ಮಂಗಳವಾರ, ಏಪ್ರಿಲ್ 20, 2021
30 °C

ವಾರ ಭವಿಷ್ಯ: 4-4-2021 ರಿಂದ 10-4-2021 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**
ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ಸಂಪನ್ಮೂಲ ಕ್ರೋಡೀಕರಣದಲ್ಲಿ ಯಶಸ್ಸನ್ನು ಸಾಧಿಸುವಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿ ಖರೀದಿಸಲು ಪ್ರಯತ್ನ ಪಡುವಿರಿ. ವಾಹನ ಚಾಲನೆ ವೇಳೆ ಎಚ್ಚರಿಕೆಯನ್ನು ವಹಿಸುವುದು ಅತಿ ಮುಖ್ಯ. ಪ್ರಕೃತಿದತ್ತ ವಸ್ತುಗಳನ್ನು ಸಂಗ್ರಹಿಸಿ ಮಾರುವವರಿಗೆ ಬೇಡಿಕೆ ಹೆಚ್ಚುತ್ತದೆ. ಉದ್ಯೋಗ ನಿಮಿತ್ತ ದೂರದ ಊರಿಗೆ ಹೋಗಿ ಬರುವ ಸಾಧ್ಯತೆಗಳು ಕಂಡುಬರುತ್ತವೆ. ಸಂಬಂಧಿಕರಿಂದ ಇದ್ದ ಆಸ್ತಿ ಕಿರಿಕಿರಿಯು ತಪ್ಪುತ್ತದೆ. ರಕ್ತ ಸಂಬಂಧಿ ರೋಗಗಳು ಇರುವವರು ಎಚ್ಚರಿಕೆವಹಿಸಬೇಕು.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನಿಮ್ಮ ಕುಟುಂಬಕ್ಕೆ ಎದುರಾಗಬಹುದಾಗಿದ್ದ ಸಂಕಷ್ಟಗಳನ್ನು ಸ್ನೇಹಿತರ ಸಹಾಯದಿಂದ ನಿವಾರಣೆ ಮಾಡಿಕೊಳ್ಳುವಿರಿ. ಬಂಧುಗಳ ನಡುವೆ ನಡೆಯುತ್ತಿದ್ದ ವ್ಯಾಜ್ಯವನ್ನು ಪರಿಹರಿಸಿ ಗೌರವ ಪಡೆದುಕೊಳ್ಳುವಿರಿ. ಜೀವನದಲ್ಲಿದ್ದ ನಿರುತ್ಸಾಹವನ್ನು ತೊಡೆದುಹಾಕಿ ಹೊಸ ಉತ್ಸಾಹವನ್ನು ಪಡೆಯುವಿರಿ. ಆಸ್ತಿ ಸಂಬಂಧದ ಹಳೆಯ ದಾಖಲೆಗಳನ್ನು ಸರಿಯಾಗಿ ನೋಡಿಕೊಳ್ಳಿರಿ ಇಲ್ಲವಾದಲ್ಲಿ ದಾಖಲೆಗಳು ವ್ಯತ್ಯಾಸವಾಗಬಹುದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಕಂಪ್ಯೂಟರ್ ಬಿಡಿ ಭಾಗಗಳನ್ನು ಮಾರುವವರಿಗೆ ವ್ಯವಹಾರ ಹೆಚ್ಚುತ್ತದೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕಚೇರಿ ಕೆಲಸಗಳಲ್ಲಿ ಇದ್ದ ಗೋಜಲುಗಳು ಪರಿಹಾರವಾಗುತ್ತವೆ. ಮುದ್ರಣಕಾರರಿಗೆ ಹೆಚ್ಚಿನ ಅವಕಾಶಗಳು ಒದಗಿಬರುತ್ತವೆ. ಸಂಕಷ್ಟದ ಮಧ್ಯೆಯೂ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ನಿಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದ ಮಾತನಾಡಿ ಸೌಹರ್ದತೆಯನ್ನು ಕಾಯ್ದುಕೊಳ್ಳುವುದು ಬಹಳ ಉತ್ತಮ. ಸಾರ್ವಜನಿಕವಾಗಿ ಮಾತನಾಡುವಾಗ ಮಾತಿನ ಬಗ್ಗೆ ಸರಿಯಾದ ಗಮನವಿರಲಿ. ಬಂಧುಗಳಿಂದ ಇಲ್ಲಸಲ್ಲದ ಕಿರಿಕಿರಿಗಳು ಬರಬಹುದು. ವೃತ್ತಿಯಲ್ಲಿ ಹೊಸ ಸ್ಥಾನಮಾನಗಳು ದೊರೆಯುತ್ತವೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಕೃಷಿ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಕೈಗೊಂಡವರೆಗೆ ಸರ್ಕಾರದಿಂದ ಅನುದಾನ ದೊರೆಯುತ್ತದೆ. ಬಹಳ ದಿನಗಳಿಂದ ಸತಾಯಿಸುತ್ತಿದ್ದ ಆಸ್ತಿ ಖರೀದಿಯ ವಿಷಯವು ಈಗ ಒಂದು ರೂಪಕ್ಕೆ ಬರುತ್ತದೆ. ಧನದ ಕ್ರೋಡೀಕರಣ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ತಲುಪುತ್ತದೆ. ಕೆಲಸ ಮಾಡುವ ಜಾಗದಲ್ಲಿ ವಾದವಿವಾದಗಳಿಂದ ದೂರ ಇರುವುದು ಒಳ್ಳೆಯದು. ಜನಪ್ರತಿನಿಧಿಗಳಿಗೆ ಅಚ್ಚರಿಯ ಬೆಳವಣಿಗೆ ನಡೆದು ಒಂದು ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. ಚಿನ್ನ ಬೆಳ್ಳಿಯ ವಸ್ತುಗಳನ್ನು ರಫ್ತು ಮಾಡುವವರಿಗೆ ಹೊಸ ಅವಕಾಶಗಳು ತೆರೆದು ಕೊಳ್ಳುತ್ತವೆ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸ್ನೇಹಿತರ ಸಹಕಾರದಿಂದ ಸಂಗೀತ ಕಾರ್ಯಕ್ರಮಗಳಲ್ಲಿ ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತ ಧನಲಾಭಗಳು ಒದಗುವ ಸಾಧ್ಯತೆಗಳಿವೆ. ಹೊಸ ಆಸ್ತಿಯ ಖರೀದಿಗೆ ಇದು ಸಕಾಲವಲ್ಲ. ನಿಮ್ಮ ನೇರ ಮಾತುಗಳು ಕೆಲವರಿಗೆ ಕಿರಿಕಿರಿ ಎನಿಸಿದರೂ ನಂತರ ಸತ್ಯ ತಿಳಿದು ಮೆಚ್ಚುಗೆ ಸೂಚಿಸುವರು. ಕುಟುಂಬದವರಿಂದ ಉತ್ತಮ ಪ್ರೀತಿ ಸಹಕಾರ ದೊರೆಯುತ್ತದೆ. ಅತಿಯಾದ ಮಾತು ಮತ್ತು ಹೊಗಳಿಕೆ ನಿಮ್ಮ ಗೌರವ ಘನತೆಗಳಿಗೆ ಕುಂದು ತರುತ್ತವೆ. ಹೊಸ ರೀತಿಯ ವ್ಯವಹಾರಗಳಿಗೆ ಆಹ್ವಾನ ಬರುತ್ತದೆ, ಅದರ ಆಗುಹೋಗುಗಳ ಬಗ್ಗೆ ಸರಿಯಾಗಿ ತಿಳಿದು ಮುಂದುವರೆಯಿರಿ.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಅನ್ಯ ವಿಚಾರಗಳನ್ನು ಯೋಚನೆ ಮಾಡದೆ ಹಿಡಿದ ಕಾರ್ಯವನ್ನು ಮಾಡಿದಲ್ಲಿ ವಿಜಯ ನಿಮ್ಮದಾಗಿರುತ್ತದೆ. ಸರಕು ಸಾಗಣೆ ಮಾಡುವ ವಾಹನ ಮಾಲೀಕರಿಗೆ ಲಾಭವಿರುತ್ತದೆ. ಬೇರೆಯವರ ಬಗ್ಗೆ ಅಸೂಯೆ ಪಡುವುದು ಅಷ್ಟು ಒಳಿತಾಗಲಾರದು. ಹಲವು ದಿನಗಳಿಂದ ಕಾಡಿಸುತ್ತಿದ್ದ ಕೆಲಸವೊಂದು ಮುಗಿದು ಮನಸ್ಸು ಹಗುರವಾಗುತ್ತದೆ. ಸಂಸಾರದಲ್ಲಿ ಸುಖವಿದ್ದರೂ ಸಂಗಾತಿಯ ಕಿರಿಕಿರಿ ಇದ್ದೇ ಇರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

**
ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಕೆಲವು ಕೆಲಸಗಳು ಅತ್ಯಂತ ನಾಜೂಕಾಗಿ ಯಶಸ್ವಿಯಾಗಿ ನೆರವೇರಲಿವೆ. ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ನಿಮ್ಮ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಒಬ್ಬರ ಮೇಲೆ ಚಾಡಿ ಹೇಳುವುದು ಒಳಿತಲ್ಲ ಅದು ನಿಮಗೆ ಕೆಡುಕಾಗಬಹುದು. ನಿಮ್ಮ ಕೈಕೆಳಗಿನ ಕೆಲಸಗಾರರ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಲ್ಲಿ ಕಾರ್ಖಾನೆಯ ಕೆಲಸಗಳು ಸುಗಮವಾಗುವುದು. ಬಾಯಿತಪ್ಪಿ ಆಡಿದ ಮಾತಿಗೆ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು.

**
ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಹೊಸ ಉದ್ಯಮಕ್ಕೆ ಕೈ ಹಾಕುವ ಮುನ್ನ ಸಾಕಷ್ಟು ಆಲೋಚನೆ ಮಾಡಿರಿ. ಮಕ್ಕಳಿಂದ ಧನಸಹಾಯವಾದರೂ ಮನೆಯಲ್ಲಿ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾದೀತು. ಕೋಪ ತಾಪಗಳನ್ನು ಬಿಟ್ಟು ಸಹನೆಯಿಂದ ಅವರಿಗೆ ತಿಳುವಳಿಕೆಯನ್ನು ಹೇಳಿ ಸಾಮರಸ್ಯವನ್ನು ಕಾಪಾಡಿಕೊಳ್ಳಿರಿ. ಸ್ವಲ್ಪ ಆರ್ಥಿಕ ಅಡಚಣೆಗಳು ಎದುರಾಗಬಹುದು. ಶುಭಕರ‍್ಯಗಳಿಗಾಗಿ ಹೆಚ್ಚಿನ ಓಡಾಟ ಮಾಡುವಿರಿ. ಉದ್ಯೋಗಿಗಳಿಗೆ ಅವರ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ಕಾರ್ಯದಲ್ಲಿ ಯಶಸ್ಸು ಸಾಧಿಸಬಹುದು.

**
ಧನಸ್ಸು ರಾಶಿ (ಮೂಲ ಪೂರ್ವಷಾಢ ಉತ್ತರಾಷಾಢ 1 )
ಹಣಕಾಸಿನ ವಿಷಯದಲ್ಲಿ ಕಾಣುತ್ತಿದ್ದ ಚೇತರಿಕೆಯು ಸ್ವಲ್ಪ ನಿಧಾನಗತಿ ಆಗಬಹುದು. ಅನೇಕ ತೊಂದರೆಗಳ ನಡುವೆಯೂ ನಿಮ್ಮ ಕಾರ್ಯಕ್ಷಮತೆಯಿಂದ ಹಿರಿಯ ಅಧಿಕಾರಿಗಳ ವಿಶ್ವಾಸವನ್ನು ಗಳಿಸುವಿರಿ. ಮನೆ ಕಟ್ಟುವ ವಿಚಾರದಲ್ಲಿ ಮನೆಯವರೆಲ್ಲರ ಜೊತೆ ಮಾತನಾಡಿ ವಿಶ್ವಾಸವನ್ನು ಪಡೆದುಕೊಂಡು ಮುಂದುವರೆಯಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಏರಿಳಿತವನ್ನು ಕಾಣಬಹುದು, ಹಿರಿಯರ ಆರೋಗ್ಯದ ಕಡೆ ಗಮನ ಇರಲಿ. ವೃತ್ತಿಯಲ್ಲಿದ್ದ ಜಿಜ್ಞಾಸೆಗಳು ದೂರವಾಗುತ್ತವೆ.

**
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಳೆಯ ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ. ಈ ಮಾರ್ಗದಿಂದ ನಿಮ್ಮ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತದೆ. ಕೆಲವು ಹೆಣ್ಣು ಮಕ್ಕಳು ತಮ್ಮ ಪ್ರೇಮ ಪ್ರಕರಣದಿಂದಾಗಿ ಮನೆಯಲ್ಲಿ ಗೊಂದಲದ ವಾತಾವರಣವನ್ನು ಮೂಡಿಸುವರು. ಒತ್ತಡಗಳ ನಡುವೆಯೂ ಸಹ ಕಾರ್ಯಸಿದ್ಧಿಯಾಗುವುದು. ಆರೋಗ್ಯದ ವಿಚಾರದಲ್ಲಿ ಇದ್ದ ವ್ಯತ್ಯಾಸಗಳು ಸರಿಯಾಗುತ್ತವೆ. ವಿದ್ಯಾರ್ಥಿಗಳಲ್ಲಿ ಮಂದಗತಿಯ ಪ್ರಗತಿ ಇರುತ್ತದೆ. ವೃತ್ತಿಯಲ್ಲಿನ ವಿರೋಧಿಗಳನ್ನು ತಾಳ್ಮೆಯಿಂದ ಎದುರಿಸಿ ಗೆಲುವನ್ನು ಸಾಧಿಸುವಿರಿ.

**
ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಯುವಕರು ಹಿರಿಯರನ್ನು ಅವಮಾನಿಸಲು ಹೋಗಿ ತಾವೇ ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಅನೇಕ ದಿನಗಳಿಂದ ನಿಮ್ಮ ಕಾರ್ಯಗಳನ್ನು ವಿರೋಧಿಸುತ್ತಿದ್ದ ವಿರೋಧಿಗಳು ಸಹ ಈಗ ನಿಮಗೆ ಸಹಮತ ವ್ಯಕ್ತಪಡಿಸುವರು. ದೈವತಾ ಆರಾಧನೆಯಿಂದ ಶಾಂತಿ ಪಡೆಯಬಹುದು. ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಮಾರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದೆ. ನೀವು ನಡೆಸುತ್ತಿದ್ದ ಉದ್ದಿಮೆಗಳಿಗೆ ಇದ್ದ ಸರ್ಕಾರಿ ತೊಡಕುಗಳು ನಿವಾರಣೆಯಾಗಿ ಸಾಲ ಸೌಲಭ್ಯ ಸಹ ಸಿಗುತ್ತದೆ.

**
ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಮೊದಲೇ ನಿರ್ಧಾರಿತ ಕಾರ್ಯಕ್ರಮಗಳು ಈಗ ಕೈಗೂಡಲು ಆರಂಭಿಸುತ್ತವೆ. ನಿಮ್ಮ ಜೀವನದ ಕೆಲವೊಂದು ಘಟನೆಗಳು ಸಮೂಹದಲ್ಲಿ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಖರ್ಚುವೆಚ್ಚಗಳ ಬಗ್ಗೆ ಹಿಡಿತವನ್ನು ಸಾಧಿಸುವುದು ಅತಿ ಅಗತ್ಯ. ಪತ್ರಕರ್ತರಿಗೆ ಅವರ ಪ್ರತಿಭೆಯನ್ನು ತೋರಿಸುವ ಹೊಸ ಅವಕಾಶಗಳು ದೊರೆಯುತ್ತವೆ, ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿರಿ. ಈ ವಾರ ಅತಿಯಾದ ಆತ್ಮಗೌರವವು ನಿಮ್ಮನ್ನು ಆವರಿಸಿ ಕೊಳ್ಳಬಹುದು, ಇದರ ಬಗ್ಗೆ ಎಚ್ಚರ ವಹಿಸಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.