ತುಳಸಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯವರಿಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ತುಳಸಿ ಗಿಡದ ಪೂಜೆ ಹೆಚ್ಚು ಮಹತ್ವ ಪಡೆದಿದೆ.

ತುಳಸಿ ಹಬ್ಬದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಈ ದಿನ ಪಾಲಿಸಬೇಕಾದ ಅಂಶಗಳು ಯಾವುವು ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
.ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ.ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ.

ತುಳಸಿ ಹಬ್ಬದಂದು ತುಳಸಿ ಗಿಡದ ಎಲೆ ಅಥವಾ ತುಳಸಿ ಗಿಡವನ್ನು ಕಿತ್ತು ಹಾಕಬಾರದು.

ತುಳಸಿ ಹಬ್ಬವನ್ನು ಆಚರಣೆ ಮಾಡುವವರು ಈ ದಿನ ಮಾಂಸಾಹಾರ ಸೇವನೆ ಮಾಡಬಾರದು.

ಹಬ್ಬದ ದಿನ ಕೆಟ್ಟ ಆಲೋಚನೆಗಳನ್ನು ಮಾಡುವುದು, ಇತರರನ್ನು ನಿಂದಿಸುವುದು ಹಾಗೂ ಬೈಯುವುದನ್ನು ಮಾಡಬಾರದು.

ಈ ದಿನ ಹಿರಿಯರಿಗೆ ಅವಮಾನಿಸಿದರೆ, ಮಹಾಲಕ್ಷ್ಮೀಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.

ತುಳಸಿ ಹಬ್ಬದ ದಿನ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಶುಭವಾಗಲಿದೆ.

ತುಳಸಿ ಹಬ್ಬದಂದು ತುಳಸಿ ಗಿಡವನ್ನು ಪೂಜಿಸಿ ದೀಪ ಹಚ್ಚುವುದರಿಂದ ಲಕ್ಷ್ಮೀಯ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಹಬ್ಬದ ದಿನ ತುಳಸಿ ಗಿಡವನ್ನು ದಾನವಾಗಿ ಕೊಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ದೇವಾಲಯಗಳಿಗೆ ತುಳಸಿ ಗಿಡವನ್ನು ದಾನದ ರೂಪದಲ್ಲಿ ನೀಡುವುದರಿಂದ ಒಳಿತಾಗುತ್ತದೆ.

ಈ ದಿನ ತುಳಸಿಗೆ ಕೆಂಪು ಬಟ್ಟೆ ಹಾಗೂ ಮಂಗಳ ದ್ರವ್ಯಗಳನ್ನು ಅರ್ಪಿಸಿ ಪೂಜಿಸುವುದರಿಂದ ಶುಭಫಲ ದೊರೆಯುತ್ತದೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.

.Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.