ್ಲಿ ಆತನಲ್ಲಿ, ‘ಈ ನಾರಾಯಣನು ಇಷ್ಟು ಗಾಢವಾದ ನಿದ್ರೆಯಲ್ಲಿ ಮುಳುಗಿರುವುದು ಅವನೊಳಗಿನ ಶಕ್ತಿಯ ಮಾಯೆಯಿಂದ. ಹಾಗಾಗಿ ಅವಳನ್ನು ಸ್ತುತಿಸಬೇಕು. ನಾರಾಯಣನ ದೇಹವನ್ನು ಬಿಟ್ಟುಬಾರೆಂದು ಕರೆಯಬೇಕು’ ಎನ್ನುವ ಜ್ಞಾನ ಮೂಡಿತು. ಅದಕ್ಕನುಗುಣವಾಗಿ ಆತ:

ವಿಷ್ಣುಸ್ತ್ವಯಾ ಪ್ರಕಟೀತಃ ಪ್ರಥಮಂ ಯುಗಾದೌ
ದತ್ತಾ ಚ ಶಕ್ತಿರಮಲಾ ಖಲು ಪಾಲನಾಯ ।
ತ್ರಾತಂ ಚ ಸರ್ವಮಖಿಲಂ ವಿವಶೀಕೃತೋಽದ್ಯ
ಯದ್ರೋಚತೇ ತವ ತಥಾಂಬ ಕರೋಷಿ ನೂನಮ್॥

ಅರ್ಥಾತ್, ‘ಓ ತಾಯಿಯೇ, ಈ ಕಲ್ಪದ ಪ್ರಾರಂಭದಲ್ಲಿ ನೀನೇ ವಿಷ್ಣುವನ್ನು ಸೃಷ್ಟಿಸಿದೆ. ಆತನಿಗೆ ಈ ಜಗತ್ತಿನ ರಕ್ಷಣೆಗೆ ಬೇಕಾದ ಶಕ್ತಿಯನ್ನೆಲ್ಲ ಅನುಗ್ರಹಿಸಿದೆ. ಆ ಮೂಲಕ ನೀನೇ ಜಗತ್ತನ್ನೆಲ್ಲ ಪಾಲಿಸಿದೆ. ಈಗ ಆ ವಿಷ್ಣುವನ್ನು ನೀನೇ ನಿದ್ರಾವಶನನ್ನಾಗಿಸಿರುವೆ. ಎಲ್ಲವೂ ನಿನ್ನಿಚ್ಛೆಯಂತೆಯೇ ನಡೆಯುತ್ತದೆಯಾಗಿ ಈಗಲೂ ನಿನಗೆ ಯಾವುದು ಯುಕ್ತವೆನಿಸುತ್ತದೆಯೋ ಅದನ್ನೇ ಮಾಡು’ ಎಂದ.

ಭಾರತೀಯ ಪರಂಪರೆಯು ಶಕ್ತಿಯನ್ನು ಹೀಗೆ ದೇವದೇವೋತ್ತಮನನ್ನೂ ಚೇತನಗೊಳಿಸುವ, ಮೋಹಗೊಳಿಸುವ ಅಂಗವಾಗಿ ಕಂಡಿದೆ. ಅಂತಹ ಶಕ್ತಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಎನ್ನುವುದಾಗಿ ಮೂರು ರೂಪಗಳಿಂದ ಆರಾಧಿಸಿದೆ. ಸತ್ತ್ವ, ರಜಸ್ ಮತ್ತು ತಮೋಗುಣಗಳ ಸಮತೋಲನದ, ತನ್ಮೂಲಕ ಜಗತ್ತಿನ ನಿಯಾಮಕ ಶಕ್ತಿಯಾದ ಋತದೊಂದಿಗೆ ಬಾಳು ಸಮನ್ವಯವನ್ನು ಹೊಂದಬೇಕು ಎಂಬ ಪಾಠದ ಮೂರ್ತರೂಪಗಳನ್ನಾಗಿ ಕಂಡರಿಸಿದೆ.

ಸರಸ್ವತೀ ಪೂಜೆ:
ನಾಮ-ರೂಪಾತ್ಮಕವಾದ ಈ ಜಗತ್ತಿನ ವ್ಯವಹಾರವೆಲ್ಲವೂ ನಡೆಯುವುದು ಶಬ್ದ ಮತ್ತು ಅರ್ಥಗಳ ನೆಲೆಯಲ್ಲಿ. ವಾಸ್ತವವಾಗಿ ಈ ಜಗತ್ತೆಲ್ಲವೂ ಒಂದು ಕಲ್ಪಿತ ಸತ್ಯವಾಗಿದ್ದರೂ, ಅದರಲ್ಲಿ ಬದುಕುವಾಗ ಒಂದಷ್ಟು ಸಂಕೇತಗಳು ಅನಿವಾರ್ಯವೇ ಆಗಿವೆ. ಉದಾಹರಣೆಗೆ ‘ಅದು ಗೋವು’ ಎನ್ನುವುದಾಗಿ ಒಂದು ಹಸುವನ್ನು ನೋಡಿ ನಾವು ಹೇಳುತ್ತೇವೆ. ಆದರೆ ಅದು ಗೋವಲ್ಲ. ಅದೊಂದು ಜೀವಿ. ‘ಗೋ’ ಎನ್ನುವ ಶಬ್ದದಿಂದ ನಾವು ಅದನ್ನು ಗುರುತಿಸಿರುವುದಷ್ಟೇ. ಹೀಗೆ ಎಂತೆಂತಹ ‘abstract’ ಆದ ಸಂಗತಿಗಳನ್ನೂ ನಾವು ಅರ್ಥೈಸಿಕೊಳ್ಳುವುದು ಅದಕ್ಕೊಂದು ಶಬ್ದ ಮತ್ತು ಅರ್ಥವನ್ನು ಕಲ್ಪಿಸಿಕೊಂಡೇ. ಅದಕ್ಕೆ ಪ್ರಕ್ರಿಯಾ ಜಗತ್ತು ಎಂತಲೂ ಕರೆಯುತ್ತೇವೆ. ಇಲ್ಲಿನ ಎಲ್ಲ ಆಗುಹೋಗುಗಳನ್ನು ಅರ್ಥೈಸಿಕೊಂಡು, ಕಾಲಕಾಲಕ್ಕೆ ಬೇಕಾದಂತೆ ಧರ್ಮ ಯಾವುದು, ಯುಕ್ತ ಯಾವುದು, ಅಯುಕ್ತ ಯಾವುದು - ಎನ್ನುವುದನ್ನೆಲ್ಲ ಚಿಂತಿಸಲು ಸಾಧ್ಯವಾಗುವಂತೆ ಮಾಡುವುದೇ ಬುದ್ಧಿ ಮತ್ತು ವಾಕ್ ಶಕ್ತಿಗಳು. ಅವುಗಳನ್ನು ಸ್ತ್ರೀರೂಪದಲ್ಲಿ ಆರಾಧನೆ ಮಾಡುವ ಭಾರತೀಯರು ಅವುಗಳ ಅಧಿಷ್ಠಾತೃ ದೇವತೆಯನ್ನು ‘ಸರಸ್ವತೀ’ ಎನ್ನುವುದಾಗಿ ಕರೆದಿದ್ದಾರೆ. ಜ್ಞಾನಕ್ಕೆ ಕಾರಣಳಾದ ಆ ದೇವಿಯನ್ನು ಆರಾಧಿಸುವ ಮೂಲಕ ಈ ಲೋಕದ ವ್ಯವಹಾರವನ್ನು ದಕ್ಷತೆಯಿಂದ ನಿರ್ವಹಿಸಿ ಮುಂದೆ ಶಬ್ದ ಮತ್ತು ಅರ್ಥಗಳನ್ನೂ ಮೀರಿ ಆತ್ಯಂತಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲ ನಮ್ಮದು. ಈ ಹೊತ್ತು ‘ಬಾಲಾಸರಸ್ವತೀ’ ಎಂಬ ದೇವಿಯ ಕುರಿತಾದ ಮಂತ್ರವೊಂದನ್ನು ಲಕ್ಷಸಂಖ್ಯೆಯಲ್ಲಿ ಜಪಿಸಿ ‘ಬಾಲಾಸರಸ್ವತೀ ಹೋಮವನ್ನು’ ಮಾಡುವ ಸಂಪ್ರದಾಯವಿದೆ. ವಿದ್ಯಾರ್ಥಿದೆಸೆಯಲ್ಲಿರುವ ಮಕ್ಕಳಿಂದ ಈ ಜಪವನ್ನು ಮಾಡಿಸುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.