ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಯ ನಟರಾಜನ ಮೂರ್ತಿ ಶಿಥಿಲ

ಶೀಘ್ರ ದುರಸ್ತಿ ಕೈಗೊಳ್ಳಲು ಪ್ರವಾಸಿಗರ ಒತ್ತಾಯ
Published 18 ಮೇ 2024, 13:08 IST
Last Updated 18 ಮೇ 2024, 13:08 IST
ಅಕ್ಷರ ಗಾತ್ರ

ಬಾದಾಮಿ: ‘ಚಾಲುಕ್ಯರ ಸ್ಮಾರಕ, ಮೊದಲ ಬಸದಿಯಲ್ಲಿರುವ ನಟರಾಜನ ಮೂರ್ತಿಯು ದುರಸ್ತಿಯಲ್ಲಿದ್ದು, ಬಟ್ಟೆಯಿಂದ ಮುಚ್ಚಲಾಗಿದೆ.

ಮೂರ್ತಿಯನ್ನು ಬೇಗ ದುರಸ್ತಿ ಮಾಡಿ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕೆಂದು ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗೆ ಒತ್ತಾಯಿಸಿದ್ದಾರೆ.

ನಟರಾಜನ ಮೂರ್ತಿಯು ಮಳೆಗಾಳಿ ಬಿಸಿಲಿನಿಂದ ಶಿಥಿಲಗೊಂಡಿದ್ದು, ನಾಲ್ಕು ತಿಂಗಳಿನಿಂದ ದುರಸ್ತಿ ಕಾರ್ಯ ನಡೆದಿದೆ. ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವರು. ಪ್ರವಾಸಿಗರು ಬಟ್ಟೆಯನ್ನು ನೋಡಿ ಇಲ್ಲೇನಿದೆ, ಬಟ್ಟೆ ಯಾಕೆ ಮುಚ್ಚಿದ್ದಾರೆ? ಎಂದು ಕುತೂಹಲದಿಂದ ವೀಕ್ಷಿಸುವಂತಾಗಿದೆ.

‘ಮೊದಲ ಬಸದಿಯ ಪೂರ್ವದಿಕ್ಕಿನ ಬಂಡೆಯಲ್ಲಿ 18 ಕೈಗಳುಳ್ಳ ನಟರಾಜ ಮೂರ್ತಿಯು ವಿಶ್ವದಲ್ಲಿಯೇ ಅತ್ಯಂತ ಆಕರ್ಷಕ ಮೂರ್ತಿಯಾಗಿದೆ. ಪ್ರವಾಸಿಗರು ಆಕರ್ಷಕ ಮೂರ್ತಿಯನ್ನು ವೀಕ್ಷಿಸಲು ಬೇಗ ದುರಸ್ತಿ ಮಾಡಿಸಬೇಕು’ ಎಂದು ಕೂಡ್ಲಗಿ ಪ್ರವಾಸಿಗ ಬಸವರಾಜ ಪಾಟೀಲ ಶನಿವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದುರಸ್ತಿ ಕಾಮಗಾರಿ ಶೇ 80 ರಷ್ಟು ಮುಗಿದಿದೆ. ಭಾರತೀಯ ಪುರಾತತತ್ವ ಇಲಾಖೆಯ ವಿಜ್ಞಾನ ವಿಭಾಗದ ಸಿಬ್ಬಂದಿ ದುರಸ್ತಿ ಮಾಡಬೇಕಿದೆ. ಪತ್ರನ್ನೂ ಬರೆಯಲಾಗಿದೆ. ದುರಸ್ತಿಯಾದ ಕೂಡಲೇ ಬಟ್ಟೆ ತೆರವು ಮಾಡಲಾಗುವುದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾ ಅಧಿಕಾರಿ ಟಿ.ಎನ್. ಉಮೇಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT