ಭಾನುವಾರ, ನವೆಂಬರ್ 29, 2020
19 °C

ವಾರ ಭವಿಷ್ಯ 25-10-2020ರಿಂದ 31-10-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ

ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

***
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕೆಲಸ ಕೆಲಸಕಾರ್ಯಗಳಲ್ಲಿ ಚುರುಕುತನ ಕಾಣಬಹುದು. ಹಿರಿಯರೊಂದಿಗೆ ಕುಳಿತು ಚರ್ಚಿಸಿ ಆರಂಭಿಸಿದ ಕೆಲಸಗಳು ಸಾಕಷ್ಟು ಫಲ ಕೊಡುತ್ತವೆ. ವಿರೋಧಿಗಳಿಂದ ಹೆಚ್ಚಿನ ಒತ್ತಡ ಬಂದು ಬೇಸರವಾಗುತ್ತದೆ. ಕೌಟುಂಬಿಕ ವಿಷಯಗಳಲ್ಲಿ ಪ್ರಗತಿ. ಮನೆಯ ಅಲಂಕಾರಕ್ಕಾಗಿ ಹೊಸ ವಸ್ತುಗಳನ್ನು ಖರೀದಿಸುವಿರಿ. ಹಣದ ಒಳಹರಿವು ಕಡಿಮೆ ಇರುತ್ತದೆ. ವಾಹನಗಳಿಂದ ಹೆಚ್ಚಿನ ಖರ್ಚು ಸಂಭವಿಸಬಹುದು. ಈ ಹಿಂದೆ ನಡೆಸಿದ್ದ ವ್ಯವಹಾರಗಳಿಂದ ಈಗ ಲಾಭ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತದೆ. ಕೃಷಿಕರಿಗೆ ಉತ್ತಮ ಲಾಭದ ನಿರೀಕ್ಷೆ ಮಾಡಬಹುದು.

***
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವ ಯೋಗವಿದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ನೆನೆಗುದಿಗೆ ಬಿದ್ದಿದ್ದ ಕೆಲಸಗಳಲ್ಲಿ ಕೆಲವನ್ನು ಆರಂಭಿಸಬಹುದು. ಕುಟುಂಬದಲ್ಲಿ ಏಕಪ್ರಕಾರ ಅಭಿಪ್ರಾಯ ಮೂಡಿ ಹೊಸ ವ್ಯವಹಾರ ಆರಂಭಿಸಲು ಸೂಕ್ತ ವಾತಾವರಣ ನಿರ್ಮಾಣವಾಗುವುದು. ಉದ್ಯೋಗದಲ್ಲಿ ಬೆಳವಣಿಗೆ ಕಾಣಬಹುದು. ಪಿತ್ರಾರ್ಜಿತ ಆಸ್ತಿಯ ಹಂಚಿಕೆ ಸದ್ಯದಲ್ಲೇ ನಿರೀಕ್ಷಿಸಬಹುದು. ಅನಾರೋಗ್ಯ ಪೀಡಿತರ ಆರೋಗ್ಯವು ಸುಧಾರಿಸುತ್ತದೆ. ಈ ರಾಶಿಯ ಹೆಣ್ಣು ಮಕ್ಕಳ ಅಭಿವೃದ್ಧಿ ಚೆನ್ನಾಗಿರುತ್ತದೆ. ಕಣ್ಣಿನ ಬಗ್ಗೆ ವಿಶೇಷ ಗಮನ ಕೊಡುವುದು ಒಳ್ಳೆಯದು.

***
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಹಣಕಾಸಿನ ವಿಚಾರದ ಬಗ್ಗೆ ಕಾವೇರಿದ ಮಾತುಗಳು ಆಗಬಹುದು, ಸಮಾಧಾನದಿಂದ ಇದ್ದಲ್ಲಿ ಹಣ ವಾಪಸ್ ಬರುವ ಮಾರ್ಗಗಳು ದೊರೆಯುತ್ತವೆ. ಪತ್ರಿಕಾ ರಂಗದಲ್ಲಿ ಇರುವವರಿಗೆ ಉತ್ತಮ ಹೆಸರು ಬರುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಆಗುವ ರೀತಿಯಲ್ಲಿ ಆರ್ಥಿಕ ಸಹಕಾರ ದೊರೆಯುತ್ತದೆ. ಮಹತ್ವದ ಕಾರ್ಯಗಳನ್ನು ಈಗ ಆರಂಭಿಸುವುದು ಅಷ್ಟು ಒಳಿತಲ್ಲ. ಉದ್ಯೋಗಸ್ಥ ಮಹಿಳೆಯರು ತಮ್ಮ ಕೆಲಸಗಳಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಉತ್ತಮ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಮುನ್ನಡೆ ಕಾಣಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ.
***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಹಳೆ ಅಡೆತಡೆ ಇಲ್ಲದೆ ಸಾಗುವ ನಿಮ್ಮ ಕೆಲಸಗಳನ್ನು ಕಂಡು ಸಂತೋಷಿಸುವಿರಿ. ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತವೆ, ಇವುಗಳನ್ನು ಸದುಪಯೋಗ ಮಾಡಿಕೊಳ್ಳಿ. ವ್ಯಾಪಾರಿಗಳು ಗ್ರಾಹಕರೊಂದಿಗೆ ಗಲಾಟೆಗಳನ್ನು ಮಾಡಿಕೊಳ್ಳುವುದು ಬೇಡ. ಎದುರಾದ ಸಮಸ್ಯೆಗಳನ್ನು ಆತ್ಮಬಲದಿಂದ ಎದುರಿಸಿ ಮುನ್ನಡೆಯಿರಿ. ದೇಹಾಲಸ್ಯದಿಂದ ಅನಾರೋಗ್ಯ ಕಾಡಬಹುದು, ದೇಹಕ್ಕೆ ಸ್ವಲ್ಪ ವಿಶ್ರಾಂತಿ ಕೊಡಿರಿ. ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು, ತಾಳ್ಮೆಯಿಂದ ಸಮಾಧಾನ ಪಡಿಸುವುದು ಉತ್ತಮ. ವಿದೇಶಕ್ಕೆ ವಸ್ತುಗಳನ್ನು ರಫ್ತು ಮಾಡುವವರ ವ್ಯವಹಾರ ವೃದ್ಧಿಸುವುದು.

***
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಹಳೆಯ ವ್ಯವಹಾರಗಳಲ್ಲಿ ಸುಧಾರಣೆ ಕಂಡು ಗಳಿಕೆ ಹೆಚ್ಚುತ್ತದೆ. ಹೆಚ್ಚುವರಿ ಖರ್ಚುಗಳನ್ನು ನಿಯಂತ್ರಿಸಿ ಹಣ ಉಳಿತಾಯದತ್ತ ಗಮನ ಹರಿಸಿರಿ. ಸಾಮಾಜಿಕ ಗೌರವದ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಸಹ ಬರುತ್ತದೆ. ಕೆಲವು ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಎನಿಸಿದರೂ ಕ್ರಮೇಣ ಸುಧಾರಿಸುತ್ತವೆ. ಲೇವಾದೇವಿ ವ್ಯವಹಾರವು ಅಷ್ಟು ಒಳಿತಲ್ಲ, ಹಾನಿಯೇ ಹೆಚ್ಚಾಗಬಹುದು. ಹಣದ ಒಳಹರಿವು ಕ್ರಮೇಣ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗುವ ಕಾಲ. ಮಾನಸಿಕ ರೋಗಿಗಳಿಗೆ ರೋಗ ತಹಬಂದಿಗೆ ಬರುವ ಸಾಧ್ಯತೆಯಿದೆ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕೆಲಸ ಕಾರ್ಯಗಳು ಆಗಿ ಸುಗಮವಾಗಿ ಆಗದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಹಣಕಾಸಿನ ಮುಗ್ಗಟ್ಟು ಕಾಡಬಹುದು. ಆಸ್ತಿ ಮಾರಾಟದಲ್ಲಿ ಹಿನ್ನಡೆ ಆದರೂ ಆಸ್ತಿ ಮಾರಾಟವಾಗಿ ನಿರೀಕ್ಷಿತ ಬೆಲೆ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಕೊಡಿ. ಕೆಲವು ಹಿಂದಿನ ಒಪ್ಪಂದಗಳಿಂದ ಈಗ ವ್ಯವಹಾರದಲ್ಲಿ ಅಲ್ಪ ಲಾಭ ಕಾಣಬಹುದು. ಸರ್ಕಾರಿಮಟ್ಟದ ಸಾಲ ತೆಗೆದುಕೊಳ್ಳಬಹುದು. ಹಿರಿಯರೊಂದಿಗಿನ ಸಂಬಂಧಗಳು ಕಡಿಮೆಯಾಗಿ ಪರಿಸ್ಥಿತಿ ಬಿಗಡಾಯಿಸಬಹುದು. ವಿಶೇಷ ರೀತಿಯ ಉಕ್ಕನ್ನು ಉತ್ಪಾದಿಸುವವರಿಗೆ ವ್ಯವಹಾರ ಹೆಚ್ಚುತ್ತದೆ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಅತಿಯಾದ ಆತ್ಮಗೌರವವು ಬಂಧುಗಳು ನಿಮಗೆ ಅಗೌರವ ತೋರಿಸಲು ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ, ಹಿರಿಯರ ವ್ಯವಹಾರಗಳನ್ನು ಮುಂದುವರಿಸುವುದು ಒಳ್ಳೆಯದು, ಇದರಲ್ಲಿ ಯಶಸ್ಸು ಇದೆ. ಸ್ಥಿರಾಸ್ತಿಯ ಗೊಂದಲಗಳು ಸ್ಥಳೀಯರ ಮಧ್ಯಸ್ಥಿಕೆಯಿಂದ ಪರಿಹಾರವಾಗುವುದು. ಸರ್ಕಾರಿ ಗುತ್ತಿಗೆ ಕೆಲಸ ಮಾಡುವವರಿಗೆ ಹೊಸ ಕೆಲಸಗಳು ದೊರೆತು ಆದಾಯ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ..

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ವಿದೇಶ ಪ್ರಯಾಣಕ್ಕೆ ಹೋಗಬೇಕೆಂದಿದ್ದವರಿಗೆ ಈಗ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಮಾನಸಿಕ ಗೊಂದಲಗಳಿಂದಾಗಿ ವ್ಯವಹಾರದಲ್ಲಿ ಸ್ವಲ್ಪ ಪ್ರಗತಿ ನಿಧಾನವಾಗಬಹುದು. ಹಳೆಯ ವೈರಿಗಳು ನಿಮ್ಮ ಸ್ನೇಹ ಬಯಸಿ ಬರುವರು, ಅದನ್ನು ಒಪ್ಪಿಕೊಳ್ಳುವುದು ನಿಮಗೆ ಒಳ್ಳೆಯದು. ಇವರು ನಿಮ್ಮ ವ್ಯವಹಾರದಲ್ಲಿನ ಶತ್ರುಗಳನ್ನು ಮಣಿಸಲು ಸಹಾಯ ಮಾಡುವರು. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸ್ತ್ರೀಯರ ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದೆ. ಸ್ತ್ರೀಯರಿಂದ ನಿಮಗೆ ಧನ ಲಾಭವಿದೆ.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ವ್ಯವಹಾರದ ನೈಪುಣ್ಯತೆಯಿಂದ ಕೆಲಸಗಾರರ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವಿರಿ ಮತ್ತು ಅವರೊಡನೆ ಉತ್ತಮ ಬಾಂಧವ್ಯ ಬೆಳೆಸುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಖರ್ಚುವೆಚ್ಚಗಳಲ್ಲಿ ನಿಯಂತ್ರಣ ಸಾಧಿಸಿ ಆರ್ಥಿಕ ಸಮತೋಲನ ಸಾಧಿಸುವಿರಿ. ರಾಜಕಾರಣಿಗಳಿಗೆ ಆಶಾದಾಯಕ ಸನ್ನಿವೇಶಗಳು ಒದಗಿ ಬಂದರೂ ನಿರೀಕ್ಷಿತ ಸ್ಥಾನ ಸಿಗುವುದು ಸ್ವಲ್ಪ ನಿಧಾನವಾಗಬಹುದು. ಯಾವುದೇ ಸಂದರ್ಭದಲ್ಲಿ ಅವಸರದ ನಿರ್ಣಯಗಳು ಬೇಡ. ಹಿತಶತ್ರುಗಳು ಹೂಡಿದ್ದ ವಂಚನೆಗೆ ಸಿಲುಕದೆ ಪಾರಾಗುವಿರಿ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕೈಗೊಂಡ ಕೆಲಸಗಳಲ್ಲಿ ನಿಧಾನಗತಿ ಇದ್ದರೂ ಸಹ ಖಂಡಿತ ಮುಂದುವರೆಯುವುದು. ಅನಿರೀಕ್ಷಿತ ಖರ್ಚು ಎದುರಾಗಬಹುದು ಅದಕ್ಕಾಗಿ ತಯಾರಿ ಮಾಡಿಕೊಳ್ಳಿ. ಲೇಖಕರಿಗೆ ಕೀರ್ತಿ ಗೌರವಗಳು ಲಭಿಸುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಗಳು ನಿರಾತಂಕವಾಗಿ ಸಾಗುತ್ತವೆ. ಇದಕ್ಕೆ ಬೇಕಾದ ಸಹಾಯ
ಸೌಲಭ್ಯಗಳು ಸಮಾಜದಿಂದ ದೊರಕುತ್ತವೆ. ಬರಬೇಕಾಗಿದ್ದ ಸಾಲದ ಹಣ ಹಂತಹಂತವಾಗಿ ಬರಲಾರಂಭಿಸುತ್ತವೆ. ಉದ್ಯೋಗಸ್ಥರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಪ್ರೋತ್ಸಾಹ ಸಿಗುತ್ತದೆ. ಹಣದ ಹರಿವು ಸಾಮಾನ್ಯ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ನೌಕರರ ಜೊತೆ ಉತ್ತಮ ಬಾಂಧವ್ಯ ನೆಲೆಸಿ, ಕೆಲಸಕಾರ್ಯಗಳಲ್ಲಿ ಉತ್ತಮ ಪ್ರಗತಿ ಇರುತ್ತದೆ. ಗೃಹ ನಿರ್ಮಾಣ ಈಗ ಆರಂಭಿಸಬಹುದು, ಅದಕ್ಕೆ ಮೊದಲು ಸೂಕ್ತ ತಯಾರಿ ಮಾಡಿಕೊಳ್ಳಿರಿ. ದನದ ಒಳಹರಿವು ಮಂದಗತಿ. ಗೃಹ ಆಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಬಂಧುಗಳಿಂದ ಧನಸಹಾಯದ ಬೇಡಿಕೆ ಬರುತ್ತದೆ, ಸಹಾಯ ಮಾಡಿದಲ್ಲಿ ಹಣ ವಾಪಸ್ ಬರುವುದು ಅನುಮಾನ. ಉದ್ಯೋಗದಲ್ಲಿರುವ ವಯಸ್ಕರು ಅಧಿಕಾರಿಯ ಮರ್ಜಿಯಲ್ಲಿ ಇರಲೇಬೇಕಾಗುತ್ತದೆ, ಇಲ್ಲವಾದಲ್ಲಿ ಉದ್ಯೋಗ ನಷ್ಟ ಎದುರಾಗಬಹುದು.

***
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅನಾವಶ್ಯ ಖರ್ಚುಗಳು ಎದುರಾಗಬಹುದು. ಅಳೆದು ತೂಗಿ ಖರ್ಚು ಮಾಡುವುದು ಉತ್ತಮ. ಎಂದೋ ಹಿರಿಯರು ನಿಮಗಾಗಿ ಇಟ್ಟಿದ್ದ ಹಣ ಇಂದು ಉಪಯೋಗಕ್ಕೆ ಬರುತ್ತದೆ. ಲೇವಾದೇವಿ ವ್ಯವಹಾರಗಳು ಸದ್ಯದ ಪರಿಸ್ಥಿತಿಯಲ್ಲಿ ಬೇಡವೇ ಬೇಡ. ಇದರಲ್ಲಿ ಆದಾಯಕ್ಕಿಂತ ನಷ್ಟವೇ ಹೆಚ್ಚು. ಸೈನ್ಯದಲ್ಲಿರುವವರಿಗೆ ಅವರ ಸೇವೆಗೆ ತಕ್ಕ ಗೌರವ ದೊರಕುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ತಾಯಿಯಿಂದ ಧನಸಹಾಯದ ಸಾಧ್ಯತೆ ಇದೆ. ಹಿರಿಯರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.