ಬಾಗಲಕೋಟೆ: ‘ಹೋರಿಗಳಿಗೆ ಬೆಲೆ ಐತಿ. ಎತ್ತುಗಳನ್ನು ಕೇಳುವವರ ಸಂಖ್ಯೆ ಕಡಿಮಿ ಅದ. ಎರಡೂ ಈಗಾಗಲೇ ಜಾತ್ರೆಗೆ ಬಂದಾವ. ನಾಳಿಗಿ ಇನ್ನಷ್ಟು ಬರಬಹುದು’

ಹೀಗೆಂದು ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಗೆ ಎತ್ತುಗಳನ್ನು ಮಾರಾಟಕ್ಕೆ ತಂದಿರುವ ಅಚನೂರ ಗ್ರಾಮದ ರೈತ ಹನುಮಂತ ವಿವರಿಸಿದರು.

‘ಜೋಡೆತ್ತಿಗೆ ₹1.40 ಲಕ್ಷ ಹೇಳಿನ್ರಿ. ಲಕ್ಷದೊಳಗ ಕೇಳಕತ್ತಾರ. ಎಲ್ಲ ಟ್ರ್ಯಾಕ್ಟರ್ ಮ್ಯಾಲ ಒಕ್ಕಲತನ ಮಾಡತಾರ. ಹಿಂಗಾಗಿ ಎತ್ತಿಗೆ ಬೆಲೆ ಕಡಿಮೆ ಆಗ್ಯದ. ಬ್ಯಾರೆ ಎಲ್ಲ ವಸ್ತುಗಳ ಬೆಲೆಗಳು ಮಾತ್ರ ವರ್ಸದಿಂದ ವರ್ಸಕ್ಕೆ ಹೆಚ್ಚು ಆಗತಾವ. ಆದ್ರ, ರೈತನ ಉತ್ಪನ್ನ, ಜಾನುವಾರುಗಳ ಬೆಲೆ ಮಾತ್ರ ಹೆಚ್ಚಾಗಂಗಿಲ್ಲ’ ಎಂದರು.

‘ಈ ಹೋರಿಗಳು ಮನ್ಯಾಗ ಹುಟ್ಟಿ ಬೆಳದಾವ. ಇನ್ನೊಂದು ಜತಿ ಕರು ಮನ್ಯಾಗ ಅದಾವ. ಅದಕ್ಕ ಇವನ್ನ ಮಾರೋಣ ಅಂತ ಮಾರುಕಟ್ಟೆಗೆ ಬಂದಿವಿ. ಚಲೋ ಬೆಲಿಗಿ ಹೋಗತಾವ ಅನ್ನು ಗ್ಯಾರಂಟಿ ಅದ’ ಎಂದರು ಕೆರೂರಿನ ರೈತ ಜಗದೀಶ ದೊಡ್ಡಮನಿ.

ಮಳಿ, ಬೆಳಿ ಚೆನ್ನಾಗಿ ಆಗೆದ. ಆದ್ರೂ ಎತ್ತಿಗೆ ಕಡಿಮಿ ಕಿಮ್ಮತ್ತ ಕಟ್ಟಾಕತ್ತಾರ. ನಾವ ಹೇಳಿದ್ದಕ್ಕ ಅರ್ಧಕರ್ಧ ಕಡಿಮಿಗೆ ಕೇಳಾತರ. ಚೆಂದನಾಗಿ ಮೇಯ್ಸಿದ ಎತ್ತು ಅಡ್ಡಾ–ದಿಡ್ಡಿ ಬೆಲೆಗೆ ಕೊಟ್ಟು ಹೋಗೋದು ಹ್ಯಾಂಗ್’ ಎನ್ನುವುದು ರೈತರ ಮಾತು.

‘ಗಳೆವೆಲ್ಲ ಮುಗಿದಾವು. ಹೊಲದಾಗ ಈಗ ಕೆಲಸಿಲ್ಲ. ಮಳಿ ಬರಾತನ ಮೇಯ್ಸಿಗೊಂಡಿರಬೇಕ. ಈಗಂತೂ ಮಾರಾದ. ಮುಂದ ಮಳಿ ಆದ ಮ್ಯಾಲೆ ಮತ್ತೆ ಹೊಸ ಜೋಡಿ ತಗೊಂಡರಾತು’ ಎಂದು ಗುಡೂರಿನ ರೈತ ಮಹಾದೇವಪ್ಪ ಹೇಳಿದರು.

ಶುಕ್ರವಾರದಿಂದ ಆರಂಭವಾಗಿರುವ ಜಾನುವಾರು ಜಾತ್ರೆಗೆ ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಯ ರೈತರು ಸಾವಿರಾರು ಸಂಖ್ಯೆಯಲ್ಲಿ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ.

‘ನಮ್ಮೂರಾಗ ಆಗ ಬಹುತೇಕ ಮನೆಗಳಲ್ಲಿ ಎತ್ತುಗಳಿದ್ದವು. ಈಗ ಬೆರಳೆಣಿಕೆ ಸಂಖ್ಯೆ ರೈತರ ಮನೆಯಲ್ಲಿ ಜಾನುವಾರುಗಳಿವೆ. ಸೆಗಣಿಯಂತಹ ಗೊಬ್ಬರನಾ ಇಲ್ಲ. ಆದ್ರ, ಜಾನುವಾರುಗಳಿಲ್ಲದ್ದರಿಂದ ಅಂಗಡ್ಯಾಗ ರಸಗೊಬ್ಬರ ತಂದು ಹಾಕಂಗಾಗೈತಿ’ ಎಂದು ರೈತರು ಹೇಳಿದರು.

ಎತ್ತು ಹೋರಿಗಳನ್ನು ರೈತರು ನಿನ್ನೆಯಿಂದಲೇ ತರುತ್ತಿದ್ದಾರೆ. ಜಾಗವನ್ನು ಸ್ವಚ್ಛಗೊಳಿಸಿ ಕೊಡಲಾಗಿದೆ. ಜಾನುವಾರುಗಳ ಜತೆಗೆ ರೈತರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ
ವಿ.ಡಿ.ಪಾಟೀಲ ಎಪಿಎಂಸಿ ಕಾರ್ಯದರ್ಶಿ

ಸ್ಪರ್ಧೆ; ಬಹುಮಾನ

ಬಾಗಲಕೋಟೆ: ಜಾನುವಾರು ಜಾತ್ರೆಗೆ ಬರುವ ರೈತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಉತ್ತಮ ಜಾನುವಾರು ಸ್ಪರ್ಧೆ ಏರ್ಪಡಿಸಲಾಗಿದ್ದು ಬಹುಮಾನ ನೀಡಲಾಗುತ್ತದೆ. ಹಾಲಹಲ್ಲು ಹೋರಿ ವಿಭಾಗದಲ್ಲಿ ₹10 ಸಾವಿರ (ಪ್ರಥಮ) ₹7500 (ದ್ವಿತೀಯ) ₹5 ಸಾವಿರ ತೃತೀಯ ಬಹುಮಾನ ನೀಡಲಾಗುತ್ತದೆ. ಇದಲ್ಲದೇ ಎರಡು ಹಲ್ಲು ನಾಲ್ಕು ಹಲ್ಲು ಆರು ಹಲ್ಲು ಜೋಡು ಎತ್ತು ಕಿಲಾರಿ ಆಕಳು ಜವಾರಿ ಆಕಳುಗಳಿಗೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದ ಜಾನುವಾರುಗಳ ಮಾಲೀಕರಿಗೆ 10 ತೊಲಿ 8 ತೊಲಿ 5 ತೊಲಿ ಬೆಳ್ಳಿಯ ಖಡೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.