ಭಾನುವಾರ, ಜೂನ್ 26, 2022
26 °C
ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ

ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ನಗೆ ಬೀರಿದ ಉಮ್ಮೇಸಾರಾ, ಮೇಘಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವಕ್ಕೆ ಬುಧವಾರ ಬೆಳಿಗ್ಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಸಮಾರಂಭದಲ್ಲಿ 680 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಅವರಲ್ಲಿ 475 ಪದವಿ, 137 ಸ್ನಾತಕೋತ್ತರ ಹಾಗೂ 45 ಪಿಎಚ್ ಡಿ ವಿದ್ಯಾರ್ಥಿಗಳು ಸೇರಿದ್ದಾರೆ.

ಇದೇ ವೇಳೆ ಮಾಜಿ ಸಚಿವರೂ ಆದ ಹಿರಿಯೂರಿನ ಪ್ರಗತಿ ಪರ ರೈತ ಎಚ್. ಏಕಾಂತಯ್ಯ ಅವರಿಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ರಾಜ್ಯಪಾಲರು ಪ್ರದಾನ ಮಾಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮಾರಂಭದಲ್ಲಿ ಜಲ ತಜ್ಞ ರಾಜಸ್ತಾನದ ಡಾ. ರಾಜೇಂದ್ರ ಸಿಂಗ್ ಪ್ರಧಾನ ಭಾಷಣ ಮಾಡಿದರು.

ಓದಿ... ಬೆಂಗಳೂರು: ಗೋಡೆಗಳ ಮೇಲೆ ‘Sorry’ ಬರಹ: ಸಿಸಿಟಿವಿಯಲ್ಲಿ ಇಬ್ಬರ ಗುರುತು ಪತ್ತೆ

ಚಿನ್ನದ ಹುಡುಗಿ ಉಮ್ಮೇಸಾರಾ: ಘಟಿಕೋತ್ಸವದಲ್ಲಿ ಚಿಕ್ಕಮಗಳೂರು ತಾಲ್ಲೂಕು ಕಾರೇಹಟ್ಟಿಯ ಉಮ್ಮೇಸಾರಾ ಅಸ್ಮತ್ ಅಲಿ ಬಿಎಸ್ಸಿ ತೋಟಗಾರಿಕೆ ವಿಷಯದಲ್ಲಿ 16 ಚಿನ್ನದ ಪದಕ ಹಾಗೂ ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ಹಾಸನದ ಮೇಘಾ ಅರುಣ್ ನಾಲ್ಕು ಚಿನ್ನದ ಪದಕಗಳ ಪಡೆದು ಗಮನ ಸೆಳೆದರು.

ಉಮ್ಮೇಸಾರಾ, ಮೇಘಾ ಅರುಣ್ ಸೇರಿದಂತೆ ಒಟ್ಟು 18 ಪದವಿ ವಿದ್ಯಾರ್ಥಿಗಳು, 12 ಸ್ನಾತಕೋತ್ತರ ಹಾಗೂ ನಾಲ್ವರು ಪಿಎಚ್ ಡಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು.

ತೋಟಗಾರಿಕೆ ಸಚಿವ ಮುನಿರತ್ನ, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ಪಾಲ್ಗೊಂಡಿದ್ದರು.

ಓದಿ... ಮಳಲಿ ಜುಮ್ಮಾ ಮಸೀದಿ ಗೊಂದಲ: ಗುರು ಸಾನ್ನಿಧ್ಯ ಗೋಚರ ಎಂದ ಕೇರಳ ಜ್ಯೋತಿಷಿ

16 ಚಿನ್ನದ ಪದಕ ಪಡೆದ ಉಮ್ಮೇಸಾರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು