ಬಾದಾಮಿ: ‘ಶ್ರಾವಣ ಮಾಸದ ಅಂಗವಾಗಿ ಸಾರಿಗೆ ಸಂಸ್ಥೆಯಿಂದ ಧರ್ಮಸ್ಥಳಕ್ಕೆ ನೂತನ ಬಸ್ ಆರಂಭಿಸಲಾಗಿದೆ. ಭಕ್ತರು ಸದುಪಯೋಗ ಪಡೆಯಬೇಕು ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಇಲ್ಲಿನ ಸಾರಿಗೆ ಸಂಸ್ಥೆಯ ಘಟಕದಲ್ಲಿ ಗುರುವಾರ ನೂತನವಾಗಿ ಬಾದಾಮಿ- ಧರ್ಮಸ್ಥಳಕ್ಕೆ ಸಂಚರಿಸುವ ಬಸ್‌ಗೆ ಅವರು ಚಾಲನೆ ನೀಡಿದರು.
ಬಾದಾಮಿಯಿಂದ ಸಂಜೆ 4.30ಕ್ಕೆ ಬಿಟ್ಟು ರೋಣ, ಗದಗ, ಹಾನಗಲ್, ಶಿರಸಿ, ಕುಮಟಾ, ಉಡುಪಿ, ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಬೆಳಿಗ್ಗೆ 6 ತಲುಪುವುದು. ಅದೇ ಮಾರ್ಗವಾಗಿ ಸಂಜೆ 5ಕ್ಕೆ ಧರ್ಮಸ್ಥಳ ಬಿಟ್ಟು ಬೆಳಿಗ್ಗೆ 6 ಗಂಟೆಗೆ ಬಾದಾಮಿಗೆ ತಲುಪಲಿದೆ ಎಂದು ಘಟಕ ವ್ಯವಸ್ಥಾಪಕ ತಿಳಿಸಿದರು.
ಮಂಜು ಹೊಸಮನಿ, ಶಿವು ಹಿರೇಮಠ, ರಜಾಕ್ ರಾಜೂರ, ಬಾಲಪ್ಪ ಬಂಕನೇರಿ, ಯಲ್ಲಪ್ಪ ಹೊರಪೇಟಿ, ಬಬ್ಲು ನಾಯಕ, ಎಂ.ಎಂ. ದೊಡಮನಿ, ಘಟಕ ವ್ಯವಸ್ಥಾಪಕ ಕೃಷ್ಣ ಚಹ್ವಾಣ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.