ಅಮೀನಗಡ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣವೊಂದರಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಪತ್ತೆ ಹಚ್ಚಿ ಅಂದಾಜು 11 ಲಕ್ಷ 95 ಸಾವಿರ ರೂಪಾಯಿ ಮೌಲ್ಯದ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಹೇಳಿದರು.

ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ ಅವರು ಕಳೆದ ಏಪ್ರಿಲ್ 13ರಂದು ಲಿಂಗಸೂರು ತಾಲ್ಲೂಕಿನ ರಾಮಣ್ಣ ಈಳಗೇರಿ ಎಂಬುವರು ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ಪ್ರಕರಣದ ದಾಖಲಿಸಿಕೊಂಡು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ಎಸ್. ಬಿ. ಅಜೂರ ಮಾರ್ಗದರ್ಶನದಲ್ಲಿ ಪಿಎಸ್ಐ ಜ್ಯೋತಿ ವಾಲಿಕಾರ ಹಾಗೂ ವೈ. ಎಚ್. ಪಠಾಣ ನೇತೃತ್ವದ ಸಿಬ್ಬಂದಿ ಒಳಗೊಂಡ ತಂಡ ಆರೋಪಿತ ಸುರಪೂರ ತಾಲ್ಲೂಕಿನ ಹುಲಗಪ್ಪ ಮೋಡಿಕಾರ ಎಂಬಾತನನ್ನು ಪತ್ತೆ ಹಚ್ಚಿ 21 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಸಿಪಿಐ ಎಸ್. ಬಿ.ಅಜೂರ, ಪಿಎಸ್ಐ ಜ್ಯೋತಿ ವಾಲಿಕಾರ, ವೈ. ಎಚ್. ಪಠಾಣ, ಸಿಬ್ಬಂದಿ ರವಿ ದಾಸರ, ಆನಂದ ಮನ್ನಿಕಟ್ಟಿ ಸೇರಿದಂತೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.